ETV Bharat / state

ನಾನು ಸಿಎಂ ಆಗಿದ್ದರೆ ಬಡವರಿಗೆ 10 ಸಾವಿರ ರೂ.ನೀಡುತ್ತಿದ್ದೆ : ಸಿದ್ದರಾಮಯ್ಯ

ನಾನೇನಾದರೂ ಸಿಎಂ ಆಗಿದ್ದರೆ, ಕೋವಿಡ್ ಸಮಯದಲ್ಲಿ ಬಡವರಿಗೆ 10 ಸಾವಿರ ರೂಪಾಯಿ ನೀಡುತ್ತಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

siddaramaiah
ಸಿದ್ದರಾಮಯ್ಯ
author img

By

Published : Oct 20, 2020, 5:42 PM IST

Updated : Oct 20, 2020, 5:55 PM IST

ಬಾಗಲಕೋಟೆ: ನಾನು ಮುಖ್ಯಮಂತ್ರಿ ಆಗಿದ್ದರೆ, ಕೊರೊನಾದಿಂದ ಸಂಕಷ್ಟದಲ್ಲಿರುವ ಬಡ ಜನತೆಗೆ ಹತ್ತು ಸಾವಿರ ರೂಪಾಯಿಗಳನ್ನು‌ ನೀಡುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಾದಾಮಿ ತಾಲೂಕಿನ ಕೆಂದೂರ ಗ್ರಾಮದಲ್ಲಿ ಪಂಚಾಯತ್ ಸೇರಿ ಇತರೆ ಕಾಮಗಾರಿಗಳ ಅಡಿಗಲ್ಲು ಸಮಾರಂಭ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಜನರ ಬಳಿ ದುಡ್ಡಿಲ್ಲದೆ ತೆರಿಗೆ ಹೇಗೆ ಕಟ್ಟುವುದು, ಅಂಗಡಿಗೆ ಹೋಗಿ ಸಾಮಗ್ರಿ ಖರೀದಿಸಿದ ನಂತರವೇ ತೆರಿಗೆ ವಸೂಲಿ ಆಗುವುದು ಅಲ್ವಾ? ಎಂದು ಪ್ರಶ್ನಿಸಿದರು.ಸಾರಾಯಿ ಅಂಗಡಿ ತೆರೆದು ಸರ್ಕಾರ ದುಡ್ಡು ಮಾಡಲು ಮುಂದಾಯಿತು. ಇಂಥ ಸಂದರ್ಭದಲ್ಲಿ ಮಹಿಳೆಯರೇ ಸಾಲಾಗಿ ನಿಂತು ಮದ್ಯ ಖರೀದಿಸಿದರು ಎಂದು ನಗೆ ಚಟಾಕಿ ಹಾರಿಸಿದರು.

ನಾನು ಸಿಎಂ ಆಗಿದ್ದರೆ ಬಡವರಿಗೆ 10 ಸಾವಿರ ರೂ.ನೀಡುತ್ತಿದ್ದೆ : ಸಿದ್ದರಾಮಯ್ಯ

ನಾನು ಸಿಎಂ ಆಗಿದ್ರೆ, ಬಾದಾಮಿ ಚಿತ್ರಣವೇ ಬೇರೆ ಇರುತ್ತಿತ್ತು. ನಾನು ಮೈಸೂರಿನವನಾಗಿದ್ದರೂ ನನ್ನನ್ನು ನೀವು ಗೆಲ್ಲಿಸಿದಿರಿ. ಆದರೆ ಮೈಸೂರಿನವರೇ ನನ್ನ ಸೋಲಿಸಿದರು. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾವೆಂದೂ ಬೆಲೆ ಕಟ್ಟಲು ಆಗಲ್ಲ. ನೀವು ಮಾಡಿರುವ ಉಪಕಾರ ಎಂದಿಗೂ ಮರೆಯಲಾಗಲ್ಲ. ನಾನೀಗ ಮೈಸೂರಿನವನಲ್ಲ, ಬಾಗಲಕೋಟೆಯ ಬಾದಾಮಿಯವನು. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಎಂದರು.

ಈ ವೇಳೆ ಒಪ್ಪತೇಶ್ವರ ಶ್ರೀಗಳು ಕೆಂದೂರ ಗ್ರಾಮವನ್ನ ಅಭಿವೃದ್ಧಿಪಡಿಸಿ ಪ್ರವಾಸಿ ತಾಣ ಮಾಡುವಂತೆ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.

Last Updated : Oct 20, 2020, 5:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.