ಆನೇಕಲ್: ಬೆಂಗಳೂರು- ಪುಟ್ಟೇನಹಳ್ಳಿಯಲ್ಲಿರುವ ಕಟ್ಟಡವೊಂದು ಸಂಜೆ ವೇಳೆ ಕಟ್ಟಡ ಇದ್ದಕ್ಕಿದ್ದ ಹಾಗೆ ಕುಸಿಯಲು ಆರಂಭಿಸಿದ್ದು, ಕಟ್ಟಡದಲ್ಲಿದ್ದ ನಿವಾಸಿಗಳು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಆಗಮಿಸಿ ಪರಿಶೀಲನೆ ನಡೆಸಿದ್ದು, ಮಧ್ಯರಾತ್ರಿ 1 ಗಂಟೆಯಿಂದ ತೆರವು ಕಾರ್ಯಾಚರಣೆ ಆರಂಭವಾಗಿದೆ.
ಒಟ್ಟು 6 ರಿಂದ 8 ಕುಟುಂಬ ಕಟ್ಟಡದಲ್ಲಿ ವಾಸವಿದ್ದು, ಕಟ್ಟಡ ವಾಲಿದ ಅನುಭವವಾದ ಕೂಡಲೇ ಎಲ್ಲರೂ ಆಚೆಗೆ ಧಾವಿಸಿದ್ದಾರೆ. ಕಟ್ಟಡ ಶಿಥಿಲಗೊಂಡಿದ್ದರಿಂದ ಇಂದು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಅಲ್ಲದೇ ಅಂಗಡಿ ಸಾಮಾನುಗಳೆಲ್ಲ ಕಟ್ಟಡದ ಕೆಳಗಡೆಯೇ ಸಿಲುಕಿಕೊಂಡಿದೆ.
ಬಿಬಿಎಂಪಿಯಿಂದ ಪರಿಶೀಲನೆ;
ಸದ್ಯ ಸ್ಥಳಕ್ಕೆ ಬೊಮ್ಮನಹಳ್ಳಿ ವಿಭಾಗದ ಬಿಬಿಎಂಪಿ ಚೀಫ್ ಇಂಜಿನಿಯರ್ ಸಿದ್ದೇಗೌಡ ಬಂದು ಪರಿಶೀಲನೆ ನಡೆಸುತ್ತಿದ್ದು,ಜಾಯಿಂಟ್ ಕಮಿಷನರ್ ಸೌಜನ್ಯ ಹಾಗೂ ಸ್ಥಳೀಯ ಕಾರ್ಪೋರೆಟರ್ ಪ್ರಭಾವತಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ, ಅಲ್ಲದೇ ಇದೀಗ ಮಧ್ಯರಾತ್ರಿ 1ಗಂಟೆಯಿಂದ ತೆರವು ಕಾರ್ಯಾಚರಣೆ ಆರಂಭವಾಗಿದೆ.