ETV Bharat / state

ಕೆರೂರು ಏತನೀರಾವರಿ ಯೋಜನೆಗೆ ಸಚಿವ ಸಂಪುಟ ಅಸ್ತು : ಸಚಿವ ಮುರುಗೇಶ ನಿರಾಣಿ

author img

By

Published : Mar 22, 2021, 8:22 PM IST

2019-20ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆಗಾಗಿ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ 300 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದರು. ಇದರಲ್ಲಿ ಮೊದಲ ಹಂತವಾಗಿ ಮುಖ್ಯ ಕಾಮಗಾರಿಗೆ ₹310 ಕೋಟಿ, ಪಶ್ಚಿಮ ಮುಖ್ಯ ಕಾಲುವೆ ನಿರ್ಮಾಣಕ್ಕೆ ₹110 ಕೋಟಿ ಸೇರಿ ಒಟ್ಟು ₹525 ಕೋಟಿ ಯೋಜನೆ ಇದಾಗಿತ್ತು..

Minister Murugesha Nirani
ಸಚಿವ ಮುರುಗೇಶ ನಿರಾಣಿ

ಬಾಗಲಕೋಟೆ : ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ನೀರು ತುಂಬಿಸುವ ಕೆರೂರು ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದಿಸಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿ ಮತ್ತು ಬೀಳಗಿ ತಾಲೂಕಿನ 16 ಸಾವಿರ ಹೆಕ್ಟೇರ್ ನೀರಾವರಿ ವಂಚಿತ ಪ್ರದೇಶಕ್ಕೆ ಸುಮಾರು 2 ಟಿಎಂಸಿ ನೀರು ಬಳಸಿಕೊಂಡು ಸೌಲಭ್ಯ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.

2019-20ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆಗಾಗಿ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ 300 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದರು. ಇದರಲ್ಲಿ ಮೊದಲ ಹಂತವಾಗಿ ಮುಖ್ಯ ಕಾಮಗಾರಿಗೆ ₹310 ಕೋಟಿ, ಪಶ್ಚಿಮ ಮುಖ್ಯ ಕಾಲುವೆ ನಿರ್ಮಾಣಕ್ಕೆ ₹110 ಕೋಟಿ ಸೇರಿ ಒಟ್ಟು ₹525 ಕೋಟಿ ಯೋಜನೆ ಇದಾಗಿತ್ತು.

ಈ ಯೋಜನೆಯನ್ನು ಮೊದಲ ಹಂತದಲ್ಲಿ ₹310 ಕೋಟಿ, 2ನೇ ಹಂತದಲ್ಲಿ ₹110 ಕೋಟಿ ಮತ್ತು 3ನೇ ಹಂತದಲ್ಲಿ ₹105 ಕೋಟಿ ರೂಪಾಯಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.