ಬಾಗಲಕೋಟೆ : ಜಮಖಂಡಿ ತಾಲೂಕಿನ ಸಾವಳಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಗಾಂಜಾ ಸಮೇತ ಬಂಧಿಸಿದ್ದಾರೆ.
ಅಡಿಹುಡಿ ಗ್ರಾಮದ ಅಮಸಿದ್ದ ಗುರಪ್ಪ ಜೈನಾಪೂರ ಎಂಬ ವ್ಯಕ್ತಿ ಹಿರೇಪಡಸಲಗಿ ಗ್ರಾಮದ ಸರಹದ್ದಿನಲ್ಲಿ ಅಂದಾಜು
ಐದು ಸಾವಿರ ಮೌಲ್ಯದ ಅರ್ಧ ಕೆ.ಜಿ. ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಇದೇ ರೀತಿ ನಾಗನೂರ ಗ್ರಾಮದ ಸಾಗರ ಶ್ರವಣ ಹರಿಜನ (ಜಂಬಗಿ) ಎಂಬ ವ್ಯಕ್ತಿ 5500 ಮೌಲ್ಯದ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಸಾವಳಗಿ ಪೊಲೀಸರ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ.
ಹೀಗೆ ಸಾವಳಗಿ ಠಾಣೆಯ ಪೊಲೀಸರು ಅಕ್ರಮ ಗಾಂಜಾ ಪ್ರಕರಣದ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಅಭಯಕುಮಾರ ಮೊರಭ. ಸಾವಳಗಿ ಠಾಣೆಯ ಪಿ.ಎಸ್.ಐ. ಶೇಖರ ಎಸ್ ಘಾಟಗೆ, ಸಿಬ್ಬಂ ಎಸ್.ಎಸ್.ಬಿಳಗಿ, ಆರ್.ಎಸ್.ಬಸಣ್ಣವರ, ಎ.ಎ.ಬೈಗನಪಲ್ಲಿ, ಡಿ.ವ್ಹಿ.ಕುಂಬಾರ, ಎಸ್.ಎಸ್.ಹಳ್ಯಾಳ, ಎಮ್.ಎಸ್.ಕಾರಜೋಳ, ಎಮ್.ಸಿ.ಕುಡಗಿ, ಆರ್.ಎಸ್.ತಳವಾರ, ವಾಯ್.ಎಸ್.ಸನದಿ, ಪರಶುರಾಮ ಮಾಳಿ, ಲೆಕ್ಕಾಧಿಕಾರಿಗಳಾದ ಈಶ್ವರ ಹೊಸಲಕರ ಹಾಗು ಮುತ್ತಪ್ಪ ಜಂಗಮಶೆಟ್ಟಿ ಇದ್ದರು.