ಬೆಂಗಳೂರು: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಸಚಿವ ಶಿವಕುಮಾರ ಇಂದು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು.
ಸಭೆಯಲ್ಲಿ ಕಾಂಗ್ರೆಸ್ ಸಚಿವ ಪ್ರಿಯಾಂಕ ಖರ್ಗೆ, ಶಾಸಕ ಶ್ರೀಮಂತ ಪಾಟೀಲ್ ಮತ್ತಿತರರು ಭಾಗವಹಿಸಿದ್ದರು. ಸಭೆಯಲ್ಲಿ ನಾಯಕರು ಸುದೀರ್ಘ ಚರ್ಚೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಪ್ರಸ್ತಾಪದಿಂದ ರಾಜ್ಯದಲ್ಲಿ ಉಂಟಾಗಿರುವ ಅಸ್ಥಿರತೆಯ ಕುರಿತು ಚರ್ಚೆ ನಡೆಸಿದ್ದಾರೆ.
ಶಾಸಕ ಶ್ರೀಮಂತ ಪಾಟೀಲ್ ಮಾತನಾಡಿ, ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ. ರಮೇಶ ಜಾರಕಿಹೊಳಿ ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ. ಅವರ ರಾಜೀನಾಮೆಗೂ ನನಗೂ ಸಂಬಂಧವಿಲ್ಲ. ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ. ನಮ್ಮ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇತ್ತು. ಈ ಬಗ್ಗೆ ಸಚಿವರ ಬಳಿ ಚರ್ಚೆ ಮಾಡಲು ಬಂದಿದ್ದೇನೆ. ಅದು ಬಿಟ್ಟು ಬೇರೆ ಯಾವುದೇ ವಿಚಾರ ಇಲ್ಲ ಎಂದರು.
ರಮೇಶ್ ಜಾರಕಿಹೊಳಿ ರಾಜೀನಾಮೆ ನಿರ್ಧಾರ ವಿಚಾರದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಮೇಶ್ ಜಾರಕಿಹೊಳಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಇನ್ನೂ ಕಾಲವಕಾಶ ಇದೆ. ರಾಜೀನಾಮೆ ವಿಚಾರ ಇದೂ ಒಂದು ಡೆಡ್ ಲೈನ್. ರಮೇಶ್ ರಾಜೀನಾಮೆ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದರು.
ಚಿಂಚೋಳಿ ಉಪಚುನಾವಣೆಯಲ್ಲಿ ಗೆಲುವು ನಮ್ಮದೇ. ಉಮೇಶ್ ಜಾಧವ್ ಹೇಗೆ ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ಎಲ್ರಿಗೂ ಗೊತ್ತು. ಪ್ರಾಮಾಣಿಕ ಆಡಳಿತ ಕೊಡ್ತೀವಿ ಅನ್ನೋ ಮೋದಿ ಇದರ ಬಗ್ಗೆ ಏನಂತಾರೆ? ಬಜೆಟ್ ಅಧಿವೇಶನ ನಡೆಯುವ ವೇಳೆ ಆಪರೇಷನ್ ಕಮಲದ ಬಗ್ಗೆಯೇ ಚರ್ಚೆ ಆಗಿದೆ. ಉಪ ಚುನಾವಣೆ ಯಲ್ಲಿ ಜನ ಖಂಡಿತಾ ನಮಗೆ ಬೆಂಬಲ ಕೊಡ್ತಾರೆ ಎಂದರು. ಬಿಜೆಪಿ ಯವರು ಮತ್ತೆ ಇನ್ನೊಂದು ಡೆಡ್ ಲೈನ್ ಕೊಟ್ಟಿದಾರೆ ಅಷ್ಟೇ. ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ ಎಂದು ಇದೇ ಸಂದರ್ಭ ನುಡಿದಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೋಳಿ ಸರ್ಕಾರಿ ನಿವಾಸದಿಂದ ಹೊರಗೆ ತೆರಳಿದ್ದಾರೆ. ಬೆಳಗಾವಿಯಿಂದ ಬಂದಿದ್ದ ಕೆಲ ಆಪ್ತರ ಜತೆ ಸಮಾಲೋಚಿಸಿದ ನಂತರ ಅವರು ಖಾಸಗಿ ವಾಹನದಲ್ಲಿ ಹೊರ ನಡೆದರು. ಎರಡು ಗಂಟೆ ನಂತರ ನಿವಾಸಕ್ಕೆ ವಾಪಾಸ್ಸಾಗಿದ್ದಾರೆ.