ದೊಡ್ಡಬಳ್ಳಾಪುರ: ಆನ್ಲೈನ್ನಲ್ಲಿ ಪಾಠ ಕೇಳುತ್ತಿದ್ದ ಬಾಲಕನೊಬ್ಬ ನಿಗೂಢ ರೀತಿಯಲ್ಲಿ ಮೃತಪಟ್ಟಿರುವ ಘಟನೆ ತಾಲೂಕಿನ ದರ್ಗಾಜೋಗಹಳ್ಳಿಯಲ್ಲಿ ನಡೆದಿದೆ.
ಮಂಜುನಾಥ್ ಎಂಬುವರ ಮಗ ವಿಶ್ವಾಸ್ (10) ಮೃತಪಟ್ಟಿರುವ ಬಾಲಕ ಎಂದು ತಿಳಿದು ಬಂದಿದೆ.
ಬಾಲಕನ ಸಾವು ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮೃತ ಬಾಲಕ ವಿಶ್ವಾಸ್ ಇಲ್ಲಿನ ಖಾಸಗಿ ವಿದ್ಯಾಸಂಸ್ಥೆಯಲ್ಲಿ 5ನೇ ತರಗತಿ ಓದುತ್ತಿದ್ದ. ಕೊರೊನಾ ಹಿನ್ನೆಲೆ ಆನ್ಲೈನ್ನಲ್ಲಿ ಪಾಠ ಮಾಡಲಾಗುತ್ತಿತ್ತು. ನಿನ್ನೆ ಮಧ್ಯಾಹ್ನ ಮೂರು ಗಂಟೆಗೆ ಕ್ಲಾಸ್ ಇದ್ದ ಕಾರಣ ಆತನ ಪೋಷಕರು ರೂಮ್ ಒಳಗೆ ಬಾಲಕನನ್ನು ಕಳುಹಿಸಿದ್ದರು. ಒಳ ಹೋದ ಬಾಲಕ ವಿಶ್ವಾಸ್, ಜೋಕಾಲಿ ಒಳಗೆ ಕುಳಿತು ಪಾಠ ಕೇಳುತ್ತಿದ್ದ. ಗಂಟೆಗಳ ಬಳಿಕ ಹೊರಗೆ ಬರದಿರುವುದನ್ನು ಕಂಡು ಅನುಮಾನದಿಂದ ಒಳಗೆ ಹೋಗಿ ನೋಡಿದಾಗ ಬಾಲಕ ಮೃತಪಟ್ಟಿರುವುದು ಕಂಡುಬಂದಿದೆ.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.