ಬಾಗಲಕೋಟೆ: ತೇರದಾಳ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನವೀದ ಹಸನಸಾಬ ಥರಥರಿ ಎಂಬ ವಿದ್ಯಾರ್ಥಿ ಫೆಬ್ರುವರಿ 18ರಂದು ಕಾಲೇಜಿಗೆ ಟೋಪಿ (ತಕಿಯಾ) ಧರಿಸಿಕೊಂಡು ಬಂದಿದ್ದ. ಹೀಗಾಗಿ ಕಾಲೇಜಿನ ಪ್ರಾಚಾರ್ಯ ಎ.ಎಸ್. ಪೂಜಾರ ಅವರು ವಿದ್ಯಾರ್ಥಿ ಮೇಲೆ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ನವೀದ್ ಥರಥರಿ ನ್ಯಾಯಾಯಲದ ಮೇಟ್ಟಿಲೇರಿದ್ದರು. ಇದೀಗ ನ್ಯಾಯಾಲಯ ಪಿಎಸ್‌ಐ, ಪ್ರಾಚಾರ್ಯ ಸೇರಿ ಏಳು ಜನ ಪೊಲೀಸ್ ಸಿಬ್ಬಂದಿ ವಿರುದ್ಧ ದೂರು ದಾಖಲು ಮಾಡುವಂತೆ ಆದೇಶಿಸಿದೆ.
ಠಾಣಾಧಿಕಾರಿ ರಾಜು ಬೀಳಗಿ, ಕಾಲೇಜಿನ ಪ್ರಾಚಾರ್ಯ ಎ. ಎಸ್. ಪೂಜಾರ ಸೇರಿದಂತೆ ಏಳು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸುವಂತೆ ಬನಹಟ್ಟಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ 2022ರ ಮಾರ್ಚ್ 29ರಂದು ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಏಪ್ರಿಲ್ 4ರಂದು ಪ್ರಕರಣ ದಾಖಲಿಸಿಕೊಳ್ಳುವಂತೆ ಆದೇಶ ಹೊರಡಿಸಿದ ಹಿನ್ನೆಲೆ ಸ್ಥಳೀಯ ಠಾಣೆ ಹೆಚ್ಚುವರಿ ಪಿಎಸ್‌ಐ ಸಾಂಬಾಜಿ ಸೂರ್ಯವಂಶಿ ಮೇ 24ರಂದು ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟೋಪಿ ಧರಿಸಿಕೊಂಡು ಬರಬಾರದು ಎಂದು ಸರ್ಕಾರದ ಮತ್ತು ನ್ಯಾಯಾಲಯದ ಆದೇಶ ಇರದಿದ್ದರು ಕಾಲೇಜಿನ ಪ್ರಾಚಾರ್ಯ ಎ.ಎಸ್. ಪೂಜಾರ ನನಗೆ ಕಾಲೇಜು ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ. ಪಿಎಸ್‌ಐ ರಾಜು ಬೀಳಗಿ ಹಾಗೂ ಕಾನ್ಸ್ಟೇಬಲ್ಗಳಾ ಪಿ.ಹೆಚ್. ಗಣಿ, ಮಲ್ಲಿಕಾರ್ಜುನ ಕೆಂಚೆಣ್ಣವರ, ಎಸ್.ಬಿ. ಕಲಾಟೆ, ಎಸ್.ಸಿ. ಮದನಮಟ್ಟಿ, ಕೆ.ಹೆಚ್. ಸಣ್ಣಟ್ಟಿ ಸೇರಿಕೊಂಡು ಕಾನೂನು ಬಾಹಿರವಾಗಿ ಹಿಂಸೆ ನೀಡಿದ್ದಲ್ಲದೆ ಆತನ ಧರ್ಮಕ್ಕೆ ಅವಮಾನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೂ. 30ರಂದು ನ್ಯಾಯಾಲದಲ್ಲಿ ವಿಚಾರಣೆ ನಡೆಯಲಿದ್ದು, ಘಟನೆಯ ತನಿಖೆಯನ್ನು ಜಮಖಂಡಿ ಡಿವೈಎಸ್ಪಿ ಅವರಿಗೆ ವಹಿಸಲಾಗಿದೆ.
ಇದನ್ನೂ ಓದಿ:ಕರೆಂಟ್ಗಾಗಿ ಮಾಡಿದ ಮನವಿ ವ್ಯರ್ಥ.. 6 ತಿಂಗಳಿಂದ ಮೆಸ್ಕಾಂ ಕಚೇರಿಗೇ ಮಿಕ್ಸಿ ತಂದು ಮಸಾಲೆ ರುಬ್ಬುವ ರೈತ