ಆನೇಕಲ್ : ಬನ್ನೇರುಘಟ್ಟ ಅರಣ್ಯದ ಆನೆ ಕ್ಯಾಂಪ್ನಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದ ಕಾಡೆಮ್ಮೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ವಾರದ ಹಿಂದೆ ಹಾರೋಹಳ್ಳಿ ಅರಣ್ಯ ವಲಯದ ಮರಳವಾಡಿಯಿಂದ ಅನಾರೋಗ್ಯ ಪೀಡಿತ ಕಾಡೆಮ್ಮೆಯನ್ನು ಸಂರಕ್ಷಿಸಿ ತರಲಾಗಿತ್ತು. ವಾರದಿಂದ ಎಷ್ಟೇ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಚೇತರಿಸಿಕೊಳ್ಳದ ಕಾಡೆಮ್ಮೆ ಸಾವನ್ನಪ್ಪಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಆನೆ ಮರಿಯೊಂದನ್ನು ಇದೇ ರೀತಿ ಸಂರಕ್ಷಿಸಿ ತಂದು ಆರೈಕೆ ಮಾಡಲಾಗಿತ್ತು. ಆದರೆ ಅದು ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿತ್ತು, ಆ ಸಾವು ಮಾಸುವ ಮುನ್ನವೇ ಇದೀಗ ಕಾಡೆಮ್ಮೆ ಸಾವನ್ನಪ್ಪಿದೆ.