ETV Bharat / state

ಆಗ ಅಪ್ಪ, ಈಗ ಅಂಕಲ್​​​, ವಿಜಯೇಂದ್ರನ ಕೆಲಸಕ್ಕೆ ಅಡ್ಡಿ ಇಲ್ಲ: H​M​ ರೇವಣ್ಣ ವ್ಯಂಗ್ಯ - ಕಾಂಗ್ರೆಸ್​ ಮುಖಂಡ ಎಚ್​ ಎಮ್​ ರೇವಣ್ಣ

ಬಿ. ವೈ. ವಿಜಯೇಂದ್ರನ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್​ ಮುಖಂಡ ಎಚ್​. ಎಮ್​. ರೇವಣ್ಣ ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ಕೆಲಸ ಸರಳವಾಗಿ ನಡೆಯುತ್ತಿತ್ತು. ಸದ್ಯ ಬಸವರಾಜ ಬೊಮ್ಮಾಯಿ ಸರ್ಕಾರ ಇದೆ, ಯಾವುದೇ ಅಡ್ಡಿಯಿಲ್ಲದೇ ಅವರ ಕೆಲಸ ಮುಂದುವರೆಯುತ್ತದೆ ಎಂದು ರೇವಣ್ಣ ವಿಜಯೇಂದ್ರನ ವಿರುದ್ಧ ಚಾಕಿ ಬೀಸಿದರು.

no-problems-for-vijayendra-work-in-bommai-govt
ಮಾಜಿ ಸಚಿವ ರೇವಣ್ಣ
author img

By

Published : Aug 6, 2021, 9:31 PM IST

ಬಾಗಲಕೋಟೆ: ಈ ಹಿಂದೆ ಅಪ್ಪಾಜಿ ಕೈಯಿಂದ ಕೆಲಸ ಮಾಡಿಸುತ್ತಿದ್ದ ವಿಜಯೇಂದ್ರ, ಈಗ ಅಂಕಲ್ ಕಡೆಯಿಂದ ಕೆಲಸ ಮಾಡಿಸುತ್ತಿದ್ದಾನೆ‌ ಎಂದು ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಮುಖಂಡರಾದ ಎಚ್. ಎಮ್. ರೇವಣ್ಣ ವ್ಯಂಗ್ಯವಾಡಿದರು.

ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ವಿಜಯೇಂದ್ರ ಅವರ ತಂದೆ ಸಿಎಂ ಅಗಿದ್ದಾಗ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಸದ್ಯ ಅವರ ಅಂಕಲ್​​ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ರೇವಣ್ಣ ಅವರು ಹಾಸ್ಯ ಮಾಡಿದರು.

ಬಿ. ವೈ. ವಿಜಯೇಂದ್ರ ವಿರುದ್ದ ಗುಡುಗಿದ ಮಾಜಿ ಸಚಿವ ರೇವಣ್ಣ

ಹಳೆ ಮದ್ಯ ಹೊಸ ಬಾಟಲ್​​, ಐದಾರು ಕ್ಯಾಪ್​ಗಳು

ಯಡಿಯೂರಪ್ಪನ ಭ್ರಷ್ಟಾಚಾರ, ಸ್ವಜನಪಕ್ಷಪಾತ ಖಂಡಿಸಿ ಬಿಜೆಪಿ ಹೈಕಮಾಂಡ್​​ ಬದಲಾವಣೆ ಮಾಡಿತು‌. ಆದರೆ, ಅದು ಬೊಮ್ಮಾಯಿ ಸರ್ಕಾರದಲ್ಲಿ ಮುಂದುವರೆದಿದೆ. ಬೊಮ್ಮಾಯಿ ಸಂಪುಟದಲ್ಲಿ ಹಳೆ ಮಧ್ಯ ಹೊಸ ಬಾಟಲ್, ಐದಾರು ಜನ ಕ್ಯಾಪ್​ಗಳು ಇಷ್ಟೆ, ಅದು ಬಿಟ್ಟು ಏನೂ ಬದಲಾವಣೆಯಾಗಿಲ್ಲ ಎಂದು ನೂತನ ಸರ್ಕಾರವನ್ನು ಟೀಕಿಸಿದರು.

ಕಮಲಪಾಳಯದಲ್ಲಿ ಮೂರು ಬಾಗಿಲು

ಬಿಜೆಪಿ ಒಂದು ಮನೆ ಮೂರು ಬಾಗಿಲು ಎಂಬಾಂತಾಗಿದೆ. ಮೂಲ ಬಿಜೆಪಿಗರು ಒಂದು ಗುಂಪು, ಜೆಡಿಎಸ್​ನಿಂದ ಬಂದವರದ್ದು ಎರಡನೇ ಗುಂಪು, ಬಾಂಬೆ ಬಾಯ್ಸ್​ಗಳದ್ದು 3ನೇ ಗುಂಪು. ಈ ಮೂರು ಗುಂಪುಗಳ ಹೊಂದಾಣಿಕೆ ಅಸಾಧ್ಯ ಎಂದು ಕುಟುಕಿದರು.

ಇದಕ್ಕೂ ಮುಂದೆ ಮುಧೋಳ, ಲೋಕಾಪುರ, ಬೀಳಗಿ ಸೇರಿದಂತೆ ವಿವಿಧ ಪ್ರದೇಶಳಿಗೆ ಭೇಟಿ ನೀಡಿ ಕೋವಿಡ್​ ನಿಂದ ಮೃತ ಪಟ್ಟ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಲಾಕ್​ಡೌನ್​ನಿಂದ ಉಂಟಾಗಿದ್ದ ಸಮಸ್ಯೆಗಳನ್ನು ಆಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.