ಬಾಗಲಕೋಟೆ: ಕೇಂದ್ರ ಸರ್ಕಾರವು ದೇಶವನ್ನು 'ಹಲಾಲ್ ಮುಕ್ತ'ವನ್ನಾಗಿ ಮಾಡಬೇಕು ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ. ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
'ಹಲಾಲ್' ಎಂಬ ಬ್ರಾಂಡ್ ಮೂಲಕ ವಿದೇಶಕ್ಕೆ ಮಾಂಸ ಮಾರಾಟ ಮಾಡಿ ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ನಂತರ ಆ ಹಣವನ್ನು ಇಸ್ಲಾಮಿಕ್ ಸಮುದಾಯದ ಅಭಿವೃದ್ದಿಗಾಗಿ ಬಳಸಿಕೊಳ್ಳುತ್ತಾರೆ. ಹಲಾಲ್ ಮಾಡಿದ ಮಾಂಸವನ್ನೇ ತಿನ್ನಬೇಕು ಎಂದು ಅವರು ಕರೆ ನೀಡಿದ್ದಾರೆ. ಈ ಮೂಲಕ ಜಗತ್ತಿನ ಆರ್ಥಿಕತೆಗೆ ಸೆಡ್ಡು ಹೊಡೆದು, ಇಸ್ಲಾಮಿಕ್ ಆರ್ಥಿಕತೆ ಬೆಳೆಯುತ್ತಿದೆ ಎಂದರು.
ಎಲ್ಲ ಪ್ರೊಡಕ್ಟ್ಗಳಿಗೂ ಹಲಾಲ್ ಸರ್ಟಿಫಿಕೇಟ್ ನೀಡುವ ಯೋಜನೆಯನ್ನು ಅವರು ಶುರು ಮಾಡಿದ್ದಾರೆ. 57 ಅರಬ್ ರಾಷ್ಟ್ರಗಳು ಸೇರಿ ಶಾರ್ಜಾದಲ್ಲಿ ಸಭೆ ನಡೆಸಿದ್ದು, ಹಲಾಲ್ ಮೂಲಕವೇ ವ್ಯವಹಾರ ನಡೆಸಲು ತೀರ್ಮಾನಿಸಿವೆ. ಸರ್ಟಿಫಿಕೇಟ್ ಇದ್ರೆ ಮಾತ್ರ ವಿದೇಶಕ್ಕೆ ವಸ್ತುಗಳ ರಫ್ತಿಗೆ ಅವಕಾಶ ಮಾಡಿಕೊಡಲಾಗಿದೆ. ಹಲ್ದಿರಾಮ್ ಪ್ರೊಡಕ್ಟ್ಗಳಿಗೂ ಹಲಾಲ್ ಸರ್ಟಿಫಿಕೇಟ್ ತೆಗೆದುಕೊಂಡಿದ್ದಾರೆ. ಇದರಿಂದ ಸಂಗ್ರಹವಾಗುವ ಹಣ ಟೆರರಿಸ್ಟ್ಗಳಿಗೆ ಹೋಗುತ್ತಿದೆ ಎಂದು ಆರೋಪಿಸಿದರು.
'ಡಿಕೆಶಿ ಅವರ ಡಿಎನ್ಎ ಟೆಸ್ಟ್ ಮಾಡಬೇಕು':
ಏಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವ ಡಿಕೆಶಿ ಅವರ ಡಿಎನ್ಎ ಟೆಸ್ಟ್ ಮಾಡಬೇಕು ಎಂದು ಅವರು ಇದೇ ವೇಳೆ ವ್ಯಂಗ್ಯವಾಡಿದ್ದಾರೆ. ಸೋನಿಯಾ ಗಾಂಧಿ ಅವರ ವಿಶ್ವಾಸ ಬೆಳೆಸಿಕೊಳ್ಳಲು 52 ಅಡಿ ಎತ್ತರದ ಕೈಸ್ತ ಧರ್ಮದ ಪುತ್ಥಳಿ ನಿರ್ಮಾಣ ಮಾಡುತ್ತಿದ್ದಾರೆ. ಓಟಿಗಾಗಿ ಅಲ್ಲ, ಯಾರನ್ನೋ ಓಲೈಸಿಕೊಳ್ಳಲು ಇಂತಹ ಕಾರ್ಯ ಮಾಡುತ್ತಿದ್ದಾರೆ. ದೇಶ ಉಳಿದರೆ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗುತ್ತಾರೆ. ಇಲ್ಲವಾದಲ್ಲಿ ಎಲ್ಲಿ ಇರುತ್ತಾರೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಮತಾಂತರದ ಹಾವಳಿ ವಿಪರೀತವಾಗಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ (12) ಸಿಎಂ ಭೇಟಿಯಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಒತ್ತಾಯಿಸುತ್ತೇವೆ ಎಂದರು.
'ಪುನೀತ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು':
ಪುನೀತ್ ಅವರ ನಟನೆ ಅದ್ಬುತವಾದದ್ದು, ರಾಜ್ಕುಮಾರ್ ಅವರ ಹೆಸರು ಮೀರಿಸುವ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿ. ಸಮಾಜಕ್ಕೆ ಒಳ್ಳೆಯ ಮೆಸೇಜ್ ರವಾನೆ ಮಾಡುವ ಪುನೀತ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಅನ್ನೋದರಲ್ಲಿ ತಪ್ಪಿಲ್ಲ. ನಾನು ಕೂಡಾ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರು ಟೆಕ್ ಸಮ್ಮಿಟ್: ನವೆಂಬರ್ 17 ರಿಂದ 3 ದಿನ ಸಮಾವೇಶ, 30ಕ್ಕೂ ಹೆಚ್ಚು ದೇಶಗಳು ಭಾಗಿ