ETV Bharat / state

ರಾಷ್ಟ್ರಮಟ್ಟದ ಕುಸ್ತಿಪಟು ಕೊರೊನಾಗೆ ಬಲಿ: ಕರ್ನಾಟಕದ ಕೇಸರಿ ಇನ್ನಿಲ್ಲ.. - national level wrestler mane died

ಮಾಜಿ ಕುಸ್ತಿಪಟು, ಮುಧೋಳ ನಗರಸಭಾ ಅಧ್ಯಕ್ಷ ಸಿದ್ದನಾಥ ಮಾನೆ (34) ಕೋವಿಡ್​​ಗೆ ಬಲಿಯಾಗಿದ್ದಾರೆ. ಐದು ದಿನದ ಹಿಂದೆ ಮೃತರ ತಾಯಿ ಕೂಡ ಕೋವಿಡ್​ನಿಂದ ಸಾವನ್ನಪ್ಪಿದ್ದರು.

ರಾಷ್ಟ್ರಮಟ್ಟದ ಕುಸ್ತಿಪಟು ಕೊರೊನಾಗೆ ಬಲಿ
ರಾಷ್ಟ್ರಮಟ್ಟದ ಕುಸ್ತಿಪಟು ಕೊರೊನಾಗೆ ಬಲಿ
author img

By

Published : May 23, 2021, 4:44 PM IST

Updated : May 23, 2021, 5:42 PM IST

ಬಾಗಲಕೋಟೆ: ರಾಷ್ಟ್ರಮಟ್ಟದ ಕುಸ್ತಿಪಟು, ಮುಧೋಳ ನಗರಸಭಾ ಅಧ್ಯಕ್ಷ ಕೋವಿಡ್​​ಗೆ ಬಲಿಯಾಗಿದ್ದಾರೆ.

ನಗರಸಭಾ ಅಧ್ಯಕ್ಷ ಸಿದ್ದನಾಥ ಮಾನೆ (34) ಕೋವಿಡ್​​ನಿಂದ ಸಾವನ್ನಪ್ಪಿದ್ದಾರೆ. ಕಳೆದ 5 ದಿನಗಳ ಹಿಂದೆಯಷ್ಟೇ ಮನೆಯಲ್ಲಿ ಕೋವಿಡ್​​ನಿಂದ ಸಿದ್ದನಾಥ ತಾಯಿ ಸಹ ಮೃತಪಟ್ಟಿದ್ದರು.

ಬೆಳಗಾವಿಯಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಿದ್ದನಾಥ ಮಾನೆ ಸಾವನ್ನಪ್ಪಿದ್ದಾರೆ. ಮೃತರ ತಂದೆಗೂ ಸಹ ಕೊರೊನಾ ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾನೆ ನಿಧನಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಂತಾಪ ವ್ಯಕ್ತಪಡಿಸಿದ್ದಾರೆ.

ಕುಸ್ತಿ ಪಟುವಾಗಿದ್ದ ಸಿದ್ದನಾಥ ಮಾನೆ ಎರಡು ಬಾರಿ ಕರ್ನಾಟಕ ಕೇಸರಿ, ಒಂದು ಬಾರಿ ಕರ್ನಾಟಕ ಕಂಠೀರವ ಹಾಗೂ 5 ಬೆಳ್ಳಿ ಗದೆ, 50ಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ್ದರು‌. 2009 ಸಾಲಿನಲ್ಲಿ ಹಾಗೂ 2010 ರಲ್ಲಿ ಎರಡು ಬಾರಿ ಮೈಸೂರಲ್ಲಿ ನಡೆದ ದಸರಾ ಪ್ರಶಸ್ತಿಗೆ ಭಾಜನರಾಗಿದ್ದರು. 2012 ರಲ್ಲಿ ರಾಜ್ಯದ ಉತ್ಕೃಷ್ಟ ದಸರಾ ಕಂಠೀರವ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಇವರು ಈಗ ಕೊರೊನಾದಿಂದ ಮೃತಪಟ್ಟಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Last Updated : May 23, 2021, 5:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.