ETV Bharat / state

ಕುಂಕುಮ, ಬಳೆ, ಗಣಪತಿ ಪೂಜೆ, ಸರಸ್ವತಿ ಪೂಜೆ ಬಗ್ಗೆ ಮಾತನಾಡಿದರೆ ಹುಷಾರ್​..ಮುತಾಲಿಕ್​ ಎಚ್ಚರಿಕೆ!

ಇವತ್ತು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಬೇಕು. ಇಲ್ಲದೇ ಇದ್ದರೆ ಈ ಸಂಘಟನೆ ಮುಂದೆ ದೇಶಕ್ಕೆ ಮಾರಕವಾಗಲಿದೆ- ಪ್ರಮೋದ್ ಮುತಾಲಿಕ್

ಪ್ರಮೋದ ಮುತಾಲಿಕ
author img

By

Published : Feb 20, 2022, 1:33 PM IST

Updated : Feb 22, 2022, 12:35 PM IST

ಬಾಗಲಕೋಟೆ: ಸಿಎಫ್ಐ, ಪಿಎಫ್ಐ ಹಾಗು ಎಸ್‌ಡಿಪಿಐ ಸಂಘಟನೆಗಳು ದೇಶದ್ರೋಹದ ಕೆಲಸದಲ್ಲಿ ತೊಡಗಿವೆ ಎಂದು ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, ಈ ಕುರಿತು ಹಿಂದೆ ಕೇರಳದ ಸಿಎಂ ಪಿಣರಾಯಿ ಅಂದಿನ ಪಿಎಂ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು ಪಿಎಫ್ಐ ದೇಶದ್ರೋಹಿ ಸಂಘಟನೆಗಳ ಜೊತೆ ಶಾಮೀಲಾಗಿದೆ ಎಂದು ಆರೋಪಿಸಿ ಸಂಘಟನೆಯನ್ನು ನಿಷೇಧಿಸುವಂತೆ ಮನವಿ ಮಾಡಿದ್ದರು.

ಇವತ್ತು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಬೇಕು. ಪಿಎಫ್ಐ ಸಂಘಟನೆ ಮುಂದೆ ದೇಶಕ್ಕೆ ಮಾರಕವಾಗಲಿದೆ. ಕಾಂಗ್ರೆಸ್‌ನ ಅಲ್ಪಸಂಖ್ಯಾತ ಶಾಸಕರೇ ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಿ ಎಂದು ಸಿಎಂ ಅವರನ್ನು ಭೇಟಿ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳಿಗೆ ಎಷ್ಟು ಬೇಕೋ ಅಷ್ಟು ದಾಖಲೆಗಳನ್ನು ನಾನು ನೀಡುತ್ತೇನೆ ಎಂದರು.

ರಾಜ್ಯದಲ್ಲಿ ನಡೆದ 22 ಕೊಲೆಗಳಲ್ಲಿ 9ರಲ್ಲಿ ಪಿಎಫ್ಐಗೆ ನಂಟಿದೆ. ಹೀಗಾಗಿ, ಸರ್ಕಾರ ಪಿಎಫ್ಐ, ಎಸ್‌ಡಿಪಿಐ ಸಂಘಟನೆ ನಿಷೇಧಿಸದಿದ್ದರೆ ಅವು ನಿಮ್ಮನ್ನು ನುಂಗಿ ಹಾಕುತ್ತವೆ ಎಂದು ಆಕ್ರೋಶದಿಂದ ನುಡಿದರು.

ಹಿಜಾಬ್ ಹಿಂದೆ ಆರ್‌ಎಸ್‌ಎಸ್ ಕುತಂತ್ರ ಇದೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಮುತಾಲಿಕ್, ಆರ್‌ಎಸ್‌ಎಸ್‌ನಂತಹ ದೇಶಭಕ್ತ ಸಂಘಟನೆಯನ್ನು ತೆಗಳುವ ನೈತಿಕತೆ ಸಿದ್ದರಾಮಯ್ಯನವರಿಗೆ ಇಲ್ಲ ಎಂದರು.

ಹಿಜಾಬ್- ಕೇಸರಿ ಸಂಘರ್ಷ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಮುತಾಲಿಕ್​​, ಕುಂಕುಮ, ಬಳೆ, ಗಣಪತಿ ಪೂಜೆ, ಸರಸ್ವತಿ ಪೂಜೆ ಬಗ್ಗೆ ಮಾತನಾಡಿದರೆ ಹುಷಾರ್​ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಚಂಬಲ್ ನದಿಗೆ ಉರುಳಿದ ಮದುವೆಗೆ ತೆರಳುತ್ತಿದ್ದ ಕಾರು: ಮದುಮಗ ಸೇರಿ 9 ಮಂದಿ ಸಾವು

Last Updated : Feb 22, 2022, 12:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.