ETV Bharat / state

ಮಾತೆ ಆಸ್ತಿ ಕಬಳಿಸಲು ಸಂಚು ಮಾಡುತ್ತಿದ್ದಾರೆ ಎಂಬುದು ಸುಳ್ಳು ಆರೋಪ: ಗಂಗಾಮಾತೆ ಸ್ಪಷ್ಟನೆ

author img

By

Published : Jan 9, 2023, 4:07 PM IST

ಬಸವಧರ್ಮ ಪೀಠಾಧ್ಯಕ್ಷೆ ಲಿಂಗೈಕ್ಯ ಮಾತೆ ಮಹಾದೇವಿ ವಿಲ್​ ಪ್ರಕಾರ ಮಠದ ಆಸ್ತಿ ವೈಯುಕ್ತಿಕ ಬಳಕೆ ಸಾಧ್ಯವಿಲ್ಲ - ಡಾ. ಚನ್ನಬಸವ ಸ್ವಾಮೀಜಿ ಅಪಪ್ರಚಾರ ಮಾಡುತ್ತಿರುವುದಕ್ಕೆ ಮಠದಿಂದ ತೆಗೆದುಹಾಕಲಾಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

january-11-to-14-sharan-mela-at-bagalkote
ಗಂಗಾಮಾತೆ ಸ್ಪಷ್ಟನೆ
ಜನವರಿ 11 ರಿಂದ‌ 14 ರವರೆಗೆ ಐದು ದಿನಗಳ ಕಾಲ ಶರಣ ಮೇಳ

ಬಾಗಲಕೋಟೆ: ಬಸವ ಧರ್ಮ ಪೀಠದ ಆಸ್ತಿಯನ್ನು ಯಾರಿಗೂ ಮಾರಾಟ ಮಾಡಲು ಬರುವುದಿಲ್ಲ. ಮಾತೆ ಮಾತಾಜೀ ಅವರು ತಮ್ಮ ಮೃತ್ಯು ಪತ್ರ ಉಲ್ಲೇಖ ಮಾಡಿದ್ದಾರೆ. ಕೆಲವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಕೂಡಲಸಂಗಮದ ಬಸವ ಧರ್ಮ ಪೀಠದ ಸ್ವಾಮೀಜಿ ಮಹಾದೇವ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

ಅವರು ಬಾಗಲಕೋಟೆ ನವನಗರದ ಪತ್ರಿಕಾ ಭವನದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡುತ್ತಾ, ಇತ್ತೀಚಿಗೆ ಡಾ. ಚನ್ನಬಸವ ಸ್ವಾಮೀಜಿ ಕೂಡಲಸಂಗಮ ಬಸವ ಧರ್ಮ ಪೀಠದ ವಿರುದ್ಧ ಮಾಡಿರುವ ಆರೋಪಕ್ಕೆ ಸ್ಪಷ್ಟನೆ ನೀಡಿದ್ದು, ಬಸವಣ್ಣನವರ ವಚನದಲ್ಲಿ ವಚನಾನಂದ ನಾಮಪದ ಬಳಕೆ ಬಗ್ಗೆ ವಿವಾದ ಮಾಡುತ್ತಿರುವ ಜೊತೆಗೆ ಈಗಿರುವ ಗಂಗಾಮಾತೆ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಗಂಗಾ ಮಾತೆಗೆ ಹಿಂದಿ ಬರಲ್ಲ, ಸರಿಯಾಗಿ ವಿವೇಚನ ಮಾಡಲ್ಲ ಎಂಬ ಮಾತು ಸೇರಿದಂತೆ ಆಸ್ತಿ ಕಬಳಿಸುವ ಆರೋಪ ಮಾಡಿದ್ದರಿಂದ ಪೀಠದದಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದರು.

ಸ್ವಾಮೀಜಿ, ಗಂಗಾ ಮಾತೆಯ ಸಹೋದರಿಗೆ ಹಕ್ಕು ಬಿಟ್ಟು ಕೊಟ್ಟ ಪ್ರಮಾಣ ಪತ್ರ ನೀಡಿರುವುದಾಗಿ ತಿಳಿಸಿದ್ದಾರೆ. ಆ ರೀತಿಯಾಗಿ ಮಾಡಲು ಬರಲ್ಲ, ಆಸ್ತಿ ಕಬಳಿಕೆ ಮಾಡಲು ಸಾಧ್ಯವೇ ಆಗಲ್ಲ. ಬಸವ ಧರ್ಮ ಪ್ರಚಾರ ಮಾಡುತ್ತಾ ಇರಬಹುದು. ಆದರೆ, ಆಸ್ತಿಯನ್ನು ಯಾರಿಗೂ ಬರೆದುಕೊಡ ಬರಲ್ಲ. ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಹಾದೇವ ಸ್ವಾಮೀಜಿ ಡಾ. ಚನ್ನಬಸವ ಸ್ವಾಮೀಜಿಗೆ ಟಾಂಗ್ ನೀಡಿದರು.

ಶರಣ ಮೇಳ: ಇದೇ ಜನವರಿ 11 ರಿಂದ‌ 14 ರವರೆಗೆ ಐದು ದಿನಗಳ ಕಾಲ ಪ್ರತಿ ವರ್ಷದಂತೆ ಈ ಸಾರಿಯು ಶರಣ ಮೇಳವು ಅದ್ಧೂರಿಯಾಗಿ ಆಚರಣೆ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರಿಗೆ ಪ್ರಸಾದ, ವಸತಿ ವ್ಯವಸ್ಥೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ಕೊರೋನಾ ಹಿನ್ನೆಲೆ ಅದ್ಧೂರಿಯಾಗಿ ಆಚರಣೆ ಮಾಡಿಲ್ಲ. ಈ ಭಾರಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ಕ್ಷಮೆ ಕೊಟ್ಟ ನಂತರವೂ ಪೀಠಕ್ಕೆ ವಿರುದ್ಧ ನಡೆ: ಇದೇ ಸಮಯದಲ್ಲಿ ಬಸವ ಧರ್ಮ ಪೀಠದ ಅಧ್ಯಕ್ಷೆ ಗಂಗಾಮಾತೆ ಮಾತನಾಡಿ, ನಮ್ಮ ಮೃದು ಧೋರಣೆಯಿಂದಾಗಿ ನಮಗೆ ತೊಂದರೆ ಉಂಟು ಮಾಡುವಂತಾಗಿದೆ. ಈ ಹಿಂದೆ ಹಲವು ಭಾರಿಗೆ ನನ್ನ ಬಗ್ಗೆ ಅಪಪ್ರಚಾರ ಮಾಡಿದರು ಸಹ ಡಾ. ಚನ್ನಬಸವ ಸ್ವಾಮೀಜಿಯವರಗೆ ಕ್ಷಮೆ ಮಾಡಿ, ಬಸವ ಧರ್ಮ ಪ್ರಚಾರ ಮಾಡುವಂತೆ ಸಲಹೆ ಸಹ ನೀಡಲಾಗಿತ್ತು. ಆದರೆ, ಇದನ್ನು ಸರಿಪಡಿಸಿಕೊಳ್ಳದೇ ಮತ್ತೆ ಅಪಪ್ರಚಾರ ಮಾಡುತ್ತಾ ಇದ್ದಾಗ, ಅವರನ್ನು ತೆಗೆದು ಹಾಕಲಾಗಿದೆ ಎಂದು ತಿಳಿಸಿದರು.

ಈ ಭಾರಿ ನಡೆಯುವ ಶರಣ ಮೇಳ ಉದ್ಘಾಟನೆ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಮಾಡಲಿದ್ದಾರೆ. ಧ್ವಜಾರೋಹಣ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಸಿ ಪಾಟೀಲ ಮಾಡಲಿದ್ದಾರೆ. ಬಸವ ಪೀಠದಿಂದ ನೀಡಲಾಗುವ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಸಲ ಅದಮ್ಯ ಚೇತನ ಟ್ರಸ್ಟ್​ನ ಮುಖ್ಯಸ್ಥೆ ತೇಜಸ್ವಿನಿ ಅನಂತ ಕುಮಾರ್ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು. ​

ಏನಿದು ಅಂಕಿತ ನಾಮ ವಿವಾದ: 12ನೇ ಶತಮಾನದಲ್ಲಿ ಸಮಾಜದ ಅಂಕು ಡೊಂಕುಗಳ ಬಗ್ಗೆ ಬಸವಣ್ಣ ಅವರು ಕೂಡಲಸಂಗಮದೇವ ಎಂಬ ಅಂಕಿತ ನಾಮದಲ್ಲಿ ವಚನ ರಚಿಸುತ್ತಿದ್ದರು. ಬಸವಧರ್ಮ ಪೀಠಾಧ್ಯಕ್ಷೆ ಲಿಂಗೈಕ್ಯ ಮಾತೆ ಮಹಾದೇವಿ ತಮ್ಮ ವಚನದೀಪ್ತಿ ಎಂಬ ವಚನ ಗ್ರಂಥದಲ್ಲಿ ಬಸವಣ್ಣನವರ ವಚನಗಳ ಅಂಕಿತನಾಮ ಕೂಡಲಸಂಗಮದೇವ ಬದಲಿಸಿ ಲಿಂಗದೇವ ಎಂದು ಉಲ್ಲೇಖ ಮಾಡಿದ್ದರು. 1996ರಲ್ಲಿ ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡಿತ್ತು. ಈಗಿರುವ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅಂಕಿತನಾಮ ವಿವಾದಕ್ಕೆ ತೆರೆ ಎಳೆದಿದ್ದರು. ಬಸವಧರ್ಮ ಪೀಠದ ಎಲ್ಲಾ ಪ್ರಕಾಶನಗಳಲ್ಲಿ ಮತ್ತು ಎಲ್ಲ ಪೀಠದ ಅನುಯಾಯಿಗಳಿಗೂ ಕೂಡಲಸಂಗಮದೇವ ಎಂಬುದನ್ನೇ ಬಳಸಲು ಸೂಚಿಸಿದ್ದರು.

ಇದನ್ನೂ ಓದಿ: ಶರಣ ಮೇಳದ ಪರ್ಯಾಯವಾಗಿ ಸ್ವಾಭಿಮಾನಿ ಶರಣ ಮೇಳ ಆಯೋಜನೆ: ಡಾ.ಚನ್ನಬಸವಾನಂದ‌ ಸ್ವಾಮೀಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.