ETV Bharat / state

ಕಾಂಗ್ರೆಸ್ ಪಕ್ಷ ಮನೆಗೆ ಮಗನೂ ಆಗಲಿಲ್ಲ, ಸ್ಮಶಾನಕ್ಕೆ ಹೆಣವೂ ಆಗಲಿಲ್ಲ: ಸಿ ಟಿ ರವಿ ಕಿಡಿ - ಸಿಟಿ ರವಿ ಟೂಲ್ ಕಿಟ್ ಹೇಳಿಕೆ

ಕಾಂಗ್ರೆಸ್ ಪಕ್ಷ ಮನೆಗೆ 'ಮಗನೂ ಆಗಲಿಲ್ಲ, ಸ್ಮಶಾನಕ್ಕೆ ಹೆಣವೂ ಆಗಲಿಲ್ಲ' ಎಂದು ಸಿಟಿ ರವಿ ಬಹಳ ಕಟುವಾಗಿ ಟೀಕಿಸಿದ್ದಾರೆ. ನರೇಂದ್ರ ಮೋದಿ ಹಾಗೂ ಬಿಜೆಪಿಯ ಜನಪ್ರಿಯತೆಗೆ ಕುಂದು ತರಲು ಹೇಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದೆ ಎಂಬುದನ್ನು ನಾವೆಲ್ಲರೂ ಗಮನಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ravi
ravi
author img

By

Published : May 18, 2021, 9:42 PM IST

ಬೆಂಗಳೂರು: 'ಮನೆಗೆ ಮಗನೂ ಆಗಲಿಲ್ಲ ಸ್ಮಶಾನಕ್ಕೆ ಹೆಣವೂ ಆಗಲಿಲ್ಲ' ಎನ್ನುವಂತಹ ಒಂದು ರಾಜಕೀಯ ಪಕ್ಷ ನಮ್ಮ ದೇಶದಲ್ಲಿ ಇದ್ದರೆ, ಅದು ಕಾಂಗ್ರೆಸ್. ಜನ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಮೂಲೆಗುಂಪು ಮಾಡಿದ್ದರು ಅವರಿಗಿನ್ನು ಬುದ್ಧಿ ಬಂದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಟುವಾಗಿ ಟೀಕಿಸಿದ್ದಾರೆ.

ಫೇಸ್​ಬುಕ್​ ಪೋಸ್ಟ್​ನಲ್ಲಿ ಅವರು, ಕಾಂಗ್ರೆಸ್ ಭಾರತ ದೇಶಕ್ಕೆ, ದೇಶದ ಜನರಿಗೆ ದೇಶ ವಿದೇಶದಲ್ಲಿ ಅಪಪ್ರಚಾರ ಮಾಡಲು ತಯಾರಿಸಿದ ಟೂಲ್ ಕಿಟ್ ಇಲ್ಲಿದೆ ನೋಡಿ. ತನ್ನ ಸ್ವ ಸಾಮರ್ಥ್ಯದಿಂದ ಏನನ್ನೂ ಮಾಡಲಾಗದ ಈ ಪಕ್ಷ ದೇಶ ವಿದೇಶಗಳಲ್ಲಿ ಹೆಚ್ಚುತ್ತಿರುವ ಭಾರತದ ಲೋಕಪ್ರಿಯತೆ ಹಾಗೂ ಶಕ್ತಿಯನ್ನು ಕುಂದಿಸುವ ನಿಟ್ಟಿನಲ್ಲಿ ಮತ್ತು ನರೇಂದ್ರ ಮೋದಿ ಹಾಗೂ ಬಿಜೆಪಿಯ ಜನಪ್ರಿಯತೆಗೆ ಕುಂದು ತರಲು ಹೇಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದನ್ನು ನಾವೆಲ್ಲರೂ ಗಮನಿಸಬೇಕು ಎಂದು ಆರೋಪಿಸಿದ್ದಾರೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಮೋದಿಜಿ ಅವರ ನೇತೃತ್ವದ ಸರ್ಕಾರದ ವಿರುದ್ಧ ಜನರಲ್ಲಿ ಅವಿಶ್ವಾಸ ಮೂಡಿಸಿ, ದೇಶಾದ್ಯಂತ ದಂಗೆ ಎಬ್ಬಿಸುವ ಉದ್ದೇಶದಿಂದ ಮಾಡಿದ ಈ ಟೂಲ್ ಕಿಟ್, ದೇಶದ ಅಮಾಯಕ ಜನರ ಪ್ರಾಣದ ಜೊತೆ ಚೆಲ್ಲಾಟ ಆಡಿದೆ. ಈ ಕೋವಿಡ್ ಸಂದರ್ಭದಲ್ಲಿ ಜನರ ಪ್ರಾಣ ರಕ್ಷಣೆ ಮಾಡುವಲ್ಲಿ ಸರ್ಕಾರದ ಜೊತೆ ಇರಬೇಕಾದ ವಿರೋಧ ಪಕ್ಷ, ತನ್ನ ಕುಕೃತ್ಯಗಳ ಮುಖೇನ ಜನರ ಜೀವಗಳಿಗೆ ಯಮನಾಗಿದ್ದು ದೌರ್ಭಾಗ್ಯವೇ ಹೊರತು ಬೇರೆ ಏನಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಲಸಿಕೆ ನಾವೇ ಕೊಡುತ್ತೇವೆ ಎಂಬ ಕಾಂಗ್ರೆಸ್​ ರಾಜ್ಯಾಧ್ಯಕ್ಷನ ಹೇಳಿಕೆ, ಅತ್ತೆಯ ಹಣವನ್ನು ಅಳಿಯ ದಾನ ಮಾಡಿದ ಅನ್ನುವ ಹಾಗೆ, ಸರ್ಕಾರದ ನೂರು ಕೋಟಿ ಹಣವನ್ನು ಸರ್ಕಾರಕ್ಕೆ ಕೊಡುತ್ತೇವೆ ಎಂಬ ಸಿದ್ದರಾಮಯ್ಯ ಅವರ ಹಗಲು ನಾಟಕ, ಬೆಡ್​ಗಳನ್ನು ಬ್ಲಾಕ್ ಮಾಡಿ ತಮ್ಮ ಕಾಲು ಹಿಡಿದವರಿಗೆ ನೀಡುವ ಯೋಜನೆಗಳು, ದೆಹಲಿಯಲ್ಲಿ ಶ್ರೀನಿವಾಸನೆಂಬ ಯೂತ್ ಕಾಂಗ್ರೆಸ್ ಅಧ್ಯಕ್ಷ ಆಕ್ಸಿಜನ್ ಸಿಲಿಂಡರ್ ಹಿಡಿದು ಸುತ್ತಾಡಿದ್ದು, ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷನ ನೇತೃತ್ವದಲ್ಲಿ ಸ್ಟಿರಾಯ್ಡ್ ಮಾತ್ರೆಗಳನ್ನು ಕೊರೊನಾ ಕಿಟ್ ಎಂದು ಹಂಚಿದ್ದು, ವಿಧಾನಸೌಧದ ಮುಂದೆ ನಲಪಾಡ್ ಎಂಬ ಯೂತ್ ಕಾಂಗ್ರೆಸ್​ ನಾಯಕನೊಬ್ಬ ಆ್ಯಂಬುಲೆನ್ಸ್​ ಸ್ಟಂಟ್ ಮಾಡಿದ್ದು ಇವೆಲ್ಲವೂ ಈ ಟೂಲ್ ಕಿಟ್ ಎಂಬ ಮಹಾ ನಾಟಕದ ಭಾಗವೇ ಹೊರತಾಗಿ ಬೇರೆ ಏನೂ ಅಲ್ಲ ಎಂದು ಆರೋಪಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲೊಂದು ಇಸ್ರೇಲ್ ಎನ್ನುವ ಪುಟ್ಟ ರಾಷ್ಟ್ರವಿದೆ. ಆ ರಾಷ್ಟ್ರದ ವಿರೋಧ ಪಕ್ಷ ತನ್ನ ರಾಷ್ಟ್ರಕ್ಕಾಗಿ, ತನ್ನ ರಾಷ್ಟ್ರದ ಮಾನ, ಸಮ್ಮಾನದ ರಕ್ಷಣೆಗಾಗಿ ಸರ್ಕಾರದ ಜೊತೆ ನಿಂತು ಕೆಲಸ ಮಾಡುವುದನ್ನು ನೋಡಿದಾಗ ,ಈ ಮೇಲೆ ಹೇಳಿದ ಮಾತು ನಿಜ ಎನ್ನಿಸುತ್ತದೆ. ಕಾಂಗ್ರೆಸ್ ಪಕ್ಷ ಮನೆಗೆ ಮಗನೂ ಆಗಲಿಲ್ಲ, ಸ್ಮಶಾನಕ್ಕೆ ಹೆಣವೂ ಆಗಲಿಲ್ಲ ಎಂದು ಕಿಡಿಕಾರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.