ETV Bharat / state

ಮುನಿಸಿಕೊಂಡ ಬಿಎಸ್​ವೈ ಆಪ್ತ: ಮುರಗೇಶ ನಿರಾಣಿ ಮುಂದಿನ ನಡೆ ಏನು? - B.S.Yaddiyurappa

ಸಿಎಂ ಆಪ್ತರಾಗಿರುವ ಶಾಸಕ ಮುರಗೇಶ ನಿರಾಣಿ ಬಿ.ಎಸ್​. ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡು ಬಸವಗೌಡ ಪಾಟೀಲ್ ಯತ್ನಾಳ, ಉಮೇಶ ಕತ್ತಿ ಅವರ ಜೊತೆ ಕೈ ಜೋಡಿಸಿದ್ದಾರೆ.

ಮುರಗೇಶ ನಿರಾಣಿ
ಮುರಗೇಶ ನಿರಾಣಿ
author img

By

Published : May 29, 2020, 6:41 PM IST

ಬಾಗಲಕೋಟೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರಾಗಿರುವ ಶಾಸಕ ಮುರಗೇಶ ನಿರಾಣಿ ಅವರು ಸಿಎಂ ವಿರುದ್ಧ ಮುನಿಸಿಕೊಳ್ಳಲು ಕಾರಣ ಜಿಲ್ಲೆಯ ರಾಜಕೀಯ.

ಜೂನ್​ನಲ್ಲಿ ವಿಧಾನಪರಿಷತ್ತಿನ ಏಳು ಸ್ಥಾನಗಳು ಖಾಲಿ ಆಗಲಿದ್ದು, ಇದರಲ್ಲಿ ಬಿಜೆಪಿ ಪಕ್ಷಕ್ಕೆ ನಾಲ್ಕು ಸ್ಥಾನ ದೊರೆಯಲಿವೆ. ಎರಡು ಕಾಂಗ್ರೆಸ್​​ಗೆ, ಒಂದು ಸ್ಥಾನ ಜೆಡಿಎಸ್​​ಗೆ ಧಕ್ಕಲಿದೆ. ಈಗ ಬಿಜೆಪಿ ಪಕ್ಷದಲ್ಲಿ ಆಕಾಂಕ್ಷೆಗಳ ಪಟ್ಟಿ ಬೆಳೆಯುತ್ತಿದೆ. ಈ ಮಧ್ಯೆ ಜಮಖಂಡಿಯ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಹಾಗೂ ಉಪಚುನಾವಣೆಯಲ್ಲಿ ಸೋಲು ಕಂಡಿದ್ದು, ಇವರು ಸಹ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಶ್ರೀಕಾಂತ ಕುಲಕರ್ಣಿ ಅವರಿಗೆ ವಿಧಾನಪರಿಷತ್ತಿಗೆ ನೇಮಕ ಮಾಡಿ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ಶುರು ಮಾಡಿದ್ದಾರೆ. ಇದು ನಿರಾಣಿ ಅವರ ಕೆಂಗಣ್ಣಿಗೆ ಗುರಿಯಾಗಿದೆ. ನಿರಾಣಿ ಅವರು ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನವಾಗಲು ಮೂರು ಕಾರಣಗಳು ಇವೆ.

ಜಮಖಂಡಿಯ ಮಾಜಿ ಶಾಸಕರಾಗಿದ್ದ ಶ್ರೀಕಾಂತ ಕುಲಕರ್ಣಿ

1. ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಪಕ್ಷ ಸಂಘಟನೆಗೆ ಆರ್ಥಿಕವಾಗಿ ಸಹಕಾರ ನೀಡಿದ್ದಾರೆ. ಕೆಲವರನ್ನು ಗೆಲ್ಲಿಸಿ ತರುವುದಾಗಿ ಯಡಿಯೂರಪ್ಪ ಅವರಿಗೆ ಮಾತು ನೀಡಿದ್ದರು. ಅದೇ ರೀತಿ ಗೆಲವು ತಂದುಕೊಟ್ಟಿದ್ದಾರೆ. ತದನಂತರ ಪಕ್ಷ ಅಧಿಕಾರಕ್ಕೆ ಬರುವುದಕ್ಕೂ ತೆರೆಯ ಮರೆಯಲ್ಲಿ ರಾಜಕೀಯ ಚಟುವಟಿಕೆ ನಡೆಸಿದ್ದರು. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಚಿವ ಸ್ಥಾನ ಸಿಗುವ ಭರವಸೆಯಿಂದಾಗಿ ನೆರವಾದರು. ಆದರೆ, ಸಚಿವ ಸ್ಥಾನ ಸಿಗಲ್ಲಿಲ.

2. ಜಮಖಂಡಿ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಮುರಗೇಶ ನಿರಾಣಿ ಅವರ ಸಹೋದರ ಸಂಗಮೇಶ ನಿರಾಣಿ ಅವರಿಗೆ ಟಿಕೆಟ್ ಕೂಡಿಸುವುದಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ದರು ಯಶಸ್ಸು ಸಿಗಲಿಲ್ಲ. ಕೊನೆಗೆ ಆರ್​​ಎಸ್​ಎಸ್ ಮೂಲದ ಶ್ರೀಕಾಂತ ಕುಲಕರ್ಣಿ ಅವರಿಗೆ ಟಿಕೆಟ್ ನೀಡಲಾಯಿತು. ಈ ಸಮಯದಲ್ಲಿ ಪಕ್ಷದ ಗೆಲವಿಗೆ ನಿರಾಣಿ ಸಹೋದರರು ಹೆಚ್ಚು ಶ್ರಮ ವಹಿಸಿಲ್ಲ ಎಂಬ ಆರೋಪ ಸಹ ಕೇಳಿ ಬಂದಿತ್ತು.

3. ಈಗ ವಿಧಾನಪರಿಷತ್ತಿಗೆ ಶ್ರೀಕಾಂತ ಕುಲಕರ್ಣಿ ಅವರನ್ನು ನೇಮಕ ಮಾಡಿ ಎಂದು ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಿರುವುದಕ್ಕೆ ನಿರಾಣಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗೆ ಮೌನವಹಿಸಿದರೆ ಸಚಿವ ಸ್ಥಾನಸಿಕ್ಕಲ್ಲ, ತಮ್ಮ ಸಹೋದರರಿಗೆ ರಾಜಕೀಯ ಭವಿಷ್ಯ ಇಲ್ಲ. ಕುಲಕರ್ಣಿ ಅವರಿಗೆ ವಿಧಾನಪರಿಷತ್ ನೇಮಕವಾದಲ್ಲಿ ಜಮಖಂಡಿ ಮತಕ್ಷೇತ್ರದಲ್ಲಿ ತಮ್ಮ ರಾಜಕೀಯ ಬೆಳೆ ಬೇಯಲ್ಲ ಎಂದು ಅರಿತುಕೊಂಡು, ಬಸವಗೌಡ ಪಾಟೀಲ್ ಯತ್ನಾಳ, ಉಮೇಶ ಕತ್ತಿ ಅವರ ಜೊತೆ ಕೈ ಜೋಡಿಸಿದ್ದಾರೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.