ಬಾಗಲಕೋಟೆ : ನವೆಂಬರ್ 2022ರಲ್ಲಿ ಇನ್ವೆಸ್ಟ್ ಕರ್ನಾಟಕ ಎಂದು ಬಂಡವಾಳ ಹೂಡಿಕೆದಾರರ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯಾವುದೇ ಕೈಗಾರಿಕಾ ನಿವೇಶನದಲ್ಲಿ ವಸತಿ ನಿವೇಶನ ಮಾಡುವಂತ ಕ್ರಮ ತೆಗೆದುಕೊಳ್ಳಲಾಗುವುದು.
ವಾಕ್ ಟು ವರ್ಕ್ ಎಂಬ ಕ್ಯಾನ್ಸೆಪ್ಟ್ನಲ್ಲಿ ಟೌನ ಶಿಫ್ ಮಾಡುವ ಉದ್ದೇಶ ಹೊಂದಲಾಗಿದೆ. ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿರುವವರೆಗೆ ಮಾತ್ರ ಈ ನಿವೇಶನ ಸೀಮಿತವಾಗಿರುತ್ತದೆ. ಹೂರಗಡೆಯಿಂದ ಬಂದವರಿಗೆ ಪರವಾನಿಗೆ ಇರುವುದಿಲ್ಲ ಎಂದು ಸಚಿವರು ತಿಳಿಸಿದರು.
ಹೊಸ ಯೋಜನೆಗಳು ಮಾಡುವ ಬಗ್ಗೆ ಗುರಿ ಹೊಂದಲಾಗಿದೆ. ಇಡೀ ರಾಜ್ಯದಲ್ಲಿ ಯಾವ ಯಾವ ಪ್ರದೇಶದಲ್ಲಿ ಕೈಗಾರಿಕಾ ನಿವೇಶನ ಸಿಗುತ್ತಿಲ್ಲ, ಅಂತಹ ಪ್ರದೇಶದಲ್ಲಿ ಖಾಲಿ ಇರುವ ಜಮೀನುವನ್ನು ರೈತರ ಅನುಮತಿ ಪಡೆದು, ಜಮೀನು ಖರೀದಿಸಲಾಗುವುದು. ಬಾಗಲಕೋಟೆಯ ಗದ್ದನಕೇರಿ ಕ್ರಾಸ್ ಬಳಿ ಜಮೀನು ಖರೀದಿಸಿ, ಕೈಗಾರಿಕಾ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಕೈಗಾರಿಕಾ ಅಭಿವೃದ್ಧಿಗಾಗಿ ತೆಗೆದುಕೊಂಡಿರುವ ಜಮೀನು ಸದುಪಯೋಗ ಪಡಿಸಿಕೊಳ್ಳದೆ, ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ವರದಿ ತರಿಸಿಕೊಂಡು ಅಂತಹವರಿಗೆ ನೋಟಿಸ್ ನೀಡಲಾಗುವುದು. ಜಿಲ್ಲೆಯಲ್ಲಿ ಟೆಕ್ಸ್ ಟೈಲ್ ಅಭಿವೃದ್ಧಿ ಪಡಿಸುವ ಕೈಗಾರಿಕೆ ಮಾಡುವ ಜೊತೆಗೆ, ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ಹೊಂದಲಾಗಿದೆ ಎಂದರು.
ಕಲಬುರಗಿ ಜಿಲ್ಲಾ ಉಸ್ತುವಾರಿ ಆಗಿ ಮುಂದುವರೆಯುತ್ತೇನೆ, ಮುಂದಿನ ದಿನಮಾನದಲ್ಲಿ ಕಲಬುರಗಿ ಜಿಲ್ಲೆಯನ್ನ ಮಾದರಿ ಜಿಲ್ಲೆಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು. ಇದೇ ಸಮಯದಲ್ಲಿ ಮುಧೋಳ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಲೀಜ್ ವಿಚಾರವಾಗಿ ಮಾತನಾಡಿ, ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ನಾನೇ ಲೀಜ್ ನಲ್ಲಿ ಹೆಚ್ಚಿನ ಬಿಡ್ ಮಾಡಿದ್ದೇನೆ.
ಈವರೆಗೆ ಕೋ ಆಪರೇಟಿವ್ ನಲ್ಲಿ 160 ಕೋಟಿ ರೂ. ಬಿಡ್ ಆಗಿತ್ತು. ಈಗ ನಾನು ರನ್ನ ಸಕ್ಕರೆ ಕಾರ್ಖಾನೆ 345 ಕೋಟಿ ರೂ. ಬಿಡ್ ಮಾಡಿ ತಗೊಂಡಿದ್ದೇನೆ. ನನಗೆ ಸರ್ಕಾರ ಯಾವಾಗ ಕಾರ್ಖಾನೆ ಆರಂಭಿಸಲು ಅನುಮತಿ ನೀಡುತ್ತೋ ಆವಾಗ ನಾ ಕೆಲಸ ಆರಂಭಿಸುವೆ ಎಂದರು.
ಪೂರ್ತಿ ಜಂಗ್ ತಿಂದ ಪಾಂಡವಪೂರ ಫ್ಯಾಕ್ಟರಿ ಕೇವಲ 60 ದಿನದಲ್ಲಿ ಆರಂಭ ಮಾಡಿದ್ದೇನೆ. ನನ್ನ ತವರು ಮನೆಯಲ್ಲಿರೋ ರನ್ನ ಸಕ್ಕರೆ ಕಾರ್ಖಾನೆಯಿದು. ಸರ್ಕಾರದಿಂದ ಪತ್ರ ಬಂದ್ರೆ ನಾ ಅಕ್ಟೋಬರ್ ಅಂತ್ಯದಲ್ಲಿ ಫ್ಯಾಕ್ಟರಿ ಆರಂಭಿಸುವೆ ಎಂದ ಅವರು, ರನ್ನ ಸಕ್ಕರೆ ಕಾರ್ಖಾನೆ ಕೇವಲ 35 ದಿನಗಳಲ್ಲಿ ಆರಂಭಿಸುವೆ. ಸರ್ಕಾರ ಕಾರ್ಖಾನೆ ಆರಂಭಿಸಲು ನನಗೆ ಅನುಮತಿ ಪತ್ರ ನೀಡಬೇಕು ಎಂದರು.