ETV Bharat / state

ಬಾಗಲಕೋಟೆಯಲ್ಲಿ ವಿಜಯಪುರ ಮೂಲದ ಕಳ್ಳ ಅರೆಸ್ಟ್: ಚಿನ್ನಾಭರಣ ವಶ - thief arrested in bagalakote

ಕಳ್ಳತನ ಪ್ರಕರಣದಡಿ ವಿಜಯಪುರ ಜಿಲ್ಲೆಯ ಹೊನ್ನಾಳಿ ಗ್ರಾಮದ ಸಂತೋಷ ನಂದಿಹಾಳನನ್ನು ಬನಹಟ್ಟಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

thief arrested in bagalakote under gold theft case
ವಿಜಯಪುರ ಮೂಲದ ಕಳ್ಳ ಅರೆಸ್ಟ್
author img

By

Published : May 26, 2021, 10:00 AM IST

ಬಾಗಲಕೋಟೆ: ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಬನಹಟ್ಟಿ, ನಾವಲಗಿ ಹಾಗೂ ಚಿಮ್ಮಡ ಗ್ರಾಮದಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿದವನನ್ನು ಬನಹಟ್ಟಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆಯ ಹೊನ್ನಾಳಿ ಗ್ರಾಮದ ಸಂತೋಷ ನಂದಿಹಾಳನನ್ನು ಬಂಧಿಸಿ, 6 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳ್ಳತನ ಪ್ರಕರಣದಡಿ ಸಂತೋಷ ನಂದಿಹಾಳ ಅರೆಸ್ಟ್

ಈ ಕುರಿತು ಸ್ಥಳೀಯ ಸಿಪಿಐ ಜಿ.ಕರುಣೇಶಗೌಡ ಮಾತನಾಡಿ, 2019ರಲ್ಲಿ ವರದಿಯಾಗಿದ್ದ ಪ್ರಕರಣದಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿಗಳ ಸುಳಿವನ್ನು ಆಧರಿಸಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಸದರಿ ಕಳ್ಳನಿಂದ 3 ಪ್ರಕರಣಗಳಲ್ಲಿ ಕಳ್ಳತನವಾಗಿದ್ದ 4 ಚಿನ್ನದ ಸರಗಳು, 6 ಉಂಗುರಗಳು, 1 ನೆಕ್ಲೇಸ್​ ಸೇರಿದಂತೆ ಇತ್ಯಾದಿ ಸುಮಾರು 6 ಲಕ್ಷ ಮೊತ್ತದ 141 ಗ್ರಾಂ ತೂಕದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

1996ರಿಂದ ಈವರೆಗೆ ಈತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 32 ಪ್ರಕರಣಗಳು ದಾಖಲಾಗಿವೆ. 2019ರಲ್ಲಿ ಈತ ರಾಮದುರ್ಗ ಉಪ ಕಾರಾಗೃಹದಿಂದಲೂ ತಪ್ಪಿಸಿಕೊಂಡು ಹೋಗಿದ್ದ. ಅಲ್ಲದೇ ಮುಧೋಳ, ಲೋಕಾಪುರ, ರಾಮದುರ್ಗ, ನಿಂಬರ್ಗಾ, ಮಧನ ಹಿಪ್ಪರಗಾ, ಇಳಕಲ್ಲ ಪೊಲೀಸ್ ಠಾಣೆಗಳ 16 ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯವು ಈತನ ಬಂಧನ ವಾರೆಂಟ್​​ಗಳನ್ನು ಹೊರಡಿಸಿದೆ.

ಇದನ್ನೂ ಓದಿ: ಮುಚ್ಚಿದ್ದ ದೇವಸ್ಥಾನದ ಬಾಗಿಲು ತೆರೆಸಿ ಪೂಜೆ ಸಲ್ಲಿಸಿದ ಶಾಸಕ: ಸಾರ್ವಜನಿಕರಿಂದ ಖಂಡನೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್​​ ಜಗಲಾಸರ್, ಡಿವೈಎಸ್ಪಿ ಎಂ.ಪಾಂಡುರಂಗಯ್ಯ ಮಾರ್ಗದರ್ಶನದಲ್ಲಿ ಸ್ಥಳೀಯ ಸಿಪಿಐ ಎರಡು ವರ್ಷಗಳಷ್ಟು ಹಳೆಯದಾದ ಪ್ರಕರಣದ ತನಿಖೆಯನ್ನು ನಡೆಸಿ ಪಿಎಸ್‌ಐ ರವಿಕುಮಾರ ಧರ್ಮಟ್ಟಿ ಹಾಗೂ ಠಾಣೆಯ ಸಿಬ್ಬಂದಿ ವರ್ಗದವರು ಕೂಡಿಕೊಂಡು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.