ETV Bharat / state

ಕಾರ್ಗಿಲ್ ವಿಜಯ್ ದಿವಸ್​: ಸೇನೆಗೆ ಸೇರಲು ಈಗಲೂ ನಾನು ರೆಡಿ... ಜಮಖಂಡಿಯ ವೀರಯೋಧ! - Retired warrior Askara Ali Zenda

20 ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ಯೋಧರೊಬ್ಬರು, ತಮಗೆ ಸಿಕ್ಕಿದ್ದ ವಿಆರ್​ಎಸ್ ರದ್ದುಗೊಳಿಸಿ 1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಂತಹ ಆಪರೇಷನ್ ವಿಜಯ್ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ, ಭಾರತಾಂಬೆಗೆ ವಿಜಯದ ಮಾಲೆ ಹಾಕಿದ್ದ ಲಕ್ಷಾಂತರ ಸೈನಿಕರಲ್ಲಿ ಒಬ್ಬರಾಗಿದ್ದಾರೆ.

Jamakhandi soldier who fought in Kargil Vijay Diwas
ಕಾರ್ಗಿಲ್ ವಿಜಯ್ ದಿವಸ್​ನಲ್ಲಿ ಹೋರಾಡಿದ್ದ ಜಮಖಂಡಿಯ ವೀರಯೋಧ
author img

By

Published : Jul 26, 2020, 12:36 AM IST

ಬಾಗಲಕೋಟೆ: ನಮ್ಮ ದೇಶಕ್ಕಾಗಿ ಹೋರಾಡಿ ಅನೇಕ ಮಂದಿ ಹುತಾತ್ಮರಾಗಿದ್ದಾರೆ. ಜುಲೈ 26ರಂದು ಪ್ರತಿವರ್ಷ ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಣೆ ಮಾಡಲಾಗುತ್ತದೆ. ಈ ಕಾರ್ಗಿಲ್ ವಿಜಯ್ ದಿವಸ್​ನಲ್ಲಿ ಹೋರಾಡಿದ ನಿವೃತ್ತ ಯೋಧರೊಬ್ಬರು ಜಮಖಂಡಿ ಪಟ್ಟಣದಲ್ಲಿದ್ದಾರೆ.

ಕಾರ್ಗಿಲ್ ವಿಜಯ್ ದಿವಸ್​ನಲ್ಲಿ ಹೋರಾಡಿದ್ದ ಜಮಖಂಡಿಯ ವೀರಯೋಧ

20 ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿರುವ ಅಸ್ಕರ ಅಲಿ ಮೋದಿನಸಾಬ ಝೇಂಡಾ ಎಂಬ ಯೋಧ, ಈಗಲೂ ಅವಕಾಶ ಸಿಕ್ಕರೆ ಮತ್ತೆ ಸೇನೆ ಸೆರರುವುದಾಗಿ ತಿಳಿಸಿದ್ದಾರೆ. ಇವರು 2002ರಲ್ಲಿ ನಿವೃತ್ತರಾಗಿದ್ದು, 1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಂತಹ ಆಪರೇಷನ್ ವಿಜಯ್ ಹೆಸರಿನ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಭಾರತಾಂಬೆಗೆ ವಿಜಯದ ಮಾಲೆ ಹಾಕಿದ್ದ ಲಕ್ಷಾಂತರ ಸೈನಿಕರಲ್ಲಿ ಒಬ್ಬರಾಗಿದ್ದರು.

ಕಾರ್ಗಿಲ್ ಯುದ್ದ ನಡೆಯುವ ಮುಂಚೆ ಇವರು ವಿಆರ್​ಎಸ್‌ ಪಡೆದುಕೊಂಡಿದ್ದರು. ಆಗ ಪಂಜಾಬ್​ ಗಡಿ ಭಾಗದಲ್ಲಿ ಬೆಟಾಲಿಯನ್ ಒಂದರಲ್ಲಿ ಕೆಲಸ ಮಾಡುತ್ತಿರುವ ಉನ್ನತ ಅಧಿಕಾರಿ, ಜಮ್ಮುವಿನ ಬಳಿ ಕಾರ್ಗಿಲ್ ಯುದ್ದ ನಡೆಯುತ್ತಿದೆ. ಇದರಲ್ಲಿ ಭಾಗವಹಿಸಿ ದೇಶ ಸೇವೆ ಮಾಡುವ ಅವಕಾಶ ಬಂದಿದೆ. ಯಾರು ಭಾಗವಹಿಸಲು ಒಪ್ಪುತ್ತಾರೆ. ಅಂತಹವರಿಗೆ ಅವಕಾಶ ನೀಡಲಾಗುವುದು ಎಂದಿದ್ದರಂತೆ. ಈ ಮಾಹಿತಿ ತಿಳಿದ ಅಸ್ಕರ್​ ಅಲಿ ಸಿಕ್ಕಿರುವ ವಿಆರ್​ಎಸ್ ರದ್ದುಗೊಳಿಸಿ ಯುದ್ದದಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.