ETV Bharat / state

ಅನಾಥವಾದ ನೇಕಾರರ ಭವನ... ಇದು ಯಾವ ಇಲಾಖೆಗೆ ಸಂಬಂಧಿಸಿದ್ದು ಎಂಬುದೇ ದೊಡ್ಡ ಪ್ರಶ್ನೆ!

ನೇಕಾರ ಭವನ ಉದ್ಘಾಟನೆಗೊಂಡು ಒಂದೂವರೆ ವರ್ಷದಿಂದಲೂ ಇದು ಯಾವ ಇಲಾಖೆಗೆ ಸಂಬಂಧಿಸಿದ್ದು? ಇಲ್ಲಿನ ಕಾರ್ಯ ಚಟುವಟಿಕೆಗಳೇನು? ಎಂಬ ಅನೇಕ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ.

ನೇಕಾರರ ಭವನ
author img

By

Published : May 9, 2019, 4:39 AM IST

ಬಾಗಲಕೋಟೆ : ಬನಹಟ್ಟಿ ನಗರದ ಲಕ್ಷ್ಮೀ ನಗರದಲ್ಲಿರುವ ಏಕೈಕ ನೇಕಾರ ಚಟುವಟಿಕೆಗಳ ನೇಕಾರ ಭವನ ಅವ್ಯವಸ್ಥೆಯ ಗೂಡಾಗಿದ್ದು, ಕಾಟಾಚಾರಕ್ಕೆ ಉದ್ಘಾಟನೆಗೊಂಡು ಇದೀಗ ಹೇಳುವವರು ಕೇಳುವವರಿಲ್ಲದೆ ಅನಾಥವಾಗಿದೆ.

2016ರಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಬನಹಟ್ಟಿಯ ಲಕ್ಷ್ಮೀ ನಗರದಲ್ಲಿ ನೇಕಾರ ಭವನ ನಿರ್ಮಾಣಕ್ಕೆಂದು ಹಣ ಬಿಡುಗಡೆ ಮಾಡುವ ಮೂಲಕ 2017 ಡಿಸೆಂಬರ್ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಭವನ ಉದ್ಘಾಟನೆ ಸಹಿತ ಸ್ಥಳೀಯ ಎಸ್​ಆರ್​ಎ ಮೈದಾನದಲ್ಲಿ ನೇಕಾರ ಭವನ ಸಾಮೂಹಿಕವಾಗಿ ಉದ್ಘಾಟನೆಗೊಂಡಿತ್ತು.

ಉದ್ಘಾಟನೆಗೊಂಡು ಒಂದುವರೆ ವರ್ಷ ಕಳೆದರೂ ಇದು ಯಾವ ಇಲಾಖೆಗೆ ಸಂಬಂಧಿಸಿದ್ದು? ಇಲ್ಲಿನ ಕಾರ್ಯ ಚಟುವಟಿಕೆಗಳ ಕ್ರಿಯೆ ಏನು? ಎಂಬ ಅನೇಕ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ನೇಕಾರರು ತಮ್ಮ ಸಮಸ್ಯೆ, ಸಭೆ, ಸಹಾಯಕ್ಕಾಗಿ ನೇಕಾರರ ಸಂಗಮಕ್ಕೆ ನಿರ್ಮಿತಗೊಂಡಿರುವ ಈ ನೇಕಾರ ಭವನ ಇಂದಿಗೂ ಸಾರ್ವಜನಿಕ ಅನುಕೂಲಕ್ಕಾಗಿ ಕಾರ್ಯನಿರ್ವಹಿಸದಿರುವದು ವಿಪರ್ಯಾಸವೇ ಸರಿ.

ಗೊಂದಲದ ಗೂಡು

ನೇಕಾರ ಭವನದ ಉಸ್ತುವಾರಿಯನ್ನು ಸ್ಥಳೀಯ ನಗರಸಭೆ ನಿರ್ವಹಿಸಬೇಕಿದೆ. ಆದರೆ ಇದು ಯಾವ ಇಲಾಖೆಗೆ ಸಂಬಂಧಿಸಿದ್ದು, ಯಾವಾಗ ಹಸ್ತಾಂತರಗೊಳ್ಳುವದು ಒಂದೂ ತಿಳಿಯುತ್ತಿಲ್ಲ. ಕಟ್ಟಡದ ಒಳಗೆ ಅಥವಾ ಮುಂಭಾಗದಲ್ಲಾದರೂ ಯಾವ ಯೋಜನೆಯಡಿ ಯಾವ ಇಲಾಖೆ ನಿರ್ಮಿಸಿದ್ದು ಎಂಬುದೇ ಇಲ್ಲ, ಇಂತಹ ಅವ್ಯವಸ್ಥೆಯಿಂದ ಕೂಡಿರುವ ಭವನ ಕೂಡಲೇ ಸಾಹಿತಿಗಳ ಹಾಗು ಸಾರ್ವಜನಿಕರ ಬಳಕೆಗೆ ಅನುಕೂಲವಾಗಬೇಕಿದೆ.

ಖಾಸಗಿ ವ್ಯಕ್ತಿಗಳ ಪಾಲು

ಕಟ್ಟಡ ಸಂಪೂರ್ಣ ಅನಾಥವಾಗಿರುವ ಕಾರಣ ಸುತ್ತಲಿನ ಕೆಲ ನಿರ್ಗತಿಕ ಜನ ಇಲ್ಲಿಯೇ ವಾಸ ಮಾಡುತ್ತಿದ್ದು, ನೇಕಾರ ಭವನವು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ. ನೇಕಾರರು ಸಭೆ, ಚರ್ಚೆಗಳನ್ನು ನಡೆಸಬೇಕಾದರೆ ದೇವಸ್ಥಾನ ಇಲ್ಲವೆ ದುಬಾರಿ ಸಭಾ ಭವನಗಳನ್ನು ಬಾಡಿಗೆಗೆ ಪಡೆದು ಸಭೆ ನಡೆಸಬೇಕಾದ ಅನಿವಾರ್ಯತೆಯಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ನೇಕಾರ ಭವನವನ್ನು ನಗರಸಭೆಗೆ ಹಸ್ತಾಂತರಿಸುವ ಮೂಲಕ ಈ ಭಾಗದ ಲಕ್ಷಾಂತರ ನೇಕಾರರ ನಿರ್ವಹಣೆಗೆ ಅನುಕೂಲ ಮಾಡಬೇಕಾದ ಅನಿವಾರ್ಯತೆ ಇದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.