ETV Bharat / state

ಅಪಘಾತಕ್ಕೊಳಗಾದ ವೃದ್ಧನಿಗೆ ವಾಹನ ನಿಲ್ಲಿಸಿ ಉಪಚಾರ... ಮಾನವೀಯತೆ ಮೆರೆದ ವೀಣಾ ಕಾಶಪ್ಪನವರ್​​​ - ವೀಣಾ ಕಾಶಪ್ಪನವರ್​

ಬಾಗಲಕೋಟೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರು ರಸ್ತೆ ಅಪಘಾತದಿಂದ ತೊಂದರೆಗೆ ಒಳಗಾಗಿದ್ದ ವೃದ್ಧನಿಗೆ ನೀರು ಕೊಟ್ಟು ಉಪಚರಿಸಿ ತಾಲೂಕು ಆಸ್ಪತ್ರೆಗೆ ಕರೆ ಮಾಡಿ, ಅಪಘಾತಕ್ಕೊಳಗಾದವರನ್ನು ಆರೈಕೆ ಮಾಡುವಂತೆ ವೈದ್ಯರಿಗೆ ತಿಳಿಸಿ ತಮ್ಮ ಕಡೆಯವರ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

ವೀಣಾ ಕಾಶಪ್ಪನವರ್​
author img

By

Published : Apr 16, 2019, 1:03 PM IST

ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರು ಪ್ರಚಾರಕ್ಕೆ ತೆರಳುತ್ತಿರುವ ಸಮಯದಲ್ಲಿ ರಸ್ತೆ ಅಪಘಾತದಿಂದ ತೊಂದರೆಗೆ ಒಳಗಾಗಿದ್ದ ವೃದ್ಧನನ್ನು ಉಪಚರಿಸಿ, ವೈದ್ಯಕೀಯ ಚಿಕಿತ್ಸೆ ನೀಡಲು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು.

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ಪಟ್ಟಣದ ಶೂಲಿಭಾವಿ ಗ್ರಾಮದಿಂದ ಪ್ರಚಾರ ಮುಗಿಸಿಕೊಂಡು ಜಮಖಂಡಿ ಪಟ್ಟಣಕ್ಕೆ ಹೋಗುತ್ತಿದ್ದ ಸಮಯದಲ್ಲಿ ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿದೆ. ಇದರ ಪರಿಣಾಮ ಓರ್ವ ಯುವಕ ಹಾಗೂ ವೃದ್ಧ ಗಾಯಗೊಂಡಿದ್ದಾರೆ. ತಳಿಕೇರಿ ಗ್ರಾಮದ ರುದ್ರಗೌಡ, ದ್ಯಾಮನಗೌಡ ಗೌಡರ ಎಂಬುವವರು ಗಾಯಗೊಂಡಿದ್ದಾರೆ.

ಮಾನವೀಯತೆ ಮೆರೆದ ವೀಣಾ ಕಾಶಪ್ಪನವರ್​

ಅದೇ ದಾರಿಯಲ್ಲಿ ಹೋಗುತ್ತಿದ್ದ ವೀಣಾ ಕಾಶಪ್ಪನವರ ವಾಹನ ನಿಲ್ಲಿಸಿ, ವೃದ್ಧನಿಗೆ ನೀರು ಕೊಟ್ಟು ಉಪಚರಿಸಿದರು. ಅಲ್ಲದೆ ಹುನಗುಂದ ತಾಲೂಕು ಆಸ್ಪತ್ರೆಗೆ ಕರೆ ಮಾಡಿ, ಅಪಘಾತಕ್ಕೊಳಗಾದವರನ್ನು ಆರೈಕೆ ಮಾಡುವಂತೆ ವೈದ್ಯರಿಗೆ ತಿಳಿಸಿ ತಮ್ಮ ಕಡೆಯವರ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

Intro:AnchorBody:ಬಾಗಲಕೋಟೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಪ್ರಚಾರ ಕ್ಕೆ ತೆರಳುತ್ತಿರುವ ಸಮಯದಲ್ಲಿ ರಸ್ತೆ ಅಪಘಾತ ದಲ್ಲಿ ತೊಂದರೆಗೆ ಒಳಗಾಗಿರುವ ವೃದ್ದನನ್ನು ಉಪಚರಿಸಿ,ವೈದ್ಯಕೀಯ ಚಿಕಿತ್ಸೆ ನೀಡುವಲ್ಲಿ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು.
ಬಾಗಲಕೋಟೆ ಜಿಲ್ಲೆಯ ಇಲಕಲ್ಲ ಪಟ್ಟಣದಿಂದ ಶೂಲಿಭಾವಿ ಗ್ರಾಮದಿಂದ ಪ್ರಚಾರ ಮುಗಿಸಿಕೊಂಡು ಜಮಖಂಡಿ ಪಟ್ಟಣಕ್ಕೆ ಹೋಗುತ್ತಿದ್ದ ಸಮಯದಲ್ಲಿ ಬೈಕಗಳ ನಡುವೆ ಡಿಕ್ಕಿ ಸಂಭವಿಸಿದೆ.ಇದರ ಪರಿಣಾಮ ಒರ್ವ ಯುವಕ ಹಾಗೂ ವೃದ್ದರೊಬ್ಬರು ಗಾಯಗೊಂಡಿದ್ದಾರೆ.
ತಳಿಕೇರಿ ಗ್ರಾಮದ ರುದ್ರಗೌಡ ದ್ಯಾಮನಗೌಡ ಗೌಡರ ಎಂಬುವವರು ಗಾಯಗೊಂಡಿದ್ದಾರೆ.ಅದೇ ದಾರಿಯಿಂದ ಹೋಗುತ್ತಿದ್ದ ವೀಣಾ ಕಾಶಪ್ಪನವರ ವಾಹನ ನಿಲ್ಲಿಸಿ,ನೀರು ಕೊಟ್ಟು ಉಪಚರಿಸಿದರು.ಹುನಗುಂದ ತಾಲೂಕ ಆಸ್ಪತ್ರೆಗೆ ಪೋನ ಮಾಡಿ,ಆರೈಕೆ ಮಾಡುವಂತೆ ವೈದ್ಯರಿಗೆ ತಿಳಿಸಿ,ತಮ್ಮ ಕಡೆಯವರ ವಾಹನದಲ್ಲಿ ಕುರಿಸಿ ಆಸ್ಪತ್ರೆಗೆ ಕಳುಹಿಸಿದರು.ಇದರಿಂದ ನೆರೆದ ಜನತೆ ವೀಣಾ ಕಾಶಪ್ಪನವರ ಮಾನವೀಯತೆ ಕಂಡಾಡಿದರು..Conclusion:ಆನಂದ
ಈ ಟಿ ವಿ ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.