ETV Bharat / state

ಗೆಳೆಯನ ಬರ್ತ್​ಡೇ ಪಾರ್ಟಿ ಮುಗಿಸಿ ಟ್ರಿಪ್​ ಹೊರಟವರಿಗಾಗಿ ಕಾದು ಕುಳಿತಿದ್ದ ಜವರಾಯ!

ಸ್ನೇಹಿತನ ಬರ್ತ್​ಡೇ ಪಾರ್ಟಿ ಮುಗಿಸಿ ನಂದಿ ಬೆಟ್ಟಕ್ಕೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೇವನಹಳ್ಳಿಯ ಹಂದರಹಳ್ಳಿ ಬಳಿ ಅಪಘಾತ ಸಂಭವಿಸಿದೆ.

ಕಾರು
author img

By

Published : Aug 25, 2019, 4:30 AM IST

ಬೆಂಗಳೂರು: ಸ್ನೇಹಿತನ ಬರ್ತ್​ಡೇ ಪಾರ್ಟಿ ಮುಗಿಸಿ ನಂದಿ ಬೆಟ್ಟಕ್ಕೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ 3 ಜನ ಸ್ಥಳದಲ್ಲೇ ಮೃತಪಟ್ಟು, 4 ಜನ ಗಂಭೀರವಾಗಿ ಗಾಯಗೊಂಡ ಘಟನೆ ದೇವನಹಳ್ಳಿಯ ಹಂದರಹಳ್ಳಿ ಬಳಿ ನಡೆದಿದೆ.

ರಸ್ತೆಯಲ್ಲಿ ಪಲ್ಟಿಯಾಗಿರುವ ಕಾರು

ಸ್ನೇಹಿತರೆಲ್ಲಾ ಸೇರಿ ವೀಕೆಂಡ್​ ಟ್ರಿಪ್​ ಎಂಜಾಯ್​ ಮಾಡಲು ಕಾರಿನಲ್ಲಿ ನಂದಿ ಬೆಟ್ಟಕ್ಕೆ ಹೋಗುತ್ತಿದ್ದಾಗ ತಾಲೂಕಿನ ಹಂದರಹಳ್ಳಿ ಗ್ರಾಮದ ಬಳಿ ಮಹೀಂದ್ರಾ ಜೈಲೊ ಕಾರು ಪಲ್ಟಿಯಾಗಿದೆ. ಬಾಗೇಪಲ್ಲಿ ತಾಲೂಕಿನ ನಕ್ಕಲಪಲ್ಲಿ ಗ್ರಾಮದವರಾದ ಮಲ್ಲಿಕಾರ್ಜುನರೆಡ್ಡಿ, ನಾಗರಾಜ , ಅಶೋಕ ರೆಡ್ಡಿ ಸುಂದರ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದ ಗಿರೀಶ್​, ರಮೇಶ್, ಮಂಜುನಾಥ್​, ಅಶೋಕ್​ ಎಂಬುವವರು ಗಂಭೀರವಾಗಿ ಗಾಯಗೊಂಡು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಗ್ರಿ ಮುಗಿಸಿ ಕೆಲವರು ಕೆಲಸಕ್ಕೆ ಹೋಗುತ್ತಿದ್ರೆ ಮತ್ತೆ ಕೆಲವರು ಐಎಎಸ್ ಪರೀಕ್ಷೆ ಬರಯಲು ಸಜ್ಜಾಗಿದ್ರು. ಇದಕ್ಕಾಗಿ ಆವಲಹಳ್ಳಿ ಬಳಿ ಒಂದು ಮನೆ ಮಾಡಿಕೊಂಡು ಅಲ್ಲೇ ವಾಸವಿದ್ದರು. ಆದರೆ ವಿಧಿಯಾಟ ನೋಡಿ ಜೀವನದಲ್ಲಿ ಏನಾದರೂ ಸಾಧನೆ ಮಾಡಿ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕನಸು ಕಟ್ಟಿಕೊಂಡಿದ್ದು ಯುವಕರ ಆಸೆ ಒಂದೇ ಕ್ಷಣಕ್ಕೆ ನುಚ್ಚು ನೂರಾಗಿದ್ದು ದುರಾದೃಷ್ಟಕರ.

Intro:KN_BNG_04_24_accident_PKG_Ambarish_7203001
Slug: ಸೈನ್ ರೈಸ್ ನೋಡಲು ಹೋಗಿ ಮಸಣ ಸೇರಿದ ಯುವಕರು

ಬೆಂಗಳೂರು: ಅವರು ಇನ್ನು ಬಾಳಿ ಬದುಕಬೇಕಾದ ಹುಡುಗರು. ಆಗ ತಾನೆ ಎಜುಕೇಶನ್ ಮುಗಿಸಿ ಕೆಲಸ ಆರಂಭಿಸಿದ ಯಂಗ್ ಪೀಪಲ್ಸ್.. ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಬೇಕಿದ್ದ ಆ ಯುವಕರಿಗೆ ಆ ಒಂದು ಕ್ಷಣ ಅವರ ಎಲ್ಲಾ ಆಸೆಗಳನ್ನು ನುಚ್ಚು ನೂರು ಮಾಡ್ತು.. ಅಷ್ಟಕ್ಕು ಆಗಿದ್ದೇನು..? ಈ ಸ್ಟೋರಿ ನೋಡಿ..

ರಸ್ತೆಯಲ್ಲಿ ಚೆಲ್ಲಿದ ರಕ್ತದ ಕಲೆಗಳು.. ಯಾವುದೇ ಪ್ರಯೋಜನೆ ಬಾರದ ರೀತಿಯಲ್ಲಿ ಬಿದ್ದಿರುವ ಕಾರು.. ಇತ್ತ ಮಾರ್ಚರಿಯ ಮುಂದೆ ತಮ್ಮ ಮಕ್ಕಳು, ಸ್ನೇಹಿತರನ್ನು ಕಳೆದುಕೊಂಡು ದುಃಖದಲ್ಲಿರುವ ತಂದೆ ತಾಯಿ, ಅಣ್ಣ, ಸ್ನೇಹಿತರು.. ಇದೆಲ್ಲಾ ಕಂಡು ಬಂದಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಹಂದರಹಳ್ಳಿ ಮತ್ತು ಆಕಾಶ್ ಆಸ್ಪತ್ರೆಯ ಬಳಿ.. ತಮ್ಮ ಮಕ್ಕಳನ್ನು ಕಳೆದುಕೊಂಡು ಗೊಳೊ ಅಂತ ಕಣ್ಣೀರು ಹರಿಸುತ್ತಿರುವ ಮೃತರ ತಂದೆ ತಾಯಿಗಳನ್ನು ನೋಡಿದ್ರೆ ಎಂತಹವರ ಕಣ್ಣಲ್ಲೂ ನೀರು‌ ಬರದೆ ಇರದು..

ಇದಕ್ಕೆ ಕಾರಣ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಹೀಂದ್ರಾ ಜೈಲೊ ಕಾರು ಪಲ್ಟಿಯಾಗಿದ್ದು.. ಯಸ್, ತಾಲೂಕಿನ ಹಂದ್ರಹಳ್ಳಿ ಗ್ರಾಮದ ಬಳಿ ಕಾರು ಪಲ್ಟಿಯಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ನಕ್ಕಲಪಲ್ಲಿ ಗ್ರಾಮದವರಾದ ಮಲ್ಲಿಕಾರ್ಜುನರೆಡ್ಡಿ, ನಾಗರಾಜ , ಅಶೋಕ ರೆಡ್ಡಿ ಸುಂದರ್​ ಮೃತ ಪಟ್ಟರು. ಇನ್ನುಳಿದ ಗಿರೀಶ್​, ರಮೇಶ್​ , ಮಂಜುನಾಥ್​, ಅಶೋಕ್​ ಎನ್​ ವಿ ಗಂಭೀರ ಗಾಯಗೊಂಡು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

ಅವೆಲ್ಲಾ ಒಂದೊಂದು ಡಿಗ್ರಿ ಪಡದು ಕೆಲಸಕ್ಕೆ ಸೇರಿದ್ರು.. ಇನ್ನು ಕೆಲವರು ಐಎಎಸ್ ಪರೀಕ್ಷೆ ಬರಯಲು ಸಜ್ಜಾಗಿದ್ರು.. ಇದಕ್ಕಾಗಿ ಆವಲಹಳ್ಳಿ ಬಳಿ ಒಂದು ಮನೆ ಮಾಡಿಕೊಂಡು ಅಲ್ಲೇ ಇದ್ದರು.. ಇನ್ನು ವೀಕೆಂಡ್ ಅಂತ ಎಂಜಾಯ್ ಮಾಡಲು ನಂದಿಬೆಟ್ಟದ ಟ್ರಿಪ್ ಮಾಡಿದ್ರು.. ಇದರ ನಡುವೆ ತಮ್ಮ ಸ್ನೇಹಿತನ ಬರ್ತಡೆ ಪಾರ್ಟಿ.. ಪಾರ್ಟಿ ಮುಗಿಸಿಕೊಂಡು ಬೆಳಗ್ಗಿನ ಜಾವ ನಂದಿಬೆಟ್ಟಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.. ಈ ಘಟನೆಯಲ್ಲಿ ನಾಲ್ವರು ಸ್ಥಳದಲ್ಲಿ ಸಾವನ್ನಪಿದ್ರು.. ಆದರೆ ಇದರ ಕಡೆ ಆ ಮುಗ್ದ ಹುಡುಗರ ಮನೆಯವರಿಗೆ ಗೊತ್ತೇ ಇಲ್ಲ.. ಪೊಲೀಸರು ಸ್ಥಳಕ್ಕೆ ಹೋಗಿ‌ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ದಾಖಲು ಮಾಡಿದ್ದಾಗಲೇ‌ ಕುಟುಂಬದವರಿಗೆ ಗೊತ್ತಾಗಿದ್ದು..

ಬೈಟ್: ರಾಜಶೇಖರ ರೆಡ್ಡಿ, ಮೃತ ಅಸೋಕ್ ರೆಡ್ಡಿ ಅಣ್ಣ

ಇನ್ನು ಅಪಘಾತದಲ್ಲಿ ಇಂಜುರಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹುಡುಗರ ಸಂಬಂಧಿಕರು ಕೂಡ ತಮ್ಮ ಮಗನಿಗೆ ಏನಾಗಿದೆಯೋ ಎಂಬ ಆತಂಕದಲ್ಲೇ ಆಸ್ಪತ್ರೆಗೆ ಬಂದಿದ್ರು.. ಅದೃಷ್ಟವಶಾತ್ ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ‌ಎಂದು ತಿಳಿದು ಸಮಾಧಾನ ಮಾಡಿಕೊಂಡರು..

ಒಟ್ಟಿನಲ್ಲಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು.‌ತಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ನೂರಾರು ಕನಸು ಕಟ್ಟಿಕೊಂಡಿದ್ದು ಯುವಕರ ಆಸೆ ಒಂದೇ ಕ್ಷಣಕ್ಕೆ ನುಚ್ಚು ನೂರಾಗಿದ್ದು ದುರಾದೃಷ್ಠಕರ..

ಅಂಬರೀಶ್ ಜೊನ್ನಹಳ್ಳಿ ಈ ಟಿವಿ ಭಾರತ ಬೆಂಗಳೂರು

Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.