ನೆಲಮಂಗಲ : ಕೆತ್ತನೆ ಮಾಡಿದ್ದ ಆನೆ ದಂತ ಮಾರಾಟಕ್ಕೆ ಯತ್ನಿಸಿದ ಕುಖ್ಯಾತ ದಂತ ಚೋರರನ್ನು ಅರಣ್ಯ ಸಂಚಾರಿ ದಳ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಆನೆ ದಂತಗಳನ್ನು ಸಂಗ್ರಹಿಸಿ ಮಾರಾಟಕ್ಕೆ ಯತ್ನಿಸಿದ ಕುಖ್ಯಾತ ದಂತಚೋರರನ್ನು ಬಂಧಿಸುವಲ್ಲಿ ಬೆಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲೂಕಿನ ಮರಿಯಪ್ಪನ ಪಾಳ್ಯದ ಮನೆಯಲ್ಲಿ ಆನೆ ದಂತಗಳನ್ನು ಸಂಗ್ರಹಿಸಿ ಮಾರಾಟಕ್ಕೆ ಯತ್ನಿಸಿದ್ದಾರೆ ಎಂಬ ಸುಳುವಿನ ಮೇರೆಗೆ ಬೆಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯ ಸಮಯದಲ್ಲಿ 3.3 ಕೆ.ಜಿ ತೂಕವುಳ್ಳ ಕೆತ್ತನೆ ಒಳಗೊಂಡ ಆನೆಯ ದಂತ ಪತ್ತೆಯಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಡಿ ಸದಾಶಿವ (39), ನಾಗರಾಜ್ (40), ಮೊಹಮ್ಮದ್ ಆಸ್ಗರ್ ( 46) ಪ್ರಮೀಳಾ ಕುಮಾರಿ ( 42) , ಪ್ರಭು (46) , ಪುರುಷೋತ್ತಮ್ ( 55) ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಲಾಗಿದೆ.