ETV Bharat / state

ಸಸಿ ನೆಡುವ ಮೂಲಕ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಶಿವಕುಮಾರ ಸ್ವಾಮೀಜಿ - Latest Birthday celebration news

ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಸಿದ್ದನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿ ತಮ್ಮ 57ನೇ ಹುಟ್ಟುಹಬ್ಬವನ್ನು ಸಸಿ ನೆಡುವುದರ ಮೂಲಕ ಸರಳವಾಗಿ ಆಚರಣೆ ಮಾಡಿಕೊಂಡರು.

shivakumar-shree-birth-day-celebration
ಸಿದ್ದನಕೊಳ್ಳ ಡಾ. ಶಿವಕುಮಾರ ಸ್ವಾಮೀಜಿ ಹುಟ್ಟು ಹಬ್ಬ
author img

By

Published : Mar 3, 2020, 10:15 PM IST

ಬಾಗಲಕೋಟೆ: ಜಿಲ್ಲೆಯ ಇಳಕಲ್ಲ ತಾಲೂಕಿನ ಸಿದ್ದನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿ ತಮ್ಮ 57ನೇ ಹುಟ್ಟುಹಬ್ಬವನ್ನು ಸಸಿ ನೆಡುವುದರ ಮೂಲಕ ಸರಳವಾಗಿ ಆಚರಣೆ ಮಾಡಿಕೊಂಡರು.

ಕಲೆ, ಸಂಸ್ಕೃತಿ ಬೆಳಸುವುದರಲ್ಲಿ ಸದಾ ಮುಂದಿರುವ ಮಠವಾಗಿರುವುದರಿಂದ ನೂತನವಾಗಿ ನಿರ್ಮಾಣ ಆಗುತ್ತಿರುವ ತತ್ಪೊರ್ವಂ ಚಲನಚಿತ್ರ ತಂಡದ ವತಿಯಿಂದ ಮಠದಲ್ಲಿ ಸಸಿಯನ್ನು ನೆಟ್ಟು, ಸ್ವಾಮಿಜೀಗಳಿಗೆ ಕೇಕ್ ಬದಲು ಎಳನೀರು ಕುಡಿಸುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಭಕ್ತರು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡುತ್ತೇವೆ ಎಂದು ತಿಳಿಸಿದ್ದರು. ಆದರೆ ಅದ್ಧೂರಿ ಬೇಡ, ಕೇವಲ ಸಸಿಗಳನ್ನು ನೆಡುವ ಮೂಲಕ ಆಚರಣೆ ಮಾಡಿ ಎಂದು ಕರೆ ನೀಡಿದ ಹಿನ್ನೆಲೆ ಸಸಿಗಳನ್ನು ನೆಡಲಾಗಿದೆ. ಓಜೋನ್ ಪದರ ಹಾಳಾಗದಂತೆ ನೋಡಿಕೊಳ್ಳಬೇಕಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಿದ್ದನಕೊಳ್ಳದ ಮಠದಲ್ಲಿ ಒಂದು ಲಕ್ಷ ವೃಕ್ಷಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ ಎಂದರು.

ಸಿದ್ದನಕೊಳ್ಳ ಡಾ. ಶಿವಕುಮಾರ ಸ್ವಾಮೀಜಿ ಹುಟ್ಟುಹಬ್ಬ

ಇದೇ ವೇಳೆ ಕೆಂಗುಲಾಬಿ ಸಿನಿಮಾ ನಿರ್ದೇಶಕ ಹನಮಂತ ಹಾಲಗೇರಿ ಮಾತನಾಡಿ, ಕಲಾವಿದರನ್ನು ಬೆಳೆಸುವ ಈ ಮಠದಲ್ಲಿ ಶ್ರೀಗಳ ಹುಟ್ಟುಹಬ್ಬ ಸರಳವಾಗಿ ಆಚರಣೆ ಮಾಡಲಾಗಿದೆ. ದುಂದು ವೆಚ್ಚ ಮಾಡದೆ ಸಾಮಾಜಿಕವಾಗಿ ಉಪಯೋಗವಾಗುವಂತಹ ಕೆಲಸ ಕಾರ್ಯಗಳು ಶ್ರೀಗಳು ಮಾಡುತ್ತಾರೆ. ಹಾಗಾಗಿ ಶ್ರೀಗಳ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು ಎಂದ್ರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.