ETV Bharat / state

ಹೆಣ್ಣು ಹೆತ್ತಿದ್ದಕ್ಕೆ ಪತಿ-ಅತ್ತೆಯ ಕಿರುಕುಳ.. ಮನನೊಂದ ಪತ್ನಿ ಆತ್ಮಹತ್ಯೆ - ಬಾಗಲಕೋಟೆ

ಹೆಣ್ಣು ಹುಟ್ಟಿರುವುದಕ್ಕೆ ಅತ್ತೆ ದಿನಾಲು ಕಿರಿಕಿರಿ ನೀಡುತ್ತಿದ್ದಳು. ಗಂಡ ಮದ್ಯಪಾನ ಮಾಡಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ..

ಮನನೊಂದ ಪತ್ನಿ ಆತ್ಮಹತ್ಯೆ
ಮನನೊಂದ ಪತ್ನಿ ಆತ್ಮಹತ್ಯೆ
author img

By

Published : May 21, 2021, 10:04 PM IST

ಬಾಗಲಕೋಟೆ : ಅತ್ತೆ ಕಿರುಕಳ ತಡೆಯಲಾಗದೆ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀಳಗಿ ಪಟ್ಟಣದಲ್ಲಿ ನಡೆದಿದೆ.

ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದ್ದಕ್ಕೆ ಪ್ರತಿ ದಿನ ಅತ್ತೆ ಹಾಗೂ ಪತಿ ಕಿರುಕಳ‌‌ ನೀಡುತ್ತಿದ್ದರಂತೆ. ಕಳೆದ ರಾತ್ರಿ ಪತಿ-ಪತ್ನಿ ನಡುವೆ ಗಲಾಟೆ ನಡೆದಿದ್ದು, ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕೌಸರ ಮೈಬೂಬ ಪಠಾಣ (24) ಮೃತ ಮಹಿಳೆ ಎಂದು ತಿಳಿದು ಬಂದಿದೆ. ಕಳೆದ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ಮೃತ ಮಹಿಳೆಗೆ ಎರಡು ಹೆಣ್ಣುಮಕ್ಕಳು ಇದ್ದಾರೆ.

ಹೆಣ್ಣು ಹುಟ್ಟಿರುವುದಕ್ಕೆ ಅತ್ತೆ ದಿನಾಲು ಕಿರಿಕಿರಿ ನೀಡುತ್ತಿದ್ದಳು. ಗಂಡ ಮದ್ಯಪಾನ ಮಾಡಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಘಟನೆ ಸಂಬಂಧ ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಹಾಗೂ ಅತ್ತೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.