ಬಾಗಲಕೋಟೆ: ನಕಲಿ ಚಿನ್ನದ ಆಭರಣಗಳನ್ನ ಮಾರಾಟ ಮಾಡಿ ವಂಚಿಸುತ್ತಿದ್ದ ಆರೋಪದಡಿ, ಬೆಂಗಳೂರು ಮೂಲದ ಇಬ್ಬರು ಮಹಿಳೆಯರನ್ನು ಬಂಧಿಸಿರುವ ಘಟನೆ ಜಿಲ್ಲೆಯ ಇಲಕಲ್ಲ ಪಟ್ಟಣದಲ್ಲಿ ನಡೆದಿದೆ.
ಬೆಂಗಳೂರಿನ ಕನಕ ನಗರ ನಿವಾಸಿ ರೆಹಾನಾ ಬೇಗಂ ಸೈಯದ್ ಅಪ್ಸರ್ ಹಾಗೂ ವಿಮಾನಪುರ ನಿವಾಸಿ ಮೆಹರಾಜನ್ ಸೈಯದ್ ಅಪ್ಸರ್ ಬಂಧಿತ ಆರೋಪಿಗಳು.
ಇಲಕಲ್ಲ ಪಟ್ಟಣದ ಚಿನ್ನದ ವ್ಯಾಪಾರಿಗೆ ನಕಲಿ ಚಿನ್ನದ ಆಭರಣ ಕೊಟ್ಟು 1,86, 000 ಮೌಲ್ಯದ ಆಭರಣ ಹಾಗೂ 13 ಸಾವಿರ ಹಣ ಪಡೆದಿದ್ದರು ಎನ್ನಲಾಗಿದೆ. ನಕಲಿ ಚಿನ್ನ ಎಂಬುದು ಅರಿವಿಗೆ ಬಾರದೆ ಅಸಲಿ ಎಂದು ನಂಬಿದ್ದ ವ್ಯಾಪಾರಿ ಮೋಸ ಹೋಗಿದ್ದು, ಅರಿವಿಗೆ ಬಂದು, ದೂರು ದಾಖಲಿಸಿದ್ದರು.
ನಗರದ ಇಲಕಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಬಳಿಕ ಸಮಗ್ರ ಮಾಹಿತಿ ತಿಳಿದು ಬರಲಿದೆ.
ಇದನ್ನೂ ಓದಿ: ಮೊಬೈಲ್ ಕದ್ದ ಆರೋಪ.. ಮಂಗಳೂರಲ್ಲಿ ಮೀನುಗಾರನ ಉಲ್ಟಾ ತೂಗು ಹಾಕಿ ಅಮಾನವೀಯ ಶಿಕ್ಷೆ!