ದೊಡ್ಡಬಳ್ಳಾಪುರ : ರಸ್ತೆ ಬದಿ ನಿಂತಿದ್ದ ತಾಯಿ ಹಾಗೂ ಮಗುನಿವ ಮೇಲೆ ಟ್ರ್ಯಾಕ್ಟರ್ವೊಂದು ಹರಿದ ಘಟನೆ ನಗರದ ಅರಳು ಮಲ್ಲಿಗೆ ಬಳಿ ನಡೆದಿದೆ. ಘಟನೆಯಲ್ಲಿ ತಾಯಿ ಉಮಾ (26) ಮೃತಪಟ್ಟರೆ, ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.
![A mother death in road accident](https://etvbharatimages.akamaized.net/etvbharat/prod-images/kn-bng-04-accident-av-7208821_13062020222206_1306f_1592067126_65.jpg)
ಮಗುವಿಗೆ ಮೂತ್ರ ವಿಸರ್ಜನೆ ಮಾಡಿಸಲು ರಸ್ತೆ ಬದಿ ನಿಂತಿದ್ದ ತಾಯಿ ಹಾಗೂ ಮಗುವಿನ ಮೇಲೆ ಏಕಾಏಕಿ ಟ್ರ್ಯಾಕ್ಟರ್ ನುಗ್ಗಿದ್ದರಿಂದ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ. ಮೃತ ಮಹಿಳೆ ನಾಗಸಂದ್ರ ನಿವಾಸಿ ಎಂದು ತಿಳಿದು ಬಂದಿದೆ.
![A mother death in road accident](https://etvbharatimages.akamaized.net/etvbharat/prod-images/kn-bng-04-accident-av-7208821_13062020222206_1306f_1592067126_204.jpg)
ಮಗುವಿನೊಂದಿಗೆ ಪತಿ ನಾಗೇಶ್ ಜೊತೆ ಬೈಕ್ನಲ್ಲಿ ಊರಿಗೆ ತೆರಳುತ್ತಿದ್ದಾಗ ದಾರಿ ಮಧ್ಯೆ ಮೂತ್ರ ವಿಸರ್ಜನೆಗಾಗಿ ನಿಂತಿದ್ದರು. ಈ ವೇಳೆ ರಸ್ತೆ ಬದಿ ಬೈಕ್ ನಿಲ್ಲಿಸಿದಾಗ ಟ್ರ್ಯಾಕ್ಟರ್ ಏಕಾಏಕಿ ಇವರ ಮೇಲೆಯೇ ನುಗ್ಗಿದೆ. ಘಟನೆಯಲ್ಲಿ ಉಮಾ ತೀವ್ರ ಗಾಯಗೊಂಡಿದ್ದರಿಂದ ಸ್ಥಳೀಯರ ಸಹಾಯದೊಂದಿಗೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
![A mother death in road accident](https://etvbharatimages.akamaized.net/etvbharat/prod-images/kn-bng-04-accident-av-7208821_13062020222206_1306f_1592067126_795.jpg)
ಅದೃಷ್ಟವಶಾತ್ ಮಗುವಿಗೆ ಯಾವುದೇ ತೊಂದರೆಯಾಗಿಲ್ಲ. ಇನ್ನು ವಾಹನದ ಬಳಿ ನಿಂತಿದ್ದ ನಾಗೇಶನಿಗೂ ಕೂಡ ಗಾಯಗಳಾಗಿವೆ. ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದಲೇ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.