ETV Bharat / state

ಮಹಿಳೆ ಜೊತೆ ನಂಟಿನ ಸಂಶಯ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ - ETV Bharath Kannada

ಮಹಿಳೆ ಜೊತೆ ಮೊಬೈಲ್ ಮೂಲಕ ಮಾತುಕತೆ ನಡೆಸುತ್ತಿದ್ದ ಎಂಬ ಕಾರಣಕ್ಕೆ 30 ಜನರ ಗುಂಪು ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರದಲ್ಲಿ ನಡೆದಿದೆ. ಹಲ್ಲೆಗೊಳಗಾದವನನ್ನು ಪೊಲೀಸರು ರಕ್ಷಿಸಿದ್ದಾರೆ.

Etv Bharat
ಯುವಕನ ಮೇಲೆ ಮಾರಣಾಂತಿಕ ಹಲ್ಲೆ
author img

By

Published : Dec 8, 2022, 12:00 PM IST

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಮಹಿಳೆಯ ಜೊತೆ ಯುವಕನ ಸಂಬಂಧದ ಬಗ್ಗೆ ಸಂಶಯಪಟ್ಟ ಗುಂಪೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಕೆಲದಿನಗಳ ಹಿಂದೆ ಇದೇ ರೀತಿಯ ಕಾರಣಕ್ಕೆ ಆರು ಜನ ಸೇರಿ ಕೊಲೆ ಮಾಡಿದ್ದರು. ಈಗ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರ ರಕ್ಷಣೆಯಿಂದ ಯುವಕ ಸಾವಿನ ದವಡೆಯಿಂದ ತಪ್ಪಿಸಿಕೊಂಡಿದ್ದಾನೆ.

30 ಜನರ ಗುಂಪಿನಿಂದ ಯುವಕನ ಮೇಲೆ ಹಲ್ಲೆ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌಚೇನಹಳ್ಳಿಯ 20 ವರ್ಷದ ಯುವಕ ಆಕಾಶ್ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದಾನೆ. ಕಳೆದ ಸೋಮವಾರ ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಕ್ರಾಸ್​ಗೆ ಬಂದ ಆಕಾಶ್​ನನ್ನು 30 ಜನರ ಗುಂಪು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದೆ. ರಾಡು, ದೊಣ್ಣೆ, ಕಲ್ಲು ಮತ್ತು ಮುಳ್ಳಿನ ತಂತಿಯಿಂದ ಮನಸೋಯಿಚ್ಛೆ ಹಲ್ಲೆ ಮಾಡಿದ್ದಾರೆ. ಹೊಲದಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಲ್ಲದೆ ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ. ಸಕಾಲಕ್ಕೆ ಸ್ಥಳಕ್ಕೆ ಬಂದ ಪೊಲೀಸರು ಆಕಾಶ್​ನನ್ನು ಕಾಪಾಡಿದ್ದಾರೆ.

ಮಹಿಳೆ ಜೊತೆ ನಂಟಿನ ಸಂಶಯಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.

ಹಲ್ಲೆಗೆ ಕಾರಣವಾದ ಮಹಿಳೆ ಜೊತೆಗಿನ ಮೊಬೈಲ್ ಮಾತುಕತೆ: ಹಲ್ಲೆಗೊಳಗಾದ ಯುವಕ ಆಕಾಶ್ ಮತ್ತು ಮೆಳೆಕೋಟೆ ಕ್ರಾಸ್​ನ ನಿವಾಸಿ ಮಾರುತಿ ಡೈವರ್ ಕೆಲಸ ಮಾಡುತ್ತಿದ್ದರು. ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣಕ್ಕೆ ಸ್ನೇಹಿತರಾಗಿದ್ದರು. ಗಂಡನ ಯೋಗಕ್ಷೇಮ ವಿಚಾರಿಸಲೆಂದ್ದು ಮಾರುತಿ ಪತ್ನಿ ಆಕಾಶ್​ಗೆ ಆಗಾಗ ಪೋನ್ ಮಾಡುತ್ತಿದ್ದಾರಂತೆ.

ಫೋನ್ ಸಂಭಾಷಣೆಯನ್ನೇ ಸಂಶಯಪಟ್ಟ ಮಾರುತಿ ಮತ್ತು ಆತನ ಸ್ನೇಹಿತರು ಆಕೆ ಜೊತೆ ಮಾತನಾಡಿದಂತೆ ಆರು ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಕಳೆದ ಸೋಮವಾರ ಮಧ್ಯಾಹ್ನ ಮೊಬೈಲ್ ರಿಪೇರಿಗಾಗಿ ಆಕಾಶ್ ಮೆಳೇಕೋಟೆ ಕ್ರಾಸ್​ಗೆ ಹೋಗಿದ್ದ. ಈ ವೇಳೆ ಮಾರುತಿ, ಶ್ರೀನಿವಾಸ್, ಮಂಜುನಾಥ್, ರಘು ಮತ್ತು ನಾಗೇಶ್ ಸೇರಿದಂತೆ 30 ಜನರ ಗುಂಪು ಆಕಾಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಆಕಾಶ್ ಒಬ್ಬ ದಲಿತ ಯುವಕನಾಗಿದ್ದು ಜಾತಿ ನಿಂದನೆ ಸಹ ಮಾಡಿದ್ದಾರೆಂದು ಯುವಕನ ಕಡೆಯವರು ಆರೋಪ ಮಾಡಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಇದನ್ನೂ ಓದಿ: ಮಹಿಳೆಯರು ಸೇರಿ ಆರು ಮಂದಿಯಿಂದ ಕಲ್ಲಿನಿಂದ ಜಜ್ಜಿ ಯುವಕನ ಕೊಲೆ: ಭಯಾನಕ ಮರ್ಡರ್​ ಕಂಡು ಬೆಂಗಳೂರು ಪೊಲೀಸರಿಗೆ ಶಾಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.