ETV Bharat / state

ಬೃಹತ್ ಕೃಷಿ ಮೇಳ ಉದ್ಘಾಟಿಸಿದ ಸಿಎಂ: ಹೊಸಕೋಟೆ ಉಪ ಚುನಾವಣೆಗೆ ಎಂಟಿಬಿ ಭರ್ಜರಿ ತಯಾರಿ

ಹೊಸಕೋಟೆ ಉಪ ಚುನಾವಣೆ ಸಮೀಪಿಸುತ್ತಿರುವಂತೆ ಎಂಟಿಬಿ ನಾಗರಾಜ್ ಭರ್ಜರಿ ತಯಾರಿ ನಡೆಸಿದ್ದಾರೆ.

ಎಂಟಿಬಿ
author img

By

Published : Oct 23, 2019, 5:47 AM IST

ಬೆಂಗಳೂರು: ಬ್ಯಾಂಕ್ ಆಫ್ ಬರೋಡ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ಬೃಹತ್ ಕೃಷಿ ಮೇಳ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪನವರನ್ನ ಮುಖ್ಯ ಅತಿಥಿಯಾಗಿ ಆಹ್ವಾನಿಸಿ, ದೀಪ ಬೆಳಗಿಸುವ ಮೂಲಕ ತನ್ನ ವಿರೋಧಿ ಬಣ ಶರತ್ ಬಚ್ಚೆಗೌಡರಿಗೆ ಎಂಟಿಬಿ ಟಾಂಗ್ ನೀಡಿದ್ದಾರೆ.

ಹೊಸಕೋಟೆ ಸಮೀಪದ ಕಾಟಂನಲ್ಲೂರು ಬಳಿ ಜರುಗಿದ ಬೃಹತ್ ಕೃಷಿ ಮೇಳದ ವೇದಿಕೆ ಮೇಲೆ ಸಿಎಂ ಯಡಿಯೂರಪ್ಪ ಮತ್ತು ಡಿಸಿಎಂ ಅಶ್ವಥ್ ನಾರಾಯಣ್ ನಡುವೆ ಕುಳಿತುಕೊಂಡಿದ್ದು ಎಂಟಿಬಿ ನಾಗರಾಜ್​ ಮುಂದಿನ ಉಪ ಚುನಾವಣೆಗೆ ನಾನೇ ಬಿಜೆಪಿ ಅಭ್ಯರ್ಥಿ ಎಂಬುದನ್ನು ಕ್ಷೇತ್ರದ ಜನರಿಗೆ ತಿಳಿಸುವಂತಿತ್ತು.

ದೀಪ ಬೆಳಗುವುದರ ಮೂಲಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ, ರಾಜ್ಯ ಬಿಜೆಪಿ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರದ ಪಿಎಂ ಕಿಸಾನ್ ಯೋಜನೆ ಅಡಿ ರೈತರಿಗೆ ನಾಲ್ಕು ಸಾವಿರ ಹೆಚ್ಚುವರಿ ಧನ ಸಹಾಯ ನೀಡಲಾಗುತ್ತಿದೆ. ನೆರೆಯಿಂದ ಮನೆಗಳು ನಾಶವಾದ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಲಾಗಿದೆ. ಜೊತೆಗೆ ತಕ್ಷಣಕ್ಕೆ 5 ಸಾವಿರ ಪ್ರತಿ ಕುಟುಂಬಕ್ಕೆ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಬೃಹತ್ ಕೃಷಿ ಮೇಳ ಉದ್ಘಾಟಿಸಿದ ಸಿಎಂ

ಇನ್ನೂ ರೈತರಿಗೆ ಕ್ರೆಡಿಟ್ ಕಾರ್ಡ್ ನೀಡುವ ಮೂಲಕ ಬ್ಯಾಂಕ್ ಬರೋಡ ಸಹ ರೈತರಿಗೆ ನೆರವು ನೀಡುತ್ತಿದೆ. ಸಿಎಸ್ಆರ್ ನಿಧಿ ಅಡಿಯಲ್ಲಿ ಬ್ಯಾಂಕ್ ಆಫ್ ಬರೋಡ ಸಿಎಂ ಪ್ರಕೃತಿ ವಿರೋಪ ನಿಧಿಗೆ ಐದು ಕೋಟಿ ನೆರವು ನೀಡಿರುವುದು ಶ್ಲಾಘನೀಯ ಎಂದ ಸಿಎಂ ಮುಂದಿನ ಸೋಮವಾರ ಹೊಸಕೋಟೆ ತಾಲ್ಲೂಕಿನ ಜಡಿಗೇನಹಳ್ಳಿ ಮತ್ತು ಅನುಗೊಂಡಹಳ್ಳಿ ಹೋಬಳಿ ವ್ಯಾಪ್ತಿಯ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಚಾಲನೆ ದೊರೆಯಲಿದ್ದು, ಎಂಬಿಟಿ ನಾಗರಾಜ್ ರವರ ನಿರಂತರ ಶ್ರಮದ ಫಲವಾಗಿ ಸುಮಾರು 110 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಹೊಸಕೋಟೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ರವರನ್ನ ಸಿಎಂ ಯಡಿಯೂರಪ್ಪ ಹಾಡಿ ಹೊಗಳಿದ್ದಾರೆ.

ಬೃಹತ್ ಕೃಷಿಮೇಳದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ಡಿಸಿಎಂ ಅಶ್ವಥ್ ನಾರಾಯಣ್, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ಕೋಲಾರ ಸಂಸದ ಮುನಿಸ್ವಾಮಿ ಉಪಸ್ಥಿತರಿದ್ದರು. ಆದರೆ ಪಕ್ಕದ ಕ್ಷೇತ್ರದ ಸಂಸದ ಬಚ್ಚೆಗೌಡ ಮತ್ತು ಶರತ್ ಬಚ್ಚೆಗೌಡ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಈ ಮೂಲಕ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿಯಲ್ಲಿನ ಭಿನ್ನಮತ ಜೀವಂತವಾಗಿರುವುದು ಮತ್ತೊಮ್ಮೆ ಸಾಬೀತಾಯಿತು.

Intro:ಬೃಹತ್ ಕೃಷಿ ಮೇಳ ಉದ್ಘಾಟಿಸಿದ ಸಿಎಂ. ಹೊಸಕೋಟೆ ಉಪ ಚುನಾವಣೆಗೆ ಎಂಟಿಬಿ ಭರ್ಜರಿ ತಯಾರಿ.

ಹೊಸಕೋಟೆ ಉಪ ಚುನಾವಣೆ ಸಮೀಪಿಸುತ್ತಿರುವಂತೆ ಎಂಟಿಬಿ ನಾಗರಾಜ್ ಭರ್ಜರಿ ತಯಾರಿ ನಡೆಸಿದ್ದಾರೆ. ಹೌದು ಬ್ಯಾಂಕ್ ಆಫ್ ಬರೋಡ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ಬೃಹತ್ ಕೃಷಿ ಮೇಳ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪರವರನ್ನ ಮುಖ್ಯ ಅತಿಥಿಯಾಗಿ ಆಹ್ವಾನಿಸಿ ದೀಪ ಬೆಳಗಿಸುವ ಮೂಲಕ ತನ್ನ ವಿರೋಧಿ ಬಣ ಶರತ್ ಬಚ್ಚೆಗೌಡ ಅಂಡ್ ಟೀಮ್ ಗೆ ಸಖತ್ತಾಗಿಯೇ ಟಾಂಗ್ ನೀಡಿದ್ದಾರೆ..

ಹೊಸಕೋಟೆ ಸಮೀಪದ ಕಾಟಂನಲ್ಲೂರು ಬಳಿ ಜರುಗಿದ ಬೃಹತ್ ಕೃಷಿ ಮೇಳದ ವೇದಿಕೆ ಮೇಲೆ ಸಿಎಂ ಯಡಿಯೂರಪ್ಪ ಮತ್ತು ಡಿಸಿಎಂ ಅಶ್ವಥ್ ನಾರಾಯಣ್ ನಡುವೆ ಕುಳಿತು ಎಂಟಿಬಿ ನಾಗರಾಜ್ ತನ್ನ ತಾಕತ್ತು ಪ್ರದರ್ಶಿಸಿದ್ದು, ಮುಂದಿನ ಉಪ ಚುನಾವಣೆಗೆ ನಾನೇ ಬಿಜೆಪಿ ಅಭ್ಯರ್ಥಿ ಎಂಬುದನ್ನು ಕ್ಷೇತ್ರದ ಜನರಿಗೆ ಜಗಜ್ಜಾಹಿರುಗೊಳಿಸುವಂತಿತ್ತು. ಎಂಟಿಬಿ ನಾಗರಾಜ್ ಮಾತುಗಳಿಗೆ ಸಿಎಂ ಯಡಿಯೂರಪ್ಪ ತಲೆತಾಡಿಸುತ್ತಿದ್ದದ್ದೆ ಇದಕ್ಕೆ ಸಾಕ್ಷಿಯೆಂಬತಿತ್ತು.

ಇನ್ನು ಮಧ್ಯಾಹ್ನ 2ಕ್ಕೆ ನಿಗದಿಯಾಗಿದ್ದ ಕೃಷಿ ಮೇಳಕ್ಕೆ ಅರ್ಧ ಗಂಟೆ ಮುಂಚಿತವಾಗಿಯೇ ಡಿಸಿಎಂ ಅಶ್ವಥ್ ನಾರಾಯಣ್ ಮತ್ತು ಎಂಟಿಬಿ ನಾಗರಾಜ್ ಜೊತೆ ಆಗಮಿಸಿದ ಸಿಎಂ ಯಡಿಯೂರಪ್ಪ ಮೊದಲು ಕೃಷಿ ಮೇಳದ ಅಂಗವಾಗಿ ಸ್ಥಾಪಿಸಿದ್ದ ಕೃಷಿ ಪರಿಕರಗಳು ಮತ್ತು ಕೃಷಿ ಉತ್ಪನ್ನಗಳು ಮತ್ತು ಪ್ರಗತಿಪರ ಕುರಿ ಕೋಳಿ ಸ್ಟಾಲ್ಗಳನ್ನು ವೀಕ್ಷಣೆ ಮಾಡಿದ್ದಾರೆ. ಬಳಿಕ ದೀಪ ಬೆಳಗುವುದರ ಮೂಲಕ ವೇದಿಕೆ ಕಾರ್ಯಕ್ರಮ ಉದ್ಘಟಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ ಕೃಷಿ ಮೇಳದಲ್ಲಿಯು ನೆರೆ ಸಂತ್ರಸ್ತರ ನೆರವಿಗೆ ಬ್ಯಾಂಕುಗಳು ಧಾವಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರದ ಪಿಎಂ ಕಿಸಾನ್ ಯೋಜನೆ ಅಡಿ ರೈತರಿಗೆ ನಾಲ್ಕು ಸಾವಿರ ಹೆಚ್ಚುವರಿ ಧನ ಸಹಾಯ ನೀಡಲಾಗುತ್ತಿದೆ. ನೆರೆಯಿಂದ ಮನೆಗಳು ನಾಶವಾದ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಲಾಗಿದೆ. ಜೊತೆಗೆ ತಕ್ಷಣಕ್ಕೆ 5 ಸಾವಿರ ಪ್ರತಿ ಕುಟುಂಬಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಇನ್ನೂ ರೈತರಿಗೆ ಕ್ರೆಡಿಟ್ ಕಾರ್ಡ್ ನೀಡುವ ಮೂಲಕ ಬ್ಯಾಂಕ್ ಬರೋಡ ಸಹ ರೈತರಿಗೆ ನೆರವು ನೀಡುತ್ತಿದೆ. ಸಿಎಸ್ಆರ್ ನಿಧಿ ಅಡಿಯಲ್ಲಿ ಬ್ಯಾಂಕ್ ಆಫ್ ಬರೋಡ ಸಿಎಂ ಪ್ರಕೃತಿ ವಿರೋಪ ನಿಧಿಗೆ ಐದು ಕೋಟಿ ನೆರವು ನೀಡಿರುವುದು ಶ್ಲಾಘನೀಯ ಎಂದ ಸಿಎಂ ಮುಂದಿನ ಸೋಮವಾರ ಹೊಸಕೋಟೆ ತಾಲ್ಲೂಕಿನ ಜಡಿಗೇನಹಳ್ಳಿ ಮತ್ತು ಅನುಗೊಂಡಹಳ್ಳಿ ಹೋಬಳಿ ವ್ಯಾಪ್ತಿಯ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಚಾಲನೆ ದೊರೆಯಲಿದ್ದು, ಎಂಬಿಟಿ ನಾಗರಾಜ್ ರವರ ನಿರಂತರ ಶ್ರಮದ ಫಲವಾಗಿ ಸುಮಾರು 110 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಹೊಸಕೋಟೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ರವರನ್ನ ಸಿಎಂ ಯಡಿಯೂರಪ್ಪ ಹಾಡಿ ಹೊಗಳಿದ್ದಾರೆ.

Body:ಇನ್ನೂ ಸಿಎಂ ಯಡಿಯೂರಪ್ಪ ರವರಿಂದ ಸನ್ಮಾನ ಸ್ವೀಕರಿಸಿದ ಪ್ರಗತಿಪರ ರೈತ ಮಾತನಾಡಿ ರಾಜ್ಯದ ಉದ್ದಗಲಕ್ಕು ಪ್ರತಿ ಹಳ್ಳಿಯಲ್ಲು ನನ್ನಂತಹ ಶ್ರಮಿಕ ರೈತರ ಸಮೂಹವೇ ಇದೆ. ಅಂತಹ ರೈತರನ್ನ ಗುರುತಿಸಿ ಸರಗಕಾರ ಉತ್ತೇಜನ ನೀಡಿದರೆ ನನ್ನ ಸನ್ಮಾನಕ್ಕೆ ಅರ್ಥ ಬರುತ್ತದೆ. ರೈತರು ಕೃಷಿ ಜೊತೆಗೆ ಕುರಿ ಮೇಕೆ ಮತ್ತು ಕೋಳಿ ಸಾಕಾಣಿಕೆ ಮಾಡಿದರೆ ನೆರೆಯಿರಲಿ ಬರ ಬರಲಿ ರೈತ ಹಿಂಜರಿಯುವ ಮಾತಿಲ್ಲ. ಹಾಗಾಗಿ ರೈತರು ಕೃಷಿ ಜೊತೆಗೆ ಉಪ ಕುಸುಬುಗಳನ್ನು ಮಾಡಬೇಕು ಎಂದ ಪ್ರಗತಿಪರ ರೈತ ತಿಮ್ಮಣ್ಣ ಸರ್ಕಾರ ಸಹ ರೈತರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

.Conclusion: ಬೃಹತ್ ಕೃಷಿಮೇಳದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ಡಿಸಿಎಂ ಅಶ್ವಥ್ ನಾರಾಯಣ್, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ಕೋಲಾರ ಸಂಸದ ಮುನಿಸ್ವಾಮಿ ಉಪಸ್ಥಿತರಿದ್ದರು ಆದರೆ ಪಕ್ಕದ ಕ್ಷೇತ್ರದ ಸಂಸದ ಬಚ್ಚೆಗೌಡ ಮತ್ತು ಶರತ್ ಬಚ್ಚೆಗೌಡ ಅಂಡ್ ಟೀಮ್ ಅನುಪಸ್ಥಿತಿ ಎದ್ದು ಕಾಣುತ್ತಿದ್ದು, ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿಯಲ್ಲಿನ ಭಿನ್ನಮತ ಜೀವಂತವಾಗಿರುವುದು ಮತ್ತೊಮ್ಮೆ ಸಾಬೀತಾಯಿತು

ಬೈಟ್: ಬಿಎಸ್ ಯಡಿಯೂರಪ್ಪ, ಸಿಎಂ.

ಬೈಟ್: ಮುನಿಸ್ವಾಮಿ,ಸಂಸದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.