ETV Bharat / state

ಬಾಗಲಕೋಟೆಯಲ್ಲಿ 'ಹಾಲು ಕುಡಿಯುವ ಕಲ್ಲಿನ ಬಸವ'! ಹುಲಿಕಲ್ ನಟರಾಜ್ ಹೇಳಿದ್ದೇನು?

author img

By

Published : Mar 8, 2022, 4:39 PM IST

Updated : Mar 8, 2022, 5:05 PM IST

ವೈಜ್ಞಾನಿಕತೆಯ ನಾಗಾಲೋಟದ ಇಂದಿನ ಕಾಲಮಾನದಲ್ಲಿಯೂ ಜನ ಯೋಚನೆ ಮಾಡದೆ ಪರಮ ಅಂಧಕಾರದಲ್ಲಿ ಮುಳುಗುತ್ತಿದ್ದಾರೆ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

stone-basva-drunk-milk-at-bagalkote
ಹಾಲು ಕುಡಿಯುವ ಕಲ್ಲಿನ ಬಸವ

ಬಾಗಲಕೋಟೆ: ಗುಳೇದಗುಡ್ಡ ಪಟ್ಟಣದಲ್ಲಿರುವ ಅರಳಿಕಟ್ಟಿ ಬಸವ ಮೂರ್ತಿಯು ಹಾಲು ಕುಡಿಯುತ್ತದೆ ಎಂದು ಜನರು ದೇವಾಲಯಕ್ಕೆ ಮುಗಿಬಿದ್ದಿರುವ ಘಟನೆ ನಡೆದಿದೆ.

ಕಲ್ಲ ಬಸವ ಹಾಲು ಕುಡಿಯುತ್ತದೆ ಎಂದು ಭಕ್ತರು ನಂಬಿದ್ದು, ಮನೆಯಿಂದ ಹಾಲು ತೆಗೆದುಕೊಂಡು ಬಂದು ಕುಡಿಸುತ್ತಿದ್ದಾರೆ. 'ಕಾರಣಿಕ' ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಧಾವಿಸಿ ಬರುತ್ತಿದ್ದು ಪೊಲೀಸರು ಭದ್ರತೆ ಒದಗಿಸಿದ್ದಾರೆ. ಈ ಹಿಂದೆಯೂ ಇಂತಹ ಘಟನೆ ನಡೆದಿದ್ದರಿಂದ 'ಇದು ದೇವರ ಪವಾಡ' ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್, ಘನ ಹಾಗೂ ನಿರ್ಜೀವ ವಸ್ತುಗಳು ಹಾಲು ಕುಡಿಯುವುದಿಲ್ಲ. ವೈಜ್ಞಾನಿಕ ನಾಗಾಲೋಟದಲ್ಲಿರುವ ಇಂದಿನ ಕಾಲದಲ್ಲಿಯೂ ಕಲ್ಲು ಬಸವ ಹಾಲು ಕುಡಿಯುವ ಬಗ್ಗೆ ವಿಚಾರ ಮಾಡದೇ ಜನರು ಪರಮ ಅಂಧಕಾರದಲ್ಲಿ ಮುಳುಗಿದ್ದಾರೆ. ಯಾವುದೇ ಘನ ವಸ್ತುಗಳ ಹತ್ತಿರ ದ್ರವ ವಸ್ತುಗಳನ್ನು ತಂದಾಗ ಆಕರ್ಷಣೆಯ ಬಲದಿಂದ ಸೆಳೆಯುತ್ತದೆ ಎಂದು ವಿವರಿಸಿದರು.

ಜಡತ್ವ ಹೊಂದಿರುವ ಯಾವುದೇ ವಸ್ತು ಚಲನೆ ಮತ್ತು ಸಜೀವಿಗಳ ಲಕ್ಷಣಗಳನ್ನು ಹೊಂದಲು ಸಾಧ್ಯವಿಲ್ಲ. ಇದು ಸಾರ್ವಕಾಲಿಕ ಸತ್ಯ. ಇದೊಂದು ಆಕರ್ಷಣೆ. ಈ ಕಾರಣದಿಂದ ನಡೆಯುವ ಚಲನೆಯ ಸಂಲಗ್ನತ್ವ ಕ್ರಿಯೆ. ಬಸವ ಮೂರ್ತಿ ಎಂದಿಗೂ ಹಾಲು ಕುಡಿಯಲು ವೈಜ್ಞಾನಿಕವಾಗಿ ಸಾಧ್ಯವಿಲ್ಲ. ಇದೊಂದು ಮೌಢ್ಯದ ಪರಮಾವಧಿ ಎಂದು ಹುಲಿಕಲ್ ನಟರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಐಟಿಐ ಕಾರ್ಖಾನೆಯಲ್ಲಿ ಕೆಲಸಗಾರರ ವಜಾ: ಕಾರಣ ತಿಳಿದುಕೊಳ್ಳುತ್ತೇನೆ ಎಂದ ಸಚಿವ ನಾಗೇಶ್

Last Updated : Mar 8, 2022, 5:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.