ಬಾಗಲಕೋಟೆ: ಲೋಕ ಕಲ್ಯಾಣಾರ್ಥವಾಗಿ ಕೊರೊನಾ ನಿಯಂತ್ರಣವಾಗುವಂತೆ ಬಾಗಲಕೋಟೆ ಚರಂತಿಮಠದ ಪ್ರಭು ಸ್ವಾಮೀಜಿ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದರು.
ಇಷ್ಟಲಿಂಗ ಪೂಜೆಯಲ್ಲಿ ಜಗತ್ತಿನ ಕಷ್ಟ-ನಷ್ಟ, ಅನಿಷ್ಟ ದುಷ್ಟಶಕ್ತಿಗಳು ನಾಶ ಮಾಡಬಹುದಾದ ಶಕ್ತಿಯಿದೆ ಎಂಬ ಉಕ್ತಿಯಿದೆ. ಹಾಗಾಗಿ ಚರಂತಿಮಠದ ಪ್ರಭು ಸ್ವಾಮೀಜಿ ಅತ್ಯಂತ ಸರಳವಾಗಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.