ETV Bharat / state

ಹೈದ್ರಾಬಾದ್​ ಎನ್​ಕೌಂಟರ್​ಗೆ ಭಾರತೀಯ ಯುವ ಸಂಘಟನೆಯಿಂದ ಶ್ಲಾಘನೆ

ಹೈದ್ರಾಬಾದ್​ನಲ್ಲಿ ನಡೆದ ಪಶುವೈದ್ಯೆ ಹತ್ಯೆ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿ ಮೆಚ್ಚಿ ಭಾರತೀಯ ಯುವ ಸಂಘಟನೆ ಮೆಚ್ಚುಗೆ ವ್ಯಕ್ತಪಡಿಸಿದೆ.

bagalakote
ಇಂಡಿಯನ್ ಯೂಥ್ ಸಂಘಟನೆಯಿಂದ ಪೊಲೀಸರಿಗೆ ರಾಖಿ ಕಟ್ಟಲಾಯಿತು.
author img

By

Published : Dec 7, 2019, 5:48 PM IST

ಬಾಗಲಕೋಟೆ: ಹೈದ್ರಾಬಾದ್​ನಲ್ಲಿ ಅತ್ಯಾಚಾರ ನಡೆಸಿದ ಆರೋಪಿಗಳ ಮೇಲೆ ಎನ್​ಕೌಂಟರ್ ನಡೆಸಿರುವ ಪೊಲೀಸರ ಕಾರ್ಯವನ್ನು ಭಾರತೀಯ ಯುವ ಸಂಘಟನೆ ಶ್ಲಾಘಿಸಿದ್ದು, ಪೊಲೀಸ್ ಸಿಬ್ಬಂದಿಗೆ ರಾಖಿ ಕಟ್ಟುವ ಮೂಲಕ ಬೆಂಬಲ ವ್ಯಕ್ತಪಡಿಸಿದೆ.

ಇಂಡಿಯನ್ ಯೂಥ್ ಸಂಘಟನೆಯಿಂದ ಪೊಲೀಸರಿಗೆ ರಾಖಿ ಕಟ್ಟಲಾಯಿತು.

ಬಾಗಲಕೋಟೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ ಭಾರತೀಯ ಯುವ ಸಂಘಟನೆಯ ಯುವಕ, ಯುವತಿಯರು ಸಿಬ್ಬಂದಿ ಕೈಗೆ ಸ್ನೇಹದ ದ್ಯೋತಕವಾಗಿ ರಕ್ಷೆ ಕಟ್ಟಿದರು. ಸಂಘಟನೆ ವತಿಯಿಂದ ಪೊಲೀಸರಿಗೆ ಬೆಂಬಲ ವ್ಯಕ್ತಪಡಿಸಿ, ಡಿಎಸ್​ಪಿ ಸೇರಿದಂತೆ ಎಲ್ಲ ಪೊಲೀಸ್ ಸಿಬ್ಬಂದಿಗೆ ರಾಖಿ ಕಟ್ಟಿ ಪೊಲೀಸ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಅತ್ಯಾಚಾರ ಮಾಡಿದ ಆರೋಪಿಗಳನ್ನು ಎನ್​ಕೌಂಟರ್ ಮಾಡುವ ಮೂಲಕ ಇಡೀ ದೇಶದಲ್ಲಿರುವ ಅತ್ಯಾಚಾರಿಗಳಿಗೆ ಎಚ್ಚರಿಕೆ ನೀಡಿದಂತಾಗಿದೆ ಎಂದು ವಿದ್ಯಾರ್ಥಿನಿ ಸಪ್ನಾ ರಾಥೋಡ ಈ ಸಂದರ್ಭದಲ್ಲಿ ತಿಳಿಸಿದರು.

Intro:AnchorBody:ಬಾಗಲಕೋಟೆ-- ಹೈದ್ರಾಬಾದ್ ನಲ್ಲಿ ಪ್ರೀಯಾಂಕ ಮೇಲೆ ಅತ್ಯಾಚಾರಿ ನಡೆಸಿದ ಆರೋಪಿಗಳ ಮೇಲೆ ಎನಕೌಂಟರ್ ನಡೆಸಿರುವ ಪೋಲೀಸರ ಕಾರ್ಯವನ್ನು ಯುವ ಸಂಘಟನೆ ಶ್ಲಾಘನೀಯ ವ್ಯಕ್ತಪಡಿಸಿದ್ದು,ಪೊಲೀಸ್ ಸಿಬ್ಬಂದಿಯವರಿಗೆ ರಾಖಿ ಕಟ್ಟಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಬಾಗಲಕೋಟೆ ನಗರದ ಜಿಲ್ಲಾ ಪೋಲೀಸ ವರಿಷ್ಟಾಧಿಕಾರಿ ಕಚೇರಿಗೆ ತೆರಳಿ ಯುವಕ,ಯುವತಿಯರು ಸಿಬ್ಬಂದಿಗಳ ಕೈ ಗೆ ಸ್ನೇಹ ದೂತಕವಾಗಿ ಕೈಗೆ ರಕ್ಷಾ ಬಂಧನ ಕಟ್ಟಿದರು
ಇಂಡಿಯನ್ ಯೂಥ್ ಸಂಘಟನೆ ವತಿಯಿಂದ ಪೊಲೀಸ್ ರಿಗೆ ಬೆಂಬಲ ವ್ಯಕ್ತಪಡಿಸಿ,ಡಿಎಸ್ ಪಿ ಸೇರಿದಂತೆ ಎಲ್ಲ ಸಿಬ್ಬಂದಿಗಳಿಗೆ ರಾಖಿ ಕಟ್ಟಿ ಪೊಲೀಸ್ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದರು. ಆರೋಪಗಳನ್ನು ಎನ್ ಕೌಂಟರ್ ಮಾಡುವ ಮೂಲಕ ಇಡೀ ದೇಶಕ್ಕೆ ಅತ್ಯಾಚಾರಿಗಳಿಗೆ ಎಚ್ಚರಿಕೆ ನೀಡಿದಂತಾಗಿದೆ ಎಂದು ಸಪ್ನಾ ರಾಥೋಡ ತಿಳಿಸಿದರು..
ಬೈಟ್-- ಸಪ್ನಾ ರಾಥೋಡ ( ವಿದ್ಯಾರ್ಥಿನಿ)Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.