ETV Bharat / state

ಮತದಾನ ಜಾಗೃತಿ: ಸ್ವೀಪ್ ಎಕ್ಸ್​ಪ್ರೆಸ್ ಬಸ್ ಸಂಚಾರ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ

ಮತದಾನ ಜಾಗೃತಿಗಾಗಿ ಬಾಗಲಕೋಟೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಮತದಾನ ಜಾಗೃತಿಗಾಗಿ ಸಂಚರಿಸಿದ ಸ್ವೀಪ್ ಎಕ್ಸ್​ಪ್ರೆಸ್ ಬಸ್

author img

By

Published : Apr 5, 2023, 9:47 PM IST

ಮತದಾನ ಜಾಗೃತಿಗಾಗಿ ಸಂಚರಿಸಿದ ಸ್ವೀಪ್ ಎಕ್ಸ್​ಪ್ರೆಸ್ ಬಸ್

ಬಾಗಲಕೋಟೆ : ಯುವ ಸಮುದಾಯ ಮತಗಟ್ಟೆಗೆ ಆಗಮಿಸಿ ಮತದಾನ‌ ಮಾಡುವಂತೆ ಜಾಗೃತಿ ಮೂಡಿಸಲು ಜಿಲ್ಲಾಡಳಿತವು ಸ್ವೀಪ್ ಎಕ್ಸ್​ಪ್ರೆಸ್ ಎಂದು‌ ವಿಭಿನ್ನ ರೀತಿಯಲ್ಲಿ ವಾಹನ ಸಿದ್ಧಪಡಿಸಿದೆ. ವಿಶೇಷ ಬಸ್ ಜಿಲ್ಲಾ ಸ್ವೀಪ್ ವತಿಯಿಂದ ಹಮ್ಮಿಕೊಂಡ ಸಂಚಾರಿ ಅಣಕು ಮತಗಟ್ಟೆ ಅಭಿಯಾನಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ್​, ಜಿ.ಪಂ ಸಿಇಓ ಟಿ.ಭೂಬಾಲನ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮತದಾನ ಪವಿತ್ರವಾದ ಕರ್ತವ್ಯ. ಪ್ರಜಾಪ್ರಭುತ್ವದ ಭದ್ರತೆಗೆ ಎಲ್ಲ ಯುವ ಜನಾಂಗ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಪ್ರತಿ ಬಾರಿ ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನವಾಗುತ್ತಿದೆ. ಈ ಬಾರಿ ಶೇ. 80ರಷ್ಟು ಮತದಾನವಾಗಲೇಬೇಕೆಂಬ ಉದ್ದೇಶವಿದೆ. ಎಲ್ಲರೂ ಮತದಾನ ಮಾಡುವ ಮೂಲಕ ಉತ್ತಮ ನಾಗರಿಕರಾಗುವ ಮೂಲಕ ಉತ್ತಮ ಮತದಾರರಾಗಬೇಕು ಎಂದರು.

ಸ್ವೀಪ್ ಎಕ್ಸ್​ಪ್ರೆಸ್​ ವಾಹನ ಜಿಲ್ಲೆಯಾದ್ಯಂತ ಸಂಚರಿಸಿ ಮತದಾನದ ಮಹತ್ವ ಸಾರುವುದರ ಜೊತೆಗೆ ಮೊದಲ ಬಾರಿಗೆ ಮತದಾನ ಮಾಡುವ ಯುವಕರಿಗೆ ಮತಗಟ್ಟೆಯ ಅನುಭವವನ್ನು ಉಣಬಡಿಸಲು ಬಸ್‍ನಲ್ಲೇ ಅಣಕು ಪ್ರಾತ್ಯಕ್ಷಿಕೆ ನಡೆಸಲಾಗುತ್ತದೆ. ಅಲ್ಲದೇ ಕಡಿಮೆ ಮತದಾನವಾಗುವ ಪ್ರದೇಶಗಳಿಗೆ ಸಂಚರಿಸಿ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ. ಅಂತಾರಾಷ್ಟ್ರೀಯ ವಿಶೇಷ ಚೇತನ, ಕ್ರೀಡಾಪಟು ಸಿದ್ದರೂಢ ಕೊಪ್ಪದ ಮತ್ತು ಜಾನಪದ ವಿದ್ವಾಂಸ ಡಾ.ಶಂಬು ಬಳೆಗಾರ ಅವರನ್ನು ಜಿಲ್ಲೆಯ ಸ್ವೀಪ್ ರಾಯಭಾರಿಯನ್ನಾಗಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ಸಂಚಾರಿ ಅಣಕು ಮತಗಟ್ಟೆ ವಾಹನ ಸಿದ್ದಪಡಿಸಲು ಶ್ರಮಿಸಿದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರಿಗೆ ಜಿಲ್ಲಾ ಸ್ವೀಪ್ ವತಿಯಿಂದ ಅಭಿನಂದನಾ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಯುಕೆಪಿಯ ಮಹಾವ್ಯವಸ್ಥಾಪಕ ಭಂವರ್ ಸಿಂಗ್ ಮೀನಾ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಕನಿಷ್ಕ, ಜಿ.ಪಂ ಯೋಜನಾಧಿಕಾರಿ ಸಿ.ಆರ್.ಮುಂಡರಗಿ, ವಾ.ಕ.ರ.ಸಾ ಸಂಸ್ಥೆಯ ಜಿಲ್ಲಾ ಸಂಚಾರಿ ಅಧಿಕಾರಿ ಮೈತ್ರಿ, ಜಿಲ್ಲಾ ಸ್ವೀಪ್ ರಾಯಬಾರಿ ಸಿದ್ದಾರೂಢ ಕೊಪ್ಪದ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಿಸೆಡಿಂಗ್ ಅಧಿಕಾರಿಯಾಗಿ ಡಿಸಿ, ಮತಗಟ್ಟೆ ಅಧಿಕಾರಿಯಾಗಿ ಸಿಇಓ ನೇಮಕ: ಮತದಾರರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಜ್ಜುಗೊಳಿಸಲಾದ ಸಂಚಾರಿ ಅಣಕು ಮತಗಟ್ಟೆ ಬಸ್‍ನಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ್​ ಪ್ರಿಸೈಡಿಂಗ್ ಅಧಿಕಾರಿಯಾಗಿ, ಜಿ.ಪಂ ಸಿಇಓ ಟಿ.ಭೂಬಾಲನ್ ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ನವನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅಣಕು ಮತಗಟ್ಟೆ ಪ್ರದರ್ಶನ ನಡೆಸಲಾಯಿತು. ಪ್ರದರ್ಶನದಿಂದ ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡುವವರಿಗೆ ಅಣಕು ಪ್ರದರ್ಶನದಿಂದ ಅನುಕೂಲವಾಯಿತು. ಇದಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್​ ಸಿಇಓ ಸೇರಿದಂತೆ ಇತರೆ ಅಧಿಕಾರಿಗಳು ನಗರದಲ್ಲಿ ಸಂಚಾರಿ ಅಣಕು ಮತಗಟ್ಟೆ ಬಸ್‍ನಲ್ಲಿ ಸಂಚರಿಸಿದರು.

ಇದನ್ನೂ ಓದಿ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಫಲಕ, ಹೋರ್ಡಿಂಗ್ಸ್, ಗೋಡೆಬರಹಗಳಿಗೆ ನಿಷೇಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.