ETV Bharat / state

ಸರ್ಕಾರದ ಅಧಿಕಾರಿಗಳ ವರ್ಗಾವಣೆ ಅಸ್ತ್ರದಿಂದ ಸಾರ್ವಜನಿಕರಿಗೆ ಕಿರಿಕಿರಿ! - ಸರ್ಕಾರದ ವರ್ಗಾವಣೆ

ರಾಜ್ಯದಲ್ಲಿ ಸರ್ಕಾರಗಳು ಬದಲಾಗುತ್ತಿದ್ದಂತೆ ವರ್ಗಾವಣೆ ರೀತಿಯ ಅಸ್ತ್ರಗಳನ್ನು ‌ಸರ್ಕಾರಗಳು ಬಳಸುತ್ತಿವೆ. ಇದರ ಬಿಸಿ ಅಧಿಕಾರಿಗಳ ಜೊತೆಯಲ್ಲಿ ರೈತರು ಹಾಗೂ ಸಾರ್ವಜನಿಕರಿಗೆ ತಟ್ಟುತ್ತಿದೆ. ಇದೀಗ ಈ ಸಮಸ್ಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೂ ತಟ್ಟಿದೆ.

ಎಸಿ ಸ್ಥಾನಕ್ಕೆ ಪೈಪೋಟಿ: ರೈತರು, ಸಾರ್ವಜನಿಕರು ಹೈರಾಣು
author img

By

Published : Oct 18, 2019, 8:21 PM IST

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಗಳು ಬದಲಾದಂತೆ ಐಎಎಸ್, ಕೆಎಎಸ್, ಐಪಿಎಸ್ ಇನ್ನೂ ಇತರೆ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ವರ್ಗಾವಣೆಯೊಂದಿಗೆ ಬದಲಾವಣೆ ಆಗುವುದು ಸರ್ವೆ ಸಾಮಾನ್ಯ. ಆದರೆ ಕೆಲವೊಂದು ಬಾರಿ ವರ್ಗಾವಣೆಯಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಕೆಲವೊಮ್ಮೆ ಸಮಸ್ಯೆ ಬಂದಾಗ ಮಾತ್ರ ಜನರ ತೊಂದರೆಗೊಳಗಾಗುತ್ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ವಿಭಾಗಾಧಿಕಾರಿಗಳ ವರ್ಗಾವಣೆಯಿಂದಾಗಿ ರೈತರು ಹಾಗೂ ಸಾರ್ವಜನಿಕರ‌ ಕೇಸ್ ಫೈಲ್​ಗಳು ಇತ್ಯರ್ಥವಾಗದೇ, ಪ್ರತಿ ದಿನ ಎಸಿ ಕಚೇರಿಗೆ ಭೇಟಿ ನೀಡಿ, ಬರಿಗೈಯಲ್ಲಿ ವಾಪಸಾಗುವಂತಾಗಿದೆ.

ಎಸಿ ಸ್ಥಾನಕ್ಕೆ ಪೈಪೋಟಿ: ರೈತರು, ಸಾರ್ವಜನಿಕರು ಹೈರಾಣು

ಕಳೆದ ಮೈತ್ರಿ ಸರ್ಕಾರದಲ್ಲಿ ಕೆಎಎಸ್ ಅಧಿಕಾರಿ ಸಿ.ಮಂಜುನಾಥ್ ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಮಂಜುನಾಥ್ ಸ್ಥಾನಕ್ಕೆ ಕೆಎಎಸ್​​ ಅಧಿಕಾರಿ ಬಿ.ಆರ್ ಹರೀಶ್ ನಾಯ್ಕ್ ವರ್ಗಾವಣೆಗೊಂಡಿದ್ದಾರೆ. ಈ ವೇಳೆ ಮಂಜುನಾಥ್ ವರ್ಗಾವಣೆ ಆದ 7 ತಿಂಗಳಲ್ಲೇ ಮತ್ತೊಂದು ಕಡೆ ವರ್ಗಾವಣೆಯನ್ನು ಪ್ರಶ್ನಿಸಿ ಕೆಇಟಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಜತೆಗೆ ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಯಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು. ಹೀಗೆ ಈ ಇಬ್ಬರು ಕೆಎಎಸ್ ಅಧಿಕಾರಿಗಳ ನಡುವೆ ತಿಕ್ಕಾಟ ಶುರುವಾಗಿದ್ದು ಇದರಿಂದ ರೈತರು ಮತ್ತು ಸಾರ್ವಜನಿಕರು ಹೈರಾಣಗುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ಒಟ್ಟು ನಾಲ್ಕು ತಾಲೂಕುಗಳ ಸರ್ಕಾರಿ ಕೆಲಸ ಕಾರ್ಯಗಳು ಇದೇ ಕಛೇರಿಯಲ್ಲಿ ನಡೆಯಬೇಕು‌. ಆದರೆ ಈ ಇಬ್ಬರ ಅಧಿಕಾರಿಗಳ ತಿಕ್ಕಾಟದಿಂದ ನೂರಾರು ಕಿ.ಮೀ ದೂರದಿಂದ ಬರುವ ರೈತರು ಖಾಲಿ ಚೇರ್ ನೋಡಿ ವಾಪಾಸ್ ಆಗುತ್ತಿದ್ದಾರೆ. ಯಾರೇ ಆಗಲಿ ಅವಧಿ ಮುಗಿಯುವವರೆಗೂ ಒಬ್ಬರೇ ಅಧಿಕಾರಿ ಇದ್ದರೆ ಜನರ ಸಮಸ್ಯೆಗಳು ಬಗೆಹರಿಯುತ್ತವೆ. ಇಂತಹ ವ್ಯವಸ್ಥೆ ವಿರುದ್ಧ ರೈತರು ಹಾಗೂ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

Intro:KN_BNG_01_18_AC post_Gondala_Ambarish_7203301
Slug : ಸರ್ಕಾರದ ವರ್ಗಾವಣೆ ಅಸ್ತ್ರದಿಂದ ಸಾರ್ವಜನಿಕರಿಗೆ ಕಿರಿಕಿರಿ
ಎಸಿ ಸ್ಥಾನಕ್ಕೆ ಪೈಪೋಟಿ ರೈತರು, ಸಾರ್ವಜನಿಕರು ಹೈರಾಣು

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಗಳು ಬದಲಾಗುತ್ತಿದ್ದಂತೆ ವರ್ಗಾವಣೆಯ ಅಸ್ತ್ರಗಳನ್ನು ‌ಹೊಸ ಸರ್ಕಾರಗಳು ಬಳಸುತ್ತಿವೆ.. ಇತ್ತೀಚೆಗೆ ಟ್ರಾನ್ಸ್ ಪಾರ್ ಅನ್ನೋದು ಒಂದು ದಂದೆಯಾಗಿ‌ ಪರಿಣಮಿಸಿದೆ.. ಇದರ ಬಿಸಿ ಅಧಿಕಾರಿಗಳ ಜೊತೆಯಲ್ಲಿ ರೈತರು ಹಾಗೂ ಸಾರ್ವಜನಿಕರಿಗೆ ತಟ್ಟುತ್ತಿದೆ.. ಇದೀಗ ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೂ ತಟ್ಟಿದೆ.. ಅದರ ಡೀಟೆಲ್ಸ್ ಇಲ್ಲಿದೆ..

ರಾಜ್ಯದಲ್ಲಿ ಸರ್ಕಾರಗಳು ಬದಲಾದಂತೆ ಐಎಎಸ್, ಕೆಎಎಸ್, ಐಪಿಎಸ್ ಇನ್ನೂ ಇತರೆ ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳು ವರ್ಗಾವಣೆಯೊಂದಿಗೆ ಬದಲಾವಣೆ ಆಗುವುದು ಸರ್ವೆ ಸಾಮಾನ್ಯ. ಆದ್ರೆ ಕೆಲವೊಂದು ಬಾರಿ ವರ್ಗಾವಣೆಯಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಕೆಲವೊಮ್ಮೆ ಸಮಸ್ಯೆ ಬಂದಾಗ ಮಾತ್ರ ಜನರ ಹೈರಣ್ಣಾಗ್ತಾರೆ.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪವಿಭಾಗಾಧಿಕಾರಿಗಳ ವರ್ಗಾವಣೆಯ ಡ್ರಾಮದಿಂದ ರೈತರು ಹಾಗೂ ಸಾರ್ವಜನಿಕರ‌ ಕೇಸ್ ಪೈಲ್ ಗಳು ಇತ್ಯರ್ಥ ವಾಗದೇ, ಪ್ರತಿ ದಿನ ಎಸಿ ಕಚೇರಿಗೆ ಬೇಟಿ ನೀಡಿ, ಬರಿಗೈಯಲ್ಲಿ ವಾಪಸ್ ಬರುವಂತಾಗಿದೆ..

ಉಪ ವಿಭಾಗಾಧಿಕಾರಿಗಳ ಖಾಲಿ ಚೇರ್.. ಕಛೇರಿ ಮುಂದೆ ಎಸಿ ಗಾಗಿ ಕಾದು ಕುಳಿತಿರುವ ರೈತರು ಸಾರ್ವಜನಿಕರು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿಗಳ ಕಛೇರಿಯಲ್ಲಿ. ಹೌದು ಕಳೆದ ಮೈತ್ರಿ ಸರ್ಕಾರದಲ್ಲಿ ಸಿ.ಮಂಜುನಾಥ್ ಎಂಬ ಕೆಎಎಸ್ ಅಧಿಕಾರಿ ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಮಂಜುನಾಥ್ ಸ್ಥಾನಕ್ಕೆ ಬಿ.ಆರ್ ಹರೀಶ್ ನಾಯ್ಕ್ ಎಂಬ ಕೆಎಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿದರು. ಈ ವೇಳೆ ಮಂಜುನಾಥ್ ವರ್ಗಾವಣೆ ಆದ 7 ತಿಂಗಳಲ್ಲೆ ಮತ್ತೊಂದು ಕಡೆ ವರ್ಗಾವಣೆಯನ್ನು ಪ್ರಶ್ನಿಸಿ ಕೆಇಟಿ ಯಲ್ಲಿ ಪ್ರಕರಣ ದಾಖಲು ವರ್ಗಾವಣೆ ರದ್ದು ಪಡಿಸಿ ಮತ್ತೆ ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಯಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು.. ಹೀಗೆ ಈ ಇಬ್ಬರು ಕೆಎಎಸ್ ಅಧಿಕಾರಿ ಅಧಿಕಾರಿಗಳ ನಡುವೆ ತಿಕ್ಕಾಟ ಶುರುವಾಗಿದೆ ಇದ್ರಿಂದ ರೈತರು ಮತ್ತು ಸಾರ್ವಜನಿಕರು ಹೈರಾಣಗುತ್ತಿದ್ದಾರೆ..

ಬೈಟ್ : ಮಹೇಂದ್ರ , ಸಾರ್ವಜನಿಕ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ಒಟ್ಟು ನಾಲ್ಕು ತಾಲೂಕುಗಳ ಸರ್ಕಾರಿ ಕೆಲಸ ಕಾರ್ಯಗಳು ಇದೇ ಕಛೇರಿಯಲ್ಲಿ ನಡೆಯಬೇಕು‌. ಆದ್ರೆ ಈ ಇಬ್ಬರ ಅಧಿಕಾರಿಗಳ ತಿಕ್ಕಾಟದಿಂದ ನೂರಾರು ಕಿ.ಮೀ ದೂರದಿಂದ ಬರುವ ರೈತರು ಖಾಲಿ ಚೇರ್ ನೋಡಿ ವಾಪಾಸ್ ಆಗುತ್ತಿದ್ದಾರೆ.. ಯಾರೇ ಆಗಲಿ ಅವದಿ ಮುಗಿಯುವವರೆಗೂ ಒಬ್ಬರೇ ಅಧಿಕಾರಿ ಇದ್ದರೆ ಜನರ ಸಮಸ್ಯೆಗಳು ಬಗೆಹರಿಯುತ್ತವೆ.. ಒದರ ಕಡೆ ಸಂಬಂಧಿಸಿದಂತೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.. ಈ ರೀತಿ ಅವ್ಯವಸ್ಥೆಯಿಂದ ಹೈರಾಣಾಗಿರುವುದು ಮಾತ್ರ ಜನರು.. ಇಂತಹ ವ್ಯವಸ್ಥೆ ವಿರುದ್ಧ ರೈತರು ಹಾಗೂ ಸಾರ್ವಜನಿಕರು ಹಿಡಿ ಶಾಪ ಆಗುತ್ತಿದ್ದಾರೆ.

ಬೈಟ್ : ಹರೀಶ್, ರೈತ

ಒಟ್ಟಿನಲ್ಲಿ ಸರ್ಕಾರಗಳು ಬದಲಾಗುವ ಸಂದರ್ಭದಲ್ಲಿ ಈ ರೀತಿ ಅಧಿಕಾರಿಗಳನ್ನು ಬದಲು ಮಾಡಿದ್ರೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಯಾವ ರೀತಿ ತೊಂದರೆ ಆಗುತ್ತದೆ ಎಂಬುದನ್ನು ಸರ್ಕಾರಿ ಕಣ್ಬಿಟ್ಟು ನೋಡಬೇಕಾಗುತ್ತದೆ.. ಇನ್ನಾದ್ರೂ ಎಚ್ಚೇತ್ತುಕೊಂಡು ವರ್ಗಾವಣೆಯನ್ನು ಅವಶ್ಯಕತೆ ಇರುವ ಕಡೆ ಮಾತ್ರ ಮಾಡಬೇಕೇ ವಿನಃ ಬೇಕಾಬಿಟ್ಟಿ ಮಾಡಬಾರದು ಅನ್ನೋದು ಜನರ ಮಾತಾಗಿದೆ..

ಅಂಬರೀಶ್, ಈಟಿವಿ ಭಾರತ ಬೆಂಗಳೂರು
Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.