ETV Bharat / state

ದೇಶಕ್ಕಾಗಿ ಗುಂಡು ತಿನ್ನಲು ಸಿದ್ಧರೆನ್ನುವ ನನ್ನ ಅಣ್ಣನಿಂದ ಕಲಿಯಬೇಕಿದೆ: 91 ಬಾರಿ ಬೈದಿದ್ದಾರೆಂದ ಮೋದಿಗೆ ಪ್ರಿಯಾಂಕಾ ಗಾಂಧಿ ಟಾಂಗ್ - ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ

91 ಬಾರಿ ತಮ್ಮನ್ನು ನಿಂದಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಶನಿವಾರ ಹುಮ್ನಾಬಾದ್​ ಪ್ರಚಾರ ಸಮಾವೇಶದಲ್ಲಿ ಹರಿಹಾಯ್ದಿದ್ದರು. ಈ ಬೆನ್ನಲ್ಲೇ ಭಾನುವಾರ ಜಮಖಂಡಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್​ ಬಹಿರಂಗ ಸಮಾವೇಶದಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.

cng
ಕಾಂಗ್ರೆಸ್​ ಬಹಿರಂಗ ಸಭೆ
author img

By

Published : May 1, 2023, 7:52 AM IST

Updated : May 1, 2023, 9:15 AM IST

ಕಾಂಗ್ರೆಸ್​ ಬಹಿರಂಗ ಸಮಾವೇಶದಲ್ಲಿ ಪ್ರಿಯಾಂಕ ಗಾಂಧಿ ಭಾಷಣ

ಬಾಗಲಕೋಟೆ: ಜನರ ಕಷ್ಟಗಳನ್ನು ಆಲಿಸುವ ಪ್ರಧಾನಿಗಳನ್ನು ನೋಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ತಮನ್ನು ನಿಂದಿಸುತ್ತಿದ್ದಾರೆ ಅಂತಾ ಜನರೆದರು ತಮ್ಮ ಕಷ್ಟಗಳನ್ನು ಹೇಳಿಕೊಂಡ ಪ್ರಧಾನಿಯನ್ನು ನೋಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಲೇವಡಿ ಮಾಡಿದರು.

ಜಮಖಂಡಿ ಪಟ್ಟಣದ ಪೋಲೋ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಆನಂದ ನ್ಯಾಮಗೌಡರ ಪರ ಪ್ರಚಾರದ ಅಂಗವಾಗಿ ಹಮ್ಮಿಕೊಂಡ ಬಹಿರಂಗ ಸಮಾವೇಶದಲ್ಲಿ ಮೋದಿ ಮತ್ತು ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.

ಬಹಳಷ್ಟು ಪ್ರಧಾನಿಗಳನ್ನು ನೋಡಿದ್ದೇನೆ. ಇಂದಿರಾಗಾಂಧಿ ದೇಶಕ್ಕಾಗಿ‌ ಗುಂಡು ಹಾಕಿಸಿಕೊಂಡರು, ರಾಜೀವ್ ಗಾಂಧಿ ಪ್ರಾಣ ತ್ಯಾಗ ಮಾಡಿದರು. ಆದರೆ ಇದೇ ಮೊದಲ ಬಾರಿಗೆ ಪ್ರಧಾನಿ ಅವರು ಜನರ‌ ಸಮಸ್ಯೆ ಬಗೆಹರಿಸುವ ಬದಲು ತಾವೇ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಜನರ ಸಮಸ್ಯೆ ಬಗ್ಗೆ ಮೋದಿ ಅವರ ಕಚೇರಿಯಲ್ಲಿ ಪಟ್ಟಿ ಕೂಡ ಮಾಡುವುದಿಲ್ಲ. ಬದಲಾಗಿ ನನ್ನ ಎಷ್ಟು ಸಲ ಬೈದಿದ್ದಾರೆ ಅಂತ ಲಿಸ್ಟ್ ಮಾಡುತ್ತಾರೆ. ಇವರಿಗೆ ಬೈದಿದ್ದನ್ನು ನೋಡಿದ್ರೆ ಒಂದು ಪುಟ ಕೂಡ ತುಂಬಲ್ಲ. ಆದ್ರೆ ಗಾಂಧಿ ಕುಟುಂಬವನ್ನು ನಿಂದಿಸಿದ್ದನ್ನು ಪಟ್ಟಿ ಮಾಡಿದ್ರೆ ಪುಸ್ತಕಗಳ ಮೇಲೆ ಪುಸ್ತಕ ಪ್ರಿಂಟ್ ಹಾಕಿಸಬೇಕಾಗುತ್ತದೆ. ನನ್ನ ಸಹೋದರನಿಂದ ಪ್ರಧಾನಿ ಮೋದಿ ಕಲಿಯಬೇಕಿದೆ. ಏಕೆಂದ್ರೆ ದೇಶದ ಜನರಿಗಾಗಿ ನನ್ನ ಸಹೋದರ (ರಾಹುಲ್) ಗಾಲಿ, ಗೋಲಿ (ಬೈಗುಳ ಮತ್ತು ಗುಂಡು) ತಿನ್ನಲು ಸಿದ್ಧನಿದ್ದೇನೆ ಅಂತಾರೆ, ಆದ್ರೆ ಮೋದಿ ಅವರು ನಿಂದನೆಗೆ ಹೆದರುತ್ತಿದ್ದಾರೆ. ಮೋದಿಯವರೇ ಹೆದರಬೇಡಿ. ಸಾರ್ವಜನಿಕ ಜೀವನದಲ್ಲಿ ಇವೆಲ್ಲ ಸಾಮಾನ್ಯ ಎಂದು ಪ್ರಿಯಾಂಕಾ ಲೇವಡಿ ಮಾಡಿದರು.

  • कर्नाटक की जनता ने 40% कमीशन की लूट वाली भाजपा सरकार को नकार दिया है।

    100% प्रगति की गारंटी वाली कांग्रेस सरकार आ रही है।

    Live: Public Meeting, Jamkhandi, Karnataka। #CongressBaralidePragatiTaralidehttps://t.co/xHY99yBomr

    — Priyanka Gandhi Vadra (@priyankagandhi) April 30, 2023 " class="align-text-top noRightClick twitterSection" data=" ">

ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಕೈ ನಾಯಕಿ, ಮೋಸದಿಂದ ಅಧಿಕಾರಕ್ಕೆ ಬಂದಿರುವ ರಾಜ್ಯ ಬಿಜೆಪಿ ಸರ್ಕಾರ, ಒಂದುವರೆ ಲಕ್ಷ ಕೋಟಿ ಹಣವನ್ನು ಲೂಟಿ ಮಾಡಿದೆ ಎಂದು ದೂರಿದರು. ರೈತರು ಎಷ್ಟೇ ಕಷ್ಟದಲ್ಲಿ ಇದ್ದರೂ ಬಿಜೆಪಿ ಸರ್ಕಾರ ರೈತರಿಗೆ ಯಾವುದೇ ಅನುಕೂಲ‌ ಕಲ್ಪಿಸಲಿಲ್ಲ. ಹಣದುಬ್ಬರ ಹೆಚ್ಚಾಗಿದೆ, ಗ್ಯಾಸ್​ ಬೆಲೆ ಏರಿದೆ. ಅಗತ್ಯ ವಸ್ತುಗಳ ಖರೀದಿಗೆ ಹಣ ಇಲ್ಲದಂತಾಗಿದೆ. ಆದರೂ ಸಹ ಮಹಿಳೆ ತಾನು ಧೈರ್ಯದಿಂದ ದುಡಿದು ಜೀವನ ಸಾಗಿಸುತ್ತಾ ಇದ್ದಾಳೆ. ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ನೌಕರಿ‌ ಕೊಡುವುದು‌ ಸರ್ಕಾರದ ಕೆಲಸವಾಗಿದೆ. ಉದ್ಯೋಗ ಪಡೆಯುವುದು ನಿಮ್ಮ ಹಕ್ಕಾಗಿದೆ. ಕರ್ನಾಟಕದ ಯುವಕರು ಬುದ್ಧಿವಂತರು. ನಾಡಿನ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕನ್ನಡದ ಯುವಕರಿದ್ದಾರೆ ಎಂದರು.

ಪಿಎಸ್​​ಐ ನೇಮಕಾತಿಯಲ್ಲಿ ದೊಡ್ಡ ಭ್ರಷ್ಟಾಚಾರವಾಗಿದೆ. ಪೊಲೀಸ್ ಹುದ್ದೆಗಳಿಗೆ ರೇಟ್ ಫಿಕ್ಸ್ ಆಗಿದೆ, ಬಿಜೆಪಿ ಸರ್ಕಾರ 40% ಸರ್ಕಾರ. ಶಾಸಕನ ಮನೆಯಲ್ಲಿ ಕೋಟಿ‌ ಕೋಟಿ ಹಣ ಸಿಗುತ್ತೆ, ಆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಒಂದುವರೆ ಲಕ್ಷ ಕೋಟಿ ಹಣವನ್ನು ರಾಜ್ಯ ಸರ್ಕಾರ ಲೂಟಿ ಮಾಡಿದೆ. ಎಲ್ಲರಿಗೂ ಬಿಜೆಪಿ ಸರ್ಕಾರ ಮೋಸ ಮಾಡುತ್ತಿದೆ. ಪ್ರಧಾನಿ ಮೋದಿ ಸೇರಿ ಹಲವರು ಈಗ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ‌ ಮುಂದೆ ಹೇಳುವುದಕ್ಕೆ ಬಿಜೆಪಿ‌ ನಾಯಕರ ಬಳಿ ವಿಷಯ ಇಲ್ಲ ಎಂದು ಕೇಂದ್ರ ಪಕ್ಷದ ವಿರುದ್ಧ ಪ್ರಿಯಾಂಕ ಗಾಂಧಿ ವ್ಯಂಗ್ಯವಾಡಿದರು.

ಇದೇ ವೇಳೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಜನರಿಗೆ ಸಾಕಷ್ಟು ಸೌಲಭ್ಯಗಳಿದ್ದವು, ಆದರೆ ಈಗ ಜನರಿಗೆ ಯಾವುದೇ ಸೌಲಭ್ಯಗಳು‌ ಇಲ್ಲದಾಗಿವೆ. ನಮ್ಮ ಸರ್ಕಾರ ಇದ್ದಾಗ ರೈತರ ಸಾಲಮನ್ನಾ ಮಾಡಲಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಪ್ರಿಯಾಂಕ‌ ಗಾಂಧಿ ಬಣ್ಣಿಸಿದರು. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್​ಗಳ ಬಗ್ಗೆ ವಿವರಣೆ ನೀಡುತ್ತಾ ರಾಜ್ಯ ಸರ್ಕಾರದ 2 ಲಕ್ಷ 50 ಸಾವಿರ ಹುದ್ದೆ ಭರ್ತಿ ಮಾಡುತ್ತೇವೆ. ಮಹಿಳೆಯರಿಗೆ ಅನುಕೂಲ ಕಲ್ಪಿಸುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ನಿರ್ಮೂಲನೆ, ಪಾರದರ್ಶಕ ಆಡಳಿತ ಜಾರಿ ತರುತ್ತೇವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೆ ತರುತ್ತೇವೆ ಎಂಬ ಭರವಸೆ ನೀಡಿದರು. ರಾಜ್ಯ ಮತ್ತು ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಗುಣಮಟ್ಟದ ಸರ್ಕಾರ ರಚನೆಗೆ, ಮತದಾನ ಮಾಡಿ ಎಂದು ಮನವಿ ಮಾಡಿಕೊಂಡರು.

ಕರ್ನಾಟಕದ ಸೌಂದರ್ಯವನ್ನು ವರ್ಣಿಸುತ್ತ ಭಾಷಣ ಪ್ರಾರಂಭ ಮಾಡಿದ ಪ್ರಿಯಾಂಕ ಗಾಂಧಿ, ಕರ್ನಾಟಕವು ಭಾರತವಷ್ಟೇ ಅಲ್ಲ, ಇಡೀ ಜಗತ್ತೇ ಮೆಚ್ಚುವಂತ ನಾಡಾಗಿದೆ. 12ನೇ ಶತಮಾನದಲ್ಲೇ ಬಸವಣ್ಣನವರು ಪುರುಷ ಹಾಗೂ ಮಹಿಳಾ ಸಮಾನತೆ ಸಾರಿದ್ದಾರೆ ಎಂದು ಕೊಂಡಾಡಿದರು.

ಇದನ್ನೂ ಓದಿ: ಮೈಸೂರಿನಲ್ಲಿ ಮೋದಿ ಭರ್ಜರಿ ರೋಡ್ ಶೋ: ಪ್ರಧಾನಿಯತ್ತ ಮೊಬೈಲ್​ ತೂರಿದ ಮಹಿಳೆ

Last Updated : May 1, 2023, 9:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.