ಆನೇಕಲ್: ತಮಿಳುನಾಡಿನ ಸತ್ಯಮಂಗಲ ಅರಣ್ಯದಲ್ಲಿ ಅಪರೂಪದ ಕಪ್ಪು ಚಿರತೆ ಪತ್ತೆಯಾಗುವ ಮೂಲಕ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೆ ಆನೆ ಹಾವಳಿಗೆ ತತ್ತರಿಸಿದ್ದ ಜನ ಇದೀಗ ಕರಿ ಚಿರತೆ ಕಂಡು ಹೌಹಾರಿದ್ದಾರೆ. ಅದಕ್ಕೂ ಮುನ್ನ ಆಗಾಗ ಕಾಡು ಕೋಣಗಳು ಪತ್ತೆಯಾಗುತ್ತಿದ್ದವು. ಇದೀಗ ಕರಿ ಚಿರತೆ ಪತ್ತೆಯಾಗಿದ್ದು, ಕಾಡಿನ ಸುತ್ತಲ ಗ್ರಾಮಗಳಲ್ಲಿ ಆತಂಕ ಮಡುಗಟ್ಟಿದೆ.
ಬೆಂಗಳೂರಿನ ದಂಪತಿ ಅಪರೂಪದ ಕಪ್ಪು ಚಿರತೆಯನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ತಮಿಳುನಾಡಿನ ನೀಲಗಿರಿ, ಬಂಡೀಪುರ, ವಯನಾಡು, ಸುತ್ತಮುತ್ತ ಈ ಕಪ್ಪು ಚಿರತೆ ಕಂಡು ಬಂದಿದೆ. ಸದ್ಯ ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.