ಆನೇಕಲ್: ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬನ ಮೇಲೆ ಖಾಸಗಿ ಬಸ್ ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಆನೇಕಲ್ ತಾಲೂಕಿನ ಬನ್ನೇರುಘಟ್ಟ ವೃತ್ತದಲ್ಲಿ ಈ ಘಟನೆ ಸಂಭವಿಸಿದೆ. ಬಸ್ ಚಾಲಕ ಅಜಾಗರೂಕತೆಯಿಂದ ವೇಗವಾಗಿ ಚಲಿಸಿದ್ದ ಪರಿಣಾಮ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಬನ್ನೇರುಘಟ್ಟ ವೃತ್ತದಲ್ಲಿ ಬಹಳಷ್ಟು ತಿರುವುಗಳಿದ್ದು, ಭಾನುವಾರದ ಭರಾಟೆಯಲ್ಲಿ ಖಾಸಘಿ ಬಸ್ ವೇಗವಾಗಿ ಚಲಿಸಿದೆ. ರಸ್ತೆ ದಾಟುವ ವ್ಯಕ್ತಿಯನ್ನು ಗಮನಿಸದೆ ವೇಗವಾಗಿ ಬಂದ ಬಸ್ ವ್ಯಕ್ತಿಯ ಮೇಲೆ ಹರಿದಿದೆ. ಮುಂದಿನ ಚಕ್ರ ಹರಿದ ಪರಿಣಾಮ ಅಪರಿಚಿತ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರ ದೇಹ ಚಹರೆ ಕಾಣದಷ್ಟು ಛಿದ್ರಗೊಂಡಿದೆ.
ಅಪಘಾತ ನಡೆದ ಬಳಿಕ ಬಸ್ ಚಾಲಕ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.