ಬಾಗಲಕೋಟೆ: ನವನಗರದ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಅಟಲ್ ಭೂ ಜಲ ಯೋಜನೆಯ ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಮಿತವ್ಯಯ ಬಳಕೆ ಮತ್ತು ಅಂತರ್ಜಲ ಜನಜಾಗೃತಿ ಸಮಾರಂಭ ನಡೆಯಿತು.
ಓದಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಹೆಚ್ಚು ಮಹತ್ವ ನೀಡೋದು ಬೇಡ : ರಮೇಶ ಜಾರಕಿಹೊಳಿ
ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ತೋಟಗಾರಿಕೆ ಸಚಿವರಾದ ಆರ್. ಶಂಕರ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಿಸಿಎಂ ಕಾರಜೋಳ ಮಾತನಾಡಿ, ಹಿಂದಿನ ಕಾಲದ ನಮ್ಮ ಹಿರಿಯರು ನೀರು ಕಡಿಮೆ ಬಳಕೆ ಮಾಡಿಕೊಳ್ಳುತ್ತಿದ್ದರು. ಜೊತೆಗೆ ಮಳೆಯ ನೀರು ಸಂಗ್ರಹ ಮಾಡಿಕೊಂಡು ಜಮೀನಿನಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದರು.
ಹೀಗಾಗಿ ಅವರ ಜಮೀನಿನಲ್ಲಿ ಸ್ವಲ್ಪ ತಗ್ಗು ತೆಗೆದರು ನೀರು ಬರುತ್ತಿತ್ತು. ಈಗ ನಾವು ಸಹ ನೀರು ಬಳಕೆ ಕಡಿಮೆ ಮಾಡುವುದು ಅಗತ್ಯವಿದೆ. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ನೀರು ಸಂಗ್ರಹಿಸಡಬೇಕಾಗಿದೆ. ಮಳೆಯಿಂದ ನೀರನ್ನು, ಬಾಂದಾರ, ಸೇತುವೆ ಹಾಗೂ ಜಮೀನುಗಳಿಗೆ ಒಡ್ಡು ಹಾಕುವ ಮೂಲಕ ಜಲ ಸಂಗ್ರಹ ಮಾಡುವ ಕಾರ್ಯ ನಡೆಯಬೇಕಾಗಿದೆ ಎಂದರು.
ಇದೇ ಸಮಯದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕೆರೆಗೆ ನೀರು ಸಂಗ್ರಹ ಸೇರಿದಂತೆ ಸೇತುವೆಗಳಲ್ಲಿ ನೀರು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ನಮ್ಮ ಇಲಾಖೆ ಪ್ರಮುಖ ಉದ್ದೇಶ, ಹರಿಯುವ ನೀರನ್ನು ನಿಲ್ಲಿಸುವುದು. ನಿಂತ ನೀರನ್ನು ಸಂಗ್ರಹಿಸಲಾಗುತ್ತದೆ ಎಂದರು.
ಈ ಸಮಯದಲ್ಲಿ ತೋಟಗಾರಿಕೆ ಸಚಿವ ಆರ್.ಶಂಕರ್ ಮಾತನಾಡಿ, ಈ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಸಾಕಷ್ಟು ಬೆಳೆಯಲಾಗುತ್ತದೆ. ಕಡಿಮೆ ನೀರು ಬಳಕೆ ಮಾಡಿ, ಬೆಳೆಗಳು ಹೆಚ್ಚಿನ ಪ್ರಮಾಣ ಆಗಬೇಕಾಗಿದೆ. ಆ ನಿಟ್ಟಿನಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಕೆಲಸ ಮಾಡುವ ಕಾರ್ಯ ನಡೆಯುತ್ತಿದೆ ಎಂದರು.
ಜಿಲ್ಲೆಯ ವಿವಿಧ ಪ್ರದೇಶಗಳಿಂದ ನೂತನವಾಗಿ ಆಯ್ಕೆ ಆಗಿರುವ ಗ್ರಾಮ ಪಂಚಾಯಿತಿ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರು, ಎನ್ಜಿಒ ಸದಸ್ಯರು ಮತ್ತು ಪರಿಸರವಾದಿಗಳ ಹಾಗೂ ರೈತರ ಜೊತೆಗೆ ವಿಚಾರ ಮಂಥನ ನಡೆಯಿತು.