ನೆಲಮಂಗಲ: ಸೋಂಪುರ ಹೋಬಳಿಯ ವೀರಸಾಗರ ನಿವಾಸಿ 55 ವರ್ಷದ ಮಹಿಳೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ತುಮಕೂರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಸ್ಪತ್ರೆಯಲ್ಲಿ ತಪಾಸಣೆ ವೇಳೆ, ಕೊರೊನಾ ಪಾಸಿಟಿವ್ ಬೆಳಕಿಗೆ ಬಂದಿದೆ. ಸೋಂಕಿತ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 12 ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಆಕೆ ಮನೆಯ ಸುತ್ತಲಿನ ನಾಲ್ಕು ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ.
![nelamangala](https://etvbharatimages.akamaized.net/etvbharat/prod-images/kn-bng-02-nelamangala-av-7208821_22052020174056_2205f_1590149456_568.jpg)
ವೀರಸಾಗರ ಗ್ರಾಮವನ್ನು ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ, ಗ್ರಾಮಕ್ಕೆ ಪೊಲೀಸ್ ಮತ್ತು ವೈದ್ಯರು ಆಗಮಿಸಿದ್ದು, ಗ್ರಾಮಸ್ಥರ ತಪಾಸಣೆ ಮಾಡುತ್ತಿದ್ದಾರೆ. ಈ ಮಧ್ಯೆ ಸೋಂಕಿತೆ ನೆಲಮಂಗಲ, ದಾಬಸ್ ಪೇಟೆ, ಊರ್ಡಿಗೆರೆ ಸೇರಿದಂತೆ ವಿವಿಧೆಡೆ ಸಂಚರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.