ETV Bharat / state

ಬಾಗಲಕೋಟೆ ಜನತೆ ಗಮನಕ್ಕೆ..! ಮಾರುಕಟ್ಟೆಗಳ ಕಾರ್ಯ ಚಟುವಟಿಕೆ ಅವಧಿ ಬದಲು​​ - The markets at Bagalkot are open from 9 am to 6 pm

ಬಾಗಲಕೋಟೆಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್​ ಇಲಾಖೆ ಬೆಳ್ಳಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾರುಕಟ್ಟೆಯನ್ನು ತೆರೆಯಲು ಅವಕಾಶ ನೀಡಿದೆ.

ಬಾಗಲಕೋಟೆಯಲ್ಲಿ ಮಾರುಕಟ್ಟೆಗಳು ಓಪನ್​​
ಬಾಗಲಕೋಟೆಯಲ್ಲಿ ಮಾರುಕಟ್ಟೆಗಳು ಓಪನ್​​
author img

By

Published : May 25, 2020, 9:07 PM IST

ಬಾಗಲಕೋಟೆ: ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮಂಗಳವಾರದಿಂದ ಬಾಗಲಕೋಟೆ ನಗರದಲ್ಲಿ ಬೆಳ್ಳಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾರುಕಟ್ಟೆ ತೆರೆಯಲು ಅವಕಾಶ ನೀಡಿದೆ.

ಬಾಗಲಕೋಟೆ ಮಾರುಕಟ್ಟೆ

ಇಲ್ಲಿಯವರೆಗೆ ಬೆಳ್ಳಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಮಾರುಕಟ್ಟೆ, ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ರಾಜ್ಯದಾದ್ಯಂತ ಬೆಳ್ಳಗೆ 7 ರಿಂದ ಸಂಜೆ 7 ಗಂಟೆಯವರೆಗೆ ಮಾರುಕಟ್ಟೆಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿತ್ತು. ರಾಜ್ಯದಲ್ಲಿ ಒಂದು ಕಾನೂನು, ಬಾಗಲಕೋಟೆಯಲ್ಲಿ ಇನ್ನೊಂದು ಕಾನೂನು ಎಂಬ ಶಿರ್ಷಿಕೆಯಡಿ ಈ ಟಿವಿ ಭಾರತದಲ್ಲಿ ವರದಿ ಮಾಡಲಾಗಿತ್ತು. ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ನಾಳೆಯಿಂದ ಮಾರುಕಟ್ಟೆ ಸಮಯದಲ್ಲಿ ಬದಲಾವಣೆ ಮಾಡಿದೆ. ಈ ಹಿಂದೆ ಕೇವಲ ನಾಲ್ಕು ಗಂಟೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿತ್ತು. ಇದರಿಂದ ವ್ಯಾಪಾರಸ್ಥರು ಸಾಕಷ್ಟು ತೊಂದರೆ‌ ಅನುಭವಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.