ETV Bharat / state

ಎಫ್​ಐಆರ್​ ದಾಖಲಿಸಲು ಹಿಂದೇಟು: ಹಲಸೂರು ಗೇಟ್ ಎಸಿಪಿ ವಿರುದ್ಧ ಡಿಜಿಪಿಗೆ ದೂರು - ಹಲಸೂರು ಗೇಟ್ ಎಸಿಪಿ

ಪ್ರಭಾವಕ್ಕೊಳಗಾಗಿ ಹಲ್ಲೆ ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಿಸದ ಆರೋಪದಲ್ಲಿ ಬೆಂಗಳೂರು ಹಲಸೂರು ಗೇಟ್ ಎಸಿಪಿ ವಿರುದ್ಧ ಪೊಲೀಸ್‌ ಮಹಾನಿರ್ದೇಶಕರಿಗೆ (ಡಿಜಿಪಿ)ಗೆ ದೂರು ನೀಡಲಾಗಿದೆ.

Complaint to DGP against Bengaluru Ulsoor Gate ACP
ಎಸಿಪಿ ವಿರುದ್ಧ ದೂರು
author img

By

Published : Jun 13, 2021, 12:37 PM IST

Updated : Jun 13, 2021, 12:58 PM IST

ಬೆಂಗಳೂರು: ಪ್ರಥಮ ವರ್ತಮಾನ ವರದಿ(ಎಫ್‌ಐಆರ್‌) ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ಹಲಸೂರು ಗೇಟ್ ಎಸಿಪಿ ನಜ್ಮಾ ಫಾರೂಖಿ ವಿರುದ್ಧ ಡಿಜಿ, ಐಜಿಪಿ ಪ್ರವೀಣ್ ಸೂದ್​ಗೆ ಇಮ್ರಾನ್ ಷರೀಫ್ ಎಂಬುವರು ದೂರು ನೀಡಿದ್ದಾರೆ. ಇಮ್ರಾನ್​ ಷರೀಫ್ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ದೂರು ನೀಡಿದರೂ, ಎಸಿಪಿ ನಜ್ಮಾ ಎಫ್​ಐಅರ್ ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಲಾಗಿದೆ.

ನಗರದ ಎಸ್​ಪಿ ರಸ್ತೆ ನಿವಾಸಿಯಾಗಿರುವ ಉದ್ಯಮಿ ಇಮ್ರಾನ್ ಷರೀಫ್ ಅವರ ಸಹೋದರ ಇನಾಯಿತ್ ಷರೀಫ್ ಬಳಿ ಫೈಝಲ್ ಎಂಬಾತ 7.5 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಆದರೆ, ಸಾಲ ವಾಪಸ್ ನೀಡದೆ ಫೈಝಲ್ ಸತಾಯಿಸುತ್ತಿದ್ದ. ಮೇ 15 ರಂದು ಬೆಳಗ್ಗಿನ ಜಾವ ಹಣ ಹಿಂತಿರುಗಿ ಕೊಡುವುದಾಗಿ ಫೈಝಲ್ ಕರೆ ಮಾಡಿದ್ದ. ಹಣ ಪಡೆದುಕೊಳ್ಳಲು ಅಣ್ಣ ಇನಾಯತ್ ಬದಲಾಗಿ ಇಮ್ರಾನ್ ಅವರು ಹೋಗಿದ್ದರು.

ಈ ವೇಳೆ ಇಮ್ರಾನ್ ಮೇಲೆ ಫೈಝಲ್ ಮತ್ತು ಆತನ ಸಹಚರರು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

Complaint to DGP against Bengaluru Ulsoor Gate ACP
ಡಿಜಿ ಐಜಿಪಿಗೆ ಇಮ್ರಾನ್ ಷರೀಫ್ ನೀಡಿದ ದೂರಿನ ಪ್ರತಿ

ತನ್ನ ಮೇಲೆ ಫೈಝಲ್ ಮತ್ತು ತಂಡದವರು ಹಲ್ಲೆ ನಡೆಸಿರುವುದಾಗಿ ಇಮ್ರಾನ್ ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು. ದೂರು ಪಡೆದು ಎಫ್​ಐಆರ್ ದಾಖಲಿಸಬೇಕಿದ್ದ ಎಸಿಪಿ ನಜ್ಮಾ ಫಾರೂಖಿ ಆರೋಪಿಗಳ ಪ್ರಭಾವಕ್ಕೊಳಗಾಗಿ ಎನ್​ಸಿಆರ್ ದಾಖಲಿಸಿದ್ದಾರೆ ಎಂದು ದೂರಿದ್ದಾರೆ.

ಮೇ 19 ರಂದು ನನ್ನನ್ನು ಕಚೇರಿಗೆ ಕರೆಸಿಕೊಂಡ ಎಸಿಪಿ ನಜ್ಮಾ ಹಲ್ಲೆಗೊಳಗಾದ ನನಗೇ ಬೈದು, ಆರೋಪಿಗಳ ವಿರುದ್ದ ಎಫ್​ಐಆರ್ ದಾಖಲಿಸದಂತೆ ಇನ್​​ಸ್ಪೆಕ್ಟರ್​ಗೆ ಸೂಚಿಸಿದ್ದಾರೆ. ಹಾಗಾಗಿ ಎಸಿಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಮ್ರಾನ್ ಶರೀಫ್ ಡಿಜಿ ಐಜಿಪಿ ಪ್ರವೀಣ್ ಸೂದ್​ಗೆ ದೂರು ನೀಡಿದ್ದಾರೆ.

Last Updated : Jun 13, 2021, 12:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.