ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿಯಿರುವ ಕೇದಾರನಾಥ ಸಕ್ಕರೆ ಕಾರ್ಖಾನೆಯ ಇಥೆನಾಲ್ ಘಟಕದ ಉದ್ಘಾಟಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಜ.17ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ಈ ವೇಳೆ ಸಕ್ಕರೆ ಕಾರ್ಖಾನೆಯ ಬಾಕಿ ಹಣ ಹಾಗೂ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಶಾ ಅವರಿಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಹೇಳಿದರು.
ರಬಕವಿಯ ಜಿಎಲ್‌ಬಿಸಿ ಆವರಣದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು. ಕೇದಾರನಾಥ ಸಕ್ಕರೆ ಕಾರ್ಖಾನೆ ಕಳೆದ 11 ವರ್ಷಗಳಿಂದ ರೈತರ ಬಾಕಿ ಹಣ ಹಾಗೂ ಬಿಲ್ ಕೊಟ್ಟಿಲ್ಲ. ದೆಹಲಿಯಲ್ಲಿ ರೈತ ಚಳವಳಿ ಪ್ರಾಂಭವಾಗಿ 2 ತಿಂಗಳು ಕಳೆದರೂ ಸ್ಪಂದಿಸಲು ಆಗುತ್ತಿಲ್ಲ. ಇಂತಹ ಮುಖ್ಯಮಂತ್ರಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಾಗಲಕೋಟೆ ರೈತರು ಧಿಕ್ಕಾರ ಕೂಗುತ್ತೇವೆ. ಜೊತೆಗೆ ಇಥೆನಾಲ್ ಘಟಕದ ಉದ್ಘಾಟನೆಗೂ ಮೊದಲು ರೈತರ ಬಾಕಿ ಕೊಡಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಓದಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವಾಗತಕ್ಕೆ ಸಕಲ ಸಿದ್ಧತೆ... ‘ಚಾಣಕ್ಯ’ನಿಂದ ಶಮನವಾಗುತ್ತಾ ಶಾಸಕರ ಅಸಮಾಧಾನ!?
ಭೂಸ್ವಾಧೀನ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಬೇಕು. ಯಾವುದೇ ಕಾರಣಕ್ಕೂ ರೈತ ವಿರೋಧಿ ಕಾಯ್ದೆಗಳನ್ನು ಅಂಗೀಕಾರ ಮಾಡಬಾರದು ಎಂದು ರೈತ ಸಂಘಗಳು ಚಳವಳಿ ಪ್ರಾರಂಭಿಸಿವೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.