ETV Bharat / state

ಯುಗಾದಿ ಹಬ್ಬಕ್ಕೆ ಮಾವಿನ ‌ಎಲೆ ತರಲು ಹೋದವರ ಮೇಲೆ ಕರಡಿ ದಾಳಿ - ಕರಡಿ ದಾಳಿ

ದೊಡ್ಡಬಳ್ಳಾಪುರ ತಾಲೂಕಿನ ಕಟ್ಪಿಗೆ ಹಿಂದ್ಲಹಳ್ಳಿಯಲ್ಲಿ ಹಬ್ಬಕ್ಕೆಂದು ಬೆಳಿಗ್ಗೆ ಮಾವಿನ ಎಲೆ ತರಲು ತೋಟಕ್ಕೆ ಹೋಗಿದ್ದ ವೇಳೆ ಕರಡಿಯೊಂದು ದಾಳಿ ನಡೆಸಿರುವ ಘಟನೆ ನಡೆದಿದೆ.

ಕರಡಿ ದಾಳಿ
author img

By

Published : Apr 6, 2019, 7:29 PM IST

ಬೆಂಗಳೂರು: ಹಬ್ಬಕ್ಕೆಂದು ಬೆಳಿಗ್ಗೆ ಮಾವಿನ ಎಲೆ ತರಲು ತೋಟಕ್ಕೆ ಹೋಗಿದ್ದ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ ನಡೆಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕಟ್ಪಿಗೆ ಹಿಂದ್ಲಹಳ್ಳಿಯಲ್ಲಿ ನಡೆದಿದೆ.

ಯುಗಾದಿ ಹಬ್ಬಕ್ಕೆ ಮಾವಿನ ‌ಎಲೆ ತರಲು ಹೋದವರ ಮೇಲೆ ಕರಡಿ ದಾಳಿ

ಇಂದು ಮುಂಜಾನೆ ಶಿವಶಂಕರ್ ತೋಟಕ್ಕೆ ಮಾವಿನ ಎಲೆ ತರಲು ಹೋಗಿದ್ದರು. ಈ ವೇಳೆ ಹಿಂದಿನಿಂದ ಕರಡಿ ದಾಳಿ ಮಾಡಿದೆ. ಕರಡಿ ದಾಳಿಯಿಂದ ಶಿವಶಂಕರ್ ಬೆನ್ನಿನ ಮೇಲೆ ಗಾಯವಾಗಿದೆ. ಅಲ್ಲದೆ ಈ ವೇಳೆ ಕರಡಿ ಓಡಿಸಲು ಬಂದವರ ಮೇಲೆಯೂ ದಾಳಿ ನಡೆಸಿದ್ದು, ಇದರಿಂದ ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆ‌ಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಆಗಮಿಸಿರುವ ಅರಣ್ಯ ಇಲಾಖೆಯ ಸಿಬ್ಬಂದಿ ಕರಡಿ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಘಟನೆಯಿಂದಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

Intro:ಯುಗಾದಿ ಹಬ್ಬದಲ್ಲಿ ಮನೆ ಬಾಗಿಲನ್ನು ಮಾವಿನ ಎಲೆಗಳಿಂದ ತೋರಣ ಕಟ್ಟಿ ಅಲಂಕಾರಿಸುವುದು ಸಂಪ್ರದಾಯ. ಹಾಗೆಯೇ ಆತ ಬೆಳಿಗ್ಗೆ ಮಾವಿನ ಎಲೆ ತರಲು ತೋಟಕ್ಕೆ ಹೋಗಿದ್ದ ಈ ವೇಳೆ ಕರಡಿಯೊಂದು ದಾಳಿ ಮಾಡಿದೆ. ತೋಟದಲ್ಲಿ ಅಡಗಿದೆ ಕರಡಿ‌ಯನ್ನ ಓಡಿಸಲು ಹೋದ ನಾಲ್ವರು ಸೇರಿದಂತೆ ಫಾರೆಸ್ಟ್ ಗಾರ್ಡ್ ಮೇಲು ದಾಳಿ ಮಾಡಿದೆ. ಕರಡಿ ದಾಳಿಯಿಂದ ಗಾಯಾಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

Body:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ‌ಬಳ್ಳಾಪುರ ತಾಲೂಕಿನ ಕಟ್ಪಿಗೆಹಿಂದ್ಲಹಳ್ಳಿಯಲ್ಲಿ ಘಟನೆ ನಡೆದಿದೆ. ಇಂದು ಯುಗಾದಿ ಹಬ್ಬವಿದ್ದು ಮನೆಯ ಬಾಗಿಲನ್ನು ಮಾವಿನ ಎಲೆಗಳಿಂದ ಮಾಡಿದ ತೋರಣದಿಂದ ಅಲಂಕರಿಸುವುದು ಸಂಪ್ರದಾಯ. ಇಂದು ಮುಂಜಾನೆ ಶಿವಶಂಕರ್ ತಮ್ಮ ತೋಟಕ್ಕೆ ಹೋಗಿ ಮಾವಿನ ಎಲೆ ತರಲು ಹೋಗಿದ್ಧರು. ಈ ವೇಳೆ ಹಿಂಭಾಗದಿಂದ ಕರಡಿ ದಾಳಿ ಮಾಡಿದೆ. ಸ್ಥಳದಲ್ಲಿಯೇ ಇದ್ದ ನಾಯಿ ಬೋಗಳಲು ಶುರು ಮಾಡಿದ್ದಾಗ ಕರಡಿ ಅಲ್ಲಿಂದ ಓಡಿ ಹೋಗಿ ಬಾಳೆ ತೋಟ‌ದಲ್ಲಿ ಅಡಗಿದೆ.

ಕರಡಿ ಓಡಿಸಲು ಬಂದವರ ಮೇಲೆಯೇ ಎರಗಿದ ಕರಡಿ

ಕರಡಿ ದಾಳಿಯಿಂದ ಶಿವಶಂಕರ್ ಬೆನ್ನು ಮೇಲೆ ಗಾಯವಾಗಿದೆ. ಶಿವ‌ಶಂಕರ್ ಸ್ಥಿತಿ‌ಯನ್ನು ನೋಡಿದ ಗ್ರಾಮಸ್ಥರು ಭಯಗೊಂಡು ಗ್ರಾಮಕ್ಕೆ ಎಲ್ಲಿ ಕರಡಿ ದಾಳಿ ಮಾಡುತ್ತೋ ಅತಂಕದಲ್ಲಿ ಬಾಳೇತೋಟದಲ್ಲಿ ಅಡಗಿದೆ ಕರಡಿಯನ್ನ ಓಡಿಸಲು ಹೋಗಿದ್ದಾರೆ‌. ಜನರಿಂದ ಭಯಗೊಂಡ ಕರಡಿ‌ ಓಡಿಸಲು ಬಂದ‌ವರ ಮೇಲೆ ಮತ್ತೆ ದಾಳಿ ಮಾಡಿ ಈ ವೇಳೆ ನಾಲ್ವರು ಗಾಯಾಗೊಂಡಿದ್ದಾರೆ. ಇವರು ಜೊತೆಯಲ್ಲಿ ಫಾರೆಸ್ಟ್ ಗಾರ್ಡ್ ಸಹ ಗಾಯಗೂಂಡಿದ್ದಾರೆ. ಗಾಯಾಗೊಂಡವರನ್ನು ದೊಡ್ಬಳ್ಳಾಪುರ ಸಾರ್ವಜನಿಕ ಆಸ್ಪತ್ರೆ‌ಗೆ ದಾಖಲು ಮಾಡಿ ಚಿಕಿತ್ಸೆ ಕೋಡಿಸಲಾಗುತ್ತಿದೆ.

ಯುಗಾದಿ ಸಂಭ್ರಮ‌ಕ್ಕೆ ಭಂಗತಂದ ಗ್ರಾಮಕ್ಕೆ ಬಂದ ಕರಡಿ.

ಯುಗಾದಿ‌ಯ ಸಂಭ್ರಮ‌ದಲ್ಲಿದ್ದ ಕಟ್ಟಿಗೆಹಿಂದ್ಲಹಳ್ಳಿಯ ಗ್ರಾಮ ಸ್ಥರು ಗ್ರಾಮದ ಬಳಿಯ ತೋಟಕ್ಕೆ ಬಂದು ಜನರ ಮೇಲೆ ದಾಳಿ ಮಾಡಿದ್ದು ಆತಂಕಕ್ಕೆ ಕಾರಣವಾಗಿದೆ. ಗಾಯಗೊಂಡ ಐವರು ಆಸ್ಪತ್ರೆ‌ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಮನೆಯಲ್ಲಿ ಯುಗಾದಿ ಸಂಭ್ರಮ ಮರೆಯಾಗಿ ಭಯ‌ದ ವಾತಾವರಣ ಉಂಟು ಮಾಡಿದೆ. ಇನ್ನೂ ಗ್ರಾಮಸ್ಥರು ಅಡಗಿರುವ ಕರಡಿ ಎಲ್ಲಿ ದಾಳಿ ಮಾಡುತ್ತೂ ಭಯದಲ್ಲಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಆರಣ್ಯ ಇಲಾಖೆಯ ಸಿಬ್ಬಂದಿ ಕರಡಿ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಕಟ್ಟಿಗೆಹಿಂದ್ಲಹಳ್ಳಿ ಉಜ್ಜನಿ ಅರಣ್ಯದ ಪಕ್ಕದಲ್ಲಿಯೇ ಇದ್ದರು ಈ ಹಿಂದೆ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ ಈಗ ನಡೆದಿರುವ ಘಟನೆ ಗ್ರಾಮಸ್ಥರ ಆತಂಕ್ಕೆ ಕಾರಣವಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.