ETV Bharat / state

ಚಿಕ್ಕಪಡಸಲಗಿ ಬ್ಯಾರೇಜ್ ಜಲಾವೃತ; ಅಪಾಯ ಲೆಕ್ಕಿಸದೆ ಯುವಕರ ಸೆಲ್ಫಿ ಕ್ರೇಜ್​​ - ಚಿಕ್ಕಪಡಸಲಗಿ ಬ್ಯಾರೇಜ್

ಸತತವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಮಳೆಯಾಗುತ್ತಿರುವ ಪರಿಣಾಮ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಸಾಕಷ್ಟು ನೀರು ಹರಿದು ಬರುತ್ತಿದೆ. ಇದರಿಂದ ಜಮಖಂಡಿ ತಾಲೂಕಿನ ಚಿಕ್ಕ ಪಡಸಲಗಿ ಬ್ಯಾರೇಜ್ ತುಂಬಿ ಹರಿಯುತ್ತಿದೆ. ಹಿಪ್ಪರಗಿ ಜಲಾಶಯದಿಂದ ಚಿಕ್ಕಪಡಸಲಗಿ ಬ್ಯಾರೇಜ್​ಗೆ 1 ಲಕ್ಷ 32 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ.

Maharashtra rain effect padasalagi Barrage full
ಪಡಸಲಗಿ ಬ್ಯಾರೇಜ್​​​
author img

By

Published : Jun 19, 2021, 3:51 PM IST

Updated : Jun 19, 2021, 5:35 PM IST

ಬಾಗಲಕೋಟೆ: ಮಹಾರಾಷ್ಟ್ರ ರಾಜ್ಯದಲ್ಲಿ ಸತತ ಮಳೆಯಾಗುತ್ತಿರುವ ಕಾರಣ ಕೊಯ್ನಾ ಜಲಾಶಯದಿಂದ ಕೃಷ್ಣ ನದಿಗೆ ಸಾಕಷ್ಟು ನೀರು ಹರಿದು ಬರುತ್ತಿದೆ. ಇದರಿಂದ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್ ತುಂಬಿ ಹರಿಯುತ್ತಿದೆ. ಹಿಪ್ಪರಗಿ ಜಲಾಶಯದಿಂದ ಚಿಕ್ಕಪಡಸಲಗಿ ಬ್ಯಾರೇಜ್​ಗೆ 1 ಲಕ್ಷ 32 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದ್ದು, ಚಿಕ್ಕಪಡಸಲಗಿ ಸೇತುವೆ ಜಲಾವೃತವಾಗಿದೆ.

ಬೃಹತ್ ಸೇತುವೆ ಮೇಲೆ ವಾಹನಗಳ ಸಂಚಾರ ನಡೆಯುತ್ತಿದೆ. ಜಮಖಂಡಿ- ವಿಜಯಪುರ ಸಂಪರ್ಕ ಸಾಧಿಸುವ ಚಿಕ್ಕಪಡಸಲಗಿ ಸೇತುವೆ ಮೇಲೆ ನೀರು ಹರಿಯಲು ಕೆಲವೇ ಅಡಿ ಬಾಕಿ ಇದೆ. ಇದರಿಂದ ಜಮಖಂಡಿ ತಾಲೂಕಿನ ಬಹುತೇಕ ಹಳ್ಳಗಳಿಗೆ ಪ್ರವಾಹ ಭೀತಿ ಉಂಟಾಗಿದೆ.

ಜಲಾವೃತ ಬ್ಯಾರೇಜ್ ಮೇಲೆ ಯುವಕರು ಹುಚ್ಚು ಸಾಹಸ ಮಾಡುತ್ತಿದ್ದು, ಬ್ಯಾರೇಜ್ ಮೇಲೆ ನಿಂತು ಸೆಲ್ಫಿಗೆ ಪೋಜ್ ನೀಡುತ್ತಿದ್ದಾರೆ. ಆಯತಪ್ಪಿದರೆ ನೀರು ಪಾಲಾಗುವ ಸಂಭವ ಇದ್ದು, ಎಚ್ಚರಿಕೆ ಫಲಕ ಹಾಕುವುದು ಅಗತ್ಯವಿದೆ.

Last Updated : Jun 19, 2021, 5:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.