ETV Bharat / state

ರೈತರ ಪ್ರತಿಭಟನೆಗೆ ಮಣಿದ ಕೆಐಎಎಲ್​​: ಶಾಶ್ವತ ಪರಿಹಾರದ ಭರವಸೆ - undefined

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ರನ್ ವೇ ಕಾಮಗಾರಿಯ ಧೂಳಿನಿಂದ ತೊಂದರೆ ಅನುಭವಿಸಿದ ಗ್ರಾಮಸ್ಥರಿಗೆ ಕೊಂಚ ರಿಲೀಫ್ ಸಿಕ್ಕಿದೆ. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಲು ಏರ್​​ಪೋರ್ಟ್​ ಅಧಿಕಾರಿಗಳು ಮುಂದಾಗಿದ್ದು, ರೈತರ ಸಮ್ಮುಖದಲ್ಲಿ ಶಾಶ್ವತ ಪರಿಹಾರ ಒದಗಿಸಲು ಮೂರು ದಿನಗಳ ಕಾಲಾವಕಾಶ ಕೇಳಿದ್ದಾರೆ.

ರೈತರು ಪಂಚಾಯಿತಿ ಮುಂದೆ ಪ್ರತಿಭಟನೆ
author img

By

Published : Jul 7, 2019, 10:31 PM IST

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ರನ್ ವೇ ಕಾಮಗಾರಿಯ ಧೂಳಿನಿಂದ ತೊಂದರೆ ಅನುಭವಿಸಿದ ಗ್ರಾಮಸ್ಥರಿಗೆ ಕೊಂಚ ರಿಲೀಫ್ ಸಿಕ್ಕಿದೆ. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಲು ಏರ್​​ಪೋರ್ಟ್​ ಅಧಿಕಾರಿಗಳು ಮುಂದಾಗಿದ್ದು, ರೈತರ ಸಮ್ಮುಖದಲ್ಲಿ ಶಾಶ್ವತ ಪರಿಹಾರ ಒದಗಿಸಲು ಮೂರು ದಿನಗಳ ಕಾಲಾವಕಾಶ ಕೇಳಿದ್ದಾರೆ.

ವಿಮಾನ ನಿಲ್ದಾಣದ ಕಾಮಗಾರಿಯಿಂದ ಸುತ್ತಮುತ್ತಲಿನ ಗ್ರಾಮದ ಜನರು ಧೂಳಿನಿಂದಲೇ ಜೀವನ ನಡೆಸುವಂತಾಗಿದ್ದು, ಹಲವು ಪ್ರತಿಭಟನೆ ನಡಸಿದ್ರೂ ಶಾಶ್ವತ ಪರಿಹಾರ ಮಾತ್ರ ಸಿಕ್ಕಿರಲಿಲ್ಲ. ಇದೀಗ ಮತ್ತೊಂದು ರನ್ ವೇ ಮಾಡಲು ಏರ್​​ಪೋರ್ಟ್​ ಮುಂದಾಗಿದ್ದು, ಕಾಮಗಾರಿ ಆರಂಭವಾಗಿದೆ. ಈಗಲೂ ಸುತ್ತಮುತ್ತಲಿನ ಗ್ರಾಮದ ಜನರು ಧೂಳಿನಲ್ಲೇ ಜೀವನ ನಡಸುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಬೆಟ್ಟ ಕೋಟೆ ಗ್ರಾಮದ ನೂರಾರು ರೈತರು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ರೈತರ ಪ್ರತಿಭಟನೆಗೆ ಮಣಿದ ಏರ್​ಪೋರ್ಟ್​ ಅಧಿಕಾರಿಗಳು

ಇವರ ಪ್ರತಿಭಟನೆಗೆ ಹೆದರಿದ ತಾಲೂಕಿನ ತಹಸೀಲ್ದಾರ್​ ಕೇಶವ ಮೂರ್ತಿ ಸ್ಥಳಕ್ಕೆ ಬಂದು ರೈತರ ಸಮಸ್ಯೆ ಆಲಿಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಆದರೆ ರೈತರು ಮಾತ್ರ ಬಿಲ್​​ಕುಲ್ ಒಪ್ಪಲಿಲ್ಲ. ಏರ್​​ಪೋರ್ಟ್​ ಅಧಿಕಾರಿಗಳು ಇಲ್ಲಿಗೆ ಬಂದು ನಮ್ಮ ಸಮಸ್ಯೆಯನ್ನು ತಿಳಿದು ಪರಿಹಾರದ ಜೊತೆಗೆ ನಮಗೆ ತೊಂದರೆಯಾಗದಂತೆ ಕೆಲಸ ಮಾಡುತ್ತೇವೆ ಎಂದು ಹೇಳಬೇಕು ಎಂದು ಒತ್ತಾಯ ಮಾಡಿದ್ದಾರೆ. ಜನರ ಆಕ್ರೋಶ ನೋಡಿದ ತಹಸೀಲ್ದಾರರು, ಕೆಐಎಎಲ್​ನ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದಾರೆ.

ಈ ಸಂಬಂಧ ಏರ್​ಪೋರ್ಟ್​ ಅಧಿಕಾರಿಗಳಾದ ಮೋಹನ್ ಸ್ಥಳಕ್ಕೆ ಬಂದು ರೈತರ ಸಮಸ್ಯೆಗಳನ್ನು ತಿಳಿದು, ಸ್ವತಃ ಸಮಸ್ಯೆಗಳನ್ನು ಖುದ್ದಾಗಿ ನೋಡಿ ಶಾಶ್ವತ ಪರಿಹಾರ ಮತ್ತು ನಷ್ಟವನ್ನು ತುಂಬಿಕೊಡುವ ಭರವಸೆ ನೀಡಿದರು. ಅಲ್ಲದೇ ಸಮಸ್ಯೆಯ ಕುರಿತು ಏರ್​​ಪೋರ್ಟ್​ನ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಇದೇ ಮಂಗಳವಾರ ಸ್ಥಳಕ್ಕೆ ಆಗಮಿಸಿ ರೈತರ ಸಮ್ಮುಖದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೇವೆ ಎಂದರು.

Intro:KN_BNG_01_07_protest_Ambarish_7203301
Slug: ರೈತರ ಪ್ರತಿಭಟನೆಗೆ ಮಣಿದ ಕೆಐಎಎಲ್: ಶಾಶ್ವತ ಪರಿಹಾರಕ್ಕೆ ಮುಂದಾದ ಏರ್ ಪೊರ್ಟ್

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ರನ್ ವೇ ಕಾಮಗಾರಿಯ ಧೂಳಿನಿಂದ ತೊಂದರೆ ಅನುಭವಿಸಿದ ಗ್ರಾಮಸ್ಥರಿಗೆ ಕೊಂಚ ರಿಲೀಫ್ ಸಿಕ್ಕಿದೆ. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಲು ಏರ್ಪೋರ್ಟ್ ಅಧಿಕಾರಿಗಳು ಮುಂದಾಗಿದ್ದು, ರೈತರ ಸಮ್ಮುಖದಲ್ಲಿ ಶಾಶ್ವತ ಪರಿಹಾರ ಒದಗಿಸಲು ಮೂರು ದಿನಗಳ ಕಾಲಾವಕಾಶ ಕೇಳಿದ್ದಾರೆ..

ಯೆಸ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆಗುತ್ತಿದೆ ಅಂತ ಸುತ್ತಮುತ್ತಲಿನ ಗ್ರಾಮದ ಜನರು‌ ಸೇರಿದಂತೆ ಇಡೀ‌ ಬೆಂಗಳೂರಿನ ಜನರು ಖುಷಿಯಿಂದ ಇದ್ದರು.. ಆದರೆ ಆ ಖುಷಿ ಕೇವಲ ರಾಜ್ಯಕ್ಕೆ ಮತ್ತು‌ ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಯ ಜನರಿಗೆ ಮಾತ್ರ.. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಹದಿನೈದರಿಂದ ಇಪ್ಪತ್ತು ಗ್ರಾಮಗಳಿಗೆ ಮಾತ್ರ ಅಂತಹ ಖುಷಿ‌ಇಲ್ಲ.. ಜಮೀನು‌ ನೀಡಿದಲ್ಲದೇ ವಿಮಾನ ನಿಲ್ದಾಣದಿಂದ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಎದುರಿಸಬೇಕಾಯ್ತು.. ವಿಮಾನ ನಿಲ್ದಾಣದ ಕಟಮಗಾರಿಯಿಂದ ಸುತ್ತಮುತ್ತಲಿನ ಗ್ರಾಮದ ಜನರು ಧೂಳಿನಿಂದಲೇ ಜೀವನ ನಡೆಸುವಂತಾಯ್ತು.. ಹಲವು ಪ್ರತಿಭಟನೆ ನಡಸಿದ್ರೂ ಶಾಶ್ವತ ಪರಿಹಾರ ಮಾತ್ರ ಸಿಕ್ಕಿರಲಿಲ್ಲ.. ಅದೇ ರೀತಿ ಏರ್ಪೋರ್ಟ್ ಆಯ್ತು.. ಆಗಲೂ ಸಮಸ್ಯೆ ತಪ್ಪಲಿಲ್ಲ..

ಇದೀಗ ಮತ್ತೊಂದು ರನ್ ವೇ ಮಾಡಲು ಏರ್ಪೋರ್ಟ್ ಮುಂದಾಗಿದ್ದು ಕಾಮಗಾರಿ ಆರಂಭವಾಗಿದೆ.. ಈಗಲೂ ಸುತ್ತಮುತ್ತಲಿನ ಗ್ರಾಮದ ಜನರು ಧೂಳಿನ ಜೀವನ ನಡಸುತ್ತಿದ್ದಾರೆ.. ಇದರಿಂದ ಆಕ್ರೋಶಗೊಂಡ ಬೆಟ್ಟ ಕೋಟೆ ಗ್ರಾಮದ ನೂರಾರು ರೈತರು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದ್ರು.. ಇವರ ಪ್ರತಿಭಟನೆಗೆ ಎದರಿದ ತಾಲೂಕಿನ ದಂಡ ನಾಯಕ ಕೇಶವ ಮೂರ್ತಿ ಸ್ಥಳಕ್ಕೆ ಬಂದು ರೈತರ ಸಮಸ್ಯೆಯನ್ನು ಆಲಿಸಿ ಪರಿಹಾರ ನೀಡುವ ಭರವಸೆ ನೀಡಿದ್ರು.. ಆದರೆ ರೈತರು ಮಾತ್ರ ಬಿಲ್ ಕುಲ್ ಒಪ್ಪಲಿಲ್ಲ..‌ಏರ್ಪೊರ್ಟ್ ಅಧಿಕಾರಿಗಳು ಇಲ್ಲಿಗೆ ಬಂದು ನಮ್ಮ‌ ಸಮಸ್ಯೆಯನ್ನು ತಿಳಿದು ಪರಿಹಾರದ ಜೊತೆಗೆ ನಮಗೆ ತೊಂದರೆಯಾಗದಂತೆ ಕೆಲಸ ಮಾಡುತ್ತೇವೆ ಎಂದು ಹೇಳಬೇಕು ಎಂದು ಒತ್ತಾಯ ಮಾಡಿದ್ರು.. ಜನರ ಆಕ್ರೋಶವನ್ನ ನೋಡಿದ ತಾಶಿಲ್ದಾರರು ಕೆಐಎಎಲ್ ನ ಅಧಿಕಾರಿಗಳನ್ನು ಸ್ಥಳಕ್ಕೆ ಕರಸಿದ್ರು..

ಇನ್ನು ಏರ್ಪೊರ್ಟ್ ಅಧಿಕಾರಿಗಳಾದ ಮೋಹನ್ ಸ್ಥಳಕ್ಕೆ ಬಂದು ರೈತರ ಸಮಸ್ಯೆಗಳನ್ನು ತಿಳಿದು, ಸ್ವತಃ ಸಮಸ್ಯೆಗಳನ್ನು ಖುದ್ದಾಗಿ ನೋಡಿ ಶಾಶ್ವತ ಪರಿಹಾರ ಮತ್ತು ನಷ್ಟವನ್ನು ತುಂಬಿಕೊಡುವ ಭರವಸೆ ನೀಡಿದ್ರು.. ಅಲ್ಲದೇ ಸಮಸ್ಯೆಯ ಕುರಿತು ಏರ್ಪೋರ್ಟ್ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಇದೇ ಮಂಗಳವಾರ ಸ್ಥಳಕ್ಕೆ ಆಗಮಿಸಿ ರೈತರ ಸಮ್ಮುಖದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೇವೆ ಎಂದರು..

ಬೈಟ್: ಮೋಹನ್ ,ಏರ್ಪೋರ್ಟ್ ಅಧಿಕಾರಿ

ಈ ಕುರಿತು ಮಾತನಾಡಿದ ದೇವನಹಳ್ಳಿ ತಾಲ್ಲೂಕು ದಂಡನಾಯಕ ಕೇಶವಮೂರ್ತಿ, ಬೆಟ್ಟ ಕೋಟೆ ಜನರ ಸಮಸ್ಯೆಗಳನ್ನು ಏರ್ಪೋರ್ಟ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಖುದ್ದು ಅವರೇ ಬಂದು ಇಲ್ಲಿನ ಸಮಸ್ಯೆಯನ್ನು ನೋಡಿದ್ದಾರೆ.. ಮಂಗಳವಾರ ಇದೇ ಸ್ಥಳಕ್ಕೆ ಏರ್ಪೋರ್ಟ್ ಮೇಲಾಧಿಕಾರಿಗಳು ಬರಲಿದ್ದಾರೆ. ನಾವು ಸಹ ಅಂದು ಇಲ್ಲಿಗೆ ಬಂದು ಸಮಸ್ಯೆಯನ್ನು ಬಗೆಹರಿಸಿ ಶಾಶ್ವತ ಪರಿಹಾರ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ರು.. ಹಾಗೇ ಅಲ್ಲಿಯವರೆಗೂ ರನ್ ವೇ ಕಾಮಗಾರಿಯನ್ನು ಸ್ಟಾಪ್ ಮಾಡಲಾಗುತ್ತದೆ ಎಂದರು..

ಬೈಟ್ : ಕೇಶವ ಮೂರ್ತಿ, ದೇವನಹಳ್ಳಿ ತಾಶೀಲ್ದಾರರು

ಸಮಸ್ಯೆ ಬಗೆಹರಿಯುತ್ತದೆ ಎಂದು ಏರ್ಪೋರ್ಟ್ ಅಧಿಕಾರಿಗಳು ಮತ್ತು ದಂಡನಾಯಕರು ಭರವಸೆ ನೀಡಿದ್ರು, ಗ್ರಾಮದ ಜನರು ಅದನ್ನು ನಂಬುತ್ತಿಲ್ಲ.. ಎಲ್ಲ ಆಶ್ವಾಸನೆ ಯಂತೆ ಇದು ಕೂಡ ಟೊಳ್ಳು ಆಸ್ವಾಸನೆಯಾಗಿದೆ.. ಇಲ್ಲದಿದ್ದರೆ ಎಂದೋ ಬಗೆಹರಿಯಬೇಕಿದ್ದ ಸಮಸ್ಯೆ ಇನ್ನು ಬಗೆಹರಿದಿಲ್ಲ.. ಆದರೂ ಕೊನೆ ಅವಕಾಸ ಅಂತೇ, ಇಷ್ಟು ದಿನ ಕಾದಿದ್ದಿರಿ, ಇನ್ನೂ ಮೂರು ದಿನ‌ ಕಾಯೋಣ ಎಂದು ವೈಟ್ ಮಾಡ್ತಾ ಇದ್ದಿರಿ ಎಂದು ಗ್ರಾಮಸ್ಥರು ಹೇಳ್ತಾರೆ..

ಬೈಟ್: ಶ್ರೀನಿವಾಸ್, ಗ್ರಾಮಸ್ಥರು

ಒಟ್ಟಿನಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭದಿಂದ ಪ್ರಾರಾಂಭವಾದ ಧೂಳಿನ‌ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ.. ಇದಕ್ಕೆ ಶಾಶ್ವತ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ.. ಅದೇ ರೀತಿ ಈ ಸಲವು ಆಗದೇ ಸಮಸ್ಯೆ ಬಗೆಹರಿದರೆ ಸಾಕು..Body:NoConclusion:No

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.