ಹೊಸಕೋಟೆ (ಬೆಂಗಳೂರು ಗ್ರಾ.): ತಾಲೂಕಿಗೆ ಒಬ್ಬ ಒಳ್ಳೆಯ ಯುವ ನಾಯಕ ಸಿಕ್ಕಿದ್ದಾನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ನನ್ನ ಮಗ ಶರತ್ ಬಚ್ಚೇಗೌಡರನ್ನು ಗೆಲ್ಲಿಸಿ ಎಂದು ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಹೊಸಕೋಟೆಯ ಜನರಲ್ಲಿ ಮನವಿ ಮಾಡಿದರು. ಹೊಸಕೋಟೆ ತಾಲೂಕಿನ ನಡುವಿನಪುರ ಗ್ರಾಮದಲ್ಲಿ ಪುನೀತ್ ರಾಜ್ಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನನ್ನ ಮಗ ಶಾಸಕನಾಗಿದ್ದುಕೊಂಡು ತಾಲೂಕಿನಲ್ಲಿ ಒಳ್ಳೆಯ ಸಂಘಟನೆ ಮಾಡಿದ್ದಾನೆ. ಅವನ ಮೇಲೆ ನಿಮ್ಮ ಕೃಪೆ ಇರಲಿ. ಇನ್ನು ಮುಂದೆ ನಾನು ಯಾವ ಚುನಾವಣೆಯಲ್ಲೂ ನಿಲ್ಲುವುದಿಲ್ಲ. ಇದೀಗ ಸಂಸದನಾಗಿ ನಾನು ಚುನಾವಣಾ ನಿವೃತ್ತಿ ಪಡೆಯುತ್ತೇನೆ. ಆದರೆ ನಿಮ್ಮ ಮಧ್ಯದಲ್ಲೇ ಇದ್ದು, ತಾಲೂಕಿನ ಜನರ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದರು.
ಇದನ್ನೂ ಓದಿ: ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ವಿಚಾರಿಸಿದ ಸಚಿವ ಶ್ರೀರಾಮುಲು