ಬಾಗಲಕೋಟೆ: ನಿವೃತ್ತ ಸೈನಿಕರಿಗೆ ಕ್ಯಾಂಟೀನ್ನಲ್ಲಿ ಸಿಗಬೇಕಾಗಿರುವ ವಸ್ತುಗಳು ಹಾಗೂ ಮದ್ಯ ಸರಿಯಾಗಿ ವಿತರಣೆಯಾಗದಿರುವ ಹಿನ್ನೆಲೆ ಅಧಿಕಾರಿಗಳ ವಿರುದ್ಧ ನಿವೃತ್ತ ಸೈನಿಕರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಸವೇಶ್ವರ ಕಾಲೇಜ್ ಆವರಣದಲ್ಲಿರುವ 37 ನೇ ಕರ್ನಾಟಕ ಬಟಾಲಿಯನ್ ಆವರಣದಲ್ಲಿ ಸೇರಿದ ನಿವೃತ್ತ ಸೈನಿಕರು ಹಾಗೂ ಕುಟುಂಬಸ್ಥರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಜಿಲ್ಲೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತ ಸೈನಿಕರಿದ್ದಾರೆ. ಕಳೆದ ಹಲವು ದಿನಗಳಿಂದ ಮದ್ಯ ಸರಿಯಾಗಿ ಪೂರೈಕೆ ಮಾಡುತ್ತಿಲ್ಲ. ಇದರಿಂದಾಗಿ ಈಗ ಇರುವ ಮದ್ಯವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುಬೇಕು ಎಂದು ನಿವೃತ್ತ ಸೈನಿಕರ ಕುಟುಂಬಸ್ಥರು ಒತ್ತಾಯಿಸಿದರು.