ETV Bharat / state

ಹಲ್ಲೆಗೊಳಗಾಗಿದ್ದ ಬಸ್​ ಕಂಡಕ್ಟರ್​ ಆರೋಗ್ಯ ವಿಚಾರಿಸಿದ ವಿಜಯಾನಂದ ಕಾಶಪ್ಪನವರ - attack on bagalakote bus conductor

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಹುನುಗುಂದ ತಾಲೂಕಿನ ಮುರೋಳ ಗ್ರಾಮದ ಬಳಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸ್ ಕಂಡಕ್ಟರ್ ಮುರಗೇಶ ಹುಲ್ಲಳ್ಳಿ ಆರೋಗ್ಯ ವಿಚಾರಿಸಿದರು. ಅಲ್ಲದೆ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದರು.

vijayananda-kashappanavar-met-bus-conductor
ವಿಜಯಾನಂದ ಕಾಶಪ್ಪನವರ
author img

By

Published : Feb 4, 2020, 5:28 PM IST

ಬಾಗಲಕೋಟೆ : ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸ್ ಕಂಡಕ್ಟರ್ ಮುರಗೇಶ ಹುಲ್ಲಳ್ಳಿಯವರನ್ನು, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ‌ ಮಾಡಿ ಆರೋಗ್ಯ ವಿಚಾರಿಸಿದರು.

ಜಿಲ್ಲೆಯ ಹುನಗುಂದ ತಾಲೂಕಿನ ಮರೋಳ ಗ್ರಾಮದ ಬಳಿ ಕಳೆದ ರಾತ್ರಿ ಬಸ್ ಕಂಡಕ್ಟರ್ ಮುರಗೇಶ ಹುಲ್ಲಳ್ಳಿ ಎಂಬುವವರು ಮೇಲೆ ಸುಮಾರು ಹತ್ತಕ್ಕೂ ಹೆಚ್ಚು ಜನರ ಗುಂಪು ಬಂದು, ಬಸ್ ನಿಲ್ಲಿಸಿ ಖಾರದ ಪುಡಿ ಎರಚಿ ಮಾರಣಾಂತಿಕ ಹಲ್ಲೆ ಮಾಡಿತ್ತು. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಕಂಡಕ್ಟರ್​ನನ್ನು ನಗರದ ಕೆರೂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಇಂದು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುರಗೇಶ ಹುಲ್ಲಳ್ಳಿ ಮಾತನಾಡಿ, ಘಟನೆ ನಡೆದಿರುವ ಬಗ್ಗೆ ವಿವರ ನೀಡಿದರು.

ಹಲ್ಲೆಗೊಳಗಾಗಿದ್ದ ಬಸ್​ ಕಂಡಕ್ಟರ್​ ಆರೋಗ್ಯ ವಿಚಾರಿಸಿದ ವಿಜಯಾನಂದ ಕಾಶಪ್ಪನವರ

ನಂತರ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಕರ್ತವ್ಯದ ಮೇಲೆ ಇದ್ದ ಕಂಡಕ್ಟರ್​ಗೆ ಹಲ್ಲೆ ಮಾಡಿರುವುದು ಖಂಡನೀಯವಾಗಿದೆ. ಶಾಸಕರ ಹೆಸರು ಹೇಳಿಕೊಂಡು ಗುಂಡಾಗಿರಿ ಮಾಡುತ್ತಿರುವ ಇಂತಹವರ ಮೇಲೆ‌ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಈಗಾಗಲೇ 12 ಜನರ ಮೇಲೆ ದೂರು ದಾಖಲಾಗಿದ್ದು, ಇದುವರೆಗೂ ಪೊಲೀಸರು ಯಾರನ್ನು ಬಂಧನ ಮಾಡಿಲ್ಲ, ಪೊಲೀಸ್ ಅಧಿಕಾರಿಗಳು ಸಹ ಶಾಸಕರ ಕೈ ಗೊಂಬೆ ಆಗಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ, ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

Intro:Anchor

Body:ದುಷ್ಯಕರ್ಮಿಗಳಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸ್ ಕಂಡಕ್ಟರ್ ಮುರಗೇಶ ಹುಲ್ಲಳ್ಳಿ ಯವರಿಗೆ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆಸ್ಪತ್ರೆಗೆ ಭೇಟ್ಟಿ‌ ನೀಡಿ ಆರೋಗ್ಯ ವಿಚಾರಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಮರೋಳ ಗ್ರಾಮದ ಬಳಿ ಕಳೆದ ರಾತ್ರಿ ಬಸ್ ಕಂಡಕ್ಟರ್ ಮುರಗೇಶ ಹುಲ್ಲಳ್ಳಿ ಎಂಬುವವರು ಮೇಲೆ ಸುಮಾರು ಹತ್ತುಕ್ಕೂ ಹೆಚ್ಚು ಜನರ ಗುಂಪು ಬಂದು,ಬಸ್ ನಿಲ್ಲಿಸಿ ಖಾರದ ಪುಡಿ ಎರಚಿ ಮಾರಣಾಂತಿಕ ಹಲ್ಲೆ ಮಾಡಿದ್ದರು.ತೀವ್ರ ಗಾಯಗೊಂಡ ಹಿನ್ನೆಲೆ ಬಾಗಲಕೋಟೆ ಯ ಕೆರೂಡಿ ಆಸ್ಪತ್ರೆಗೆ ಕಳೆದ ರಾತ್ರಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾಗಿರುವ ವಿಜಯಾನಂದ ಕಾಶಪ್ಪನವರ ಇಂದು ಬಾಗಲಕೋಟೆ ನಗರದ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.ಈ ಸಂದರ್ಭದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುರಗೇಶ ಹುಲ್ಲಳ್ಳಿ ಮಾತನಾಡಿ,ಘಟನೆ ನಡೆದಿರುವ ಬಗ್ಗೆ ವಿವರ ನೀಡಿದರು.
ನಂತರ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಈ ಟಿವಿ,ಭಾರತ ದೊಂದಿಗೆ ಮಾತನಾಡಿ,ಹುನಗುಂದ ಮತಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲ ಅವರ ಬೆಂಬಲಿಗರಾದ ಅಶೋಕ ಬಂಡರಗಲ್ಲ್ ಕರ್ತವ್ಯ ಮೇಲೆ ಇದ್ದ ಕಂಡಕ್ಟರ್ ಗೆ ಹಲ್ಲೆ ಮಾಡಿರುವುದು ಖಂಡನೀಯವಾಗಿದೆ.ಶಾಸಕರ ಹೆಸರು ಹೇಳಿಕೊಂಡು ಗುಂಡಾಗಿರಿ ಮಾಡುತ್ತಿರುವ ಇಂತಹ ಮೇಲೆ‌ ಪೋಲಿಸ್ ರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.ಈಗಾಗಲೇ 12 ಜನರ ಮೇಲೆ ದೂರು ದಾಖಲಾಗಿದ್ದು, ಇದುವರೆಗೂ ಪೊಲೀಸ್ ರು ಯಾರನ್ನು ಬಂಧನ ಮಾಡಿಲ್ಲ.ಪೊಲೀಸ್ ಅಧಿಕಾರಿಗಳು ಸಹ ಶಾಸಕರ ಕೈ ಗೊಂಬೆ ಆಗಿದ್ದಾರೆ ಎಂದು ಆರೋಪಿಸಿ,ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ, ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು...

ಬೈಟ್-- ವಿಜಯಾನಂದ ಕಾಶಪ್ಪನವರ ( ಮಾಜಕಾಶಪ್ಪನವರ

Conclusion:ಈ ಟಿವಿ,ಭಾರತ, ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.