ETV Bharat / state

ಕೃಷ್ಣಾ ನದಿಯಲ್ಲಿ ಸಾಹಸ... ಬೋಟ್​​​ಗಳಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ  ಕಬ್ಬು ಸಾಗಿಸಿದ ರೈತರು!

ಇಷ್ಟು ದಿನ ಒಂದೇ ಬೋಟ್​ನಲ್ಲಿ ಟ್ರ್ಯಾಕ್ಟರ್ ಸಾಗಿಸುತ್ತಿದ್ದ ರೈತರು, ಈ ಬಾರಿ ಕಡಿಮೆ ಹಣದಲ್ಲಿ ಹೆಚ್ಚು ಕಬ್ಬು ಸಾಗಿಸುವುದಕ್ಕೆ ಯೋಚನೆ ಮಾಡಿ, ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ.

farmers-transported-sugarcane-by-tractor-in-krishna-river
ಕೃಷ್ಣಾ ನದಿಯಲ್ಲಿ ಟ್ಯಾಕ್ಟರ್ ಮೂಲಕ ಕಬ್ಬು ಸಾಗಿಸಿದ ರೈತರು
author img

By

Published : Oct 27, 2022, 1:47 PM IST

ಬಾಗಲಕೋಟೆ: ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ರೈತರು ಬೋಟ್ ಮೂಲಕ ಕಬ್ಬು ತುಂಬಿಸಿದ ಟ್ರ್ಯಾಕ್ಟರ್ ಸಾಗಿಸಿ ಗಮನ ಸೆಳೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ, ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮ ಬಳಿ ಗುಹೇಶ್ವರ ನಡುಗಡ್ಡೆ ಇದೆ. ಈ ದಡದಿಂದ ಆ ಕಡೆಗೆ ಬೋಟ್​ನಲ್ಲಿಯೇ ಟ್ರ್ಯಾಕ್ಟರ್ ಮೂಲಕ ಸಾಗಿಸಲಾಗಿದೆ‌.

ಪ್ರತೀ ವರ್ಷ ಕೃಷ್ಣಾ ನದಿಯಲ್ಲಿ ಆರು ತಿಂಗಳ ಕಾಲ ನೀರು ನಿಲ್ಲುತ್ತದೆ. ಇದರಿಂದ ಈ ಪ್ರದೇಶ ನಡುಗಡ್ಡೆಯಾಗುತ್ತದೆ. ನಡುಗಡ್ಡೆ ಪ್ರದೇಶದಿಂದ ಕಾರ್ಖಾನೆಗೆ ಕಬ್ಬು ಸಾಗಿಸಲು ರೈತರು ಪತ್ರಿ ವರ್ಷ ಹರಸಾಹಸ ಪಡಬೇಕಾಗುತ್ತದೆ. ಎರಡು ಬೋಟ್ ಮೂಲಕ ಕಬ್ಬಿನ ಟ್ರ್ಯಾಕ್ಟರ್ ಸಾಗಿಸಲು ರೈತರು ವಿಭಿನ್ನ ಸಾಹಸ ಮಾಡುವ ಮೂಲಕ ಇತಿಹಾಸ ಬರೆದಿದ್ದಾರೆ. ಸುಮಾರು 5 ಟನ್ ಭಾರದ ಕಬ್ಬನ್ನು ಟ್ರ್ಯಾಕ್ಟರ್​ನಲ್ಲಿ ಏರಿಸಿದ್ದಾರೆ. ಎರಡು ಬೋಟ್ ಬಳಸಿ ಕಬ್ಬಿಣದ ಎಂಗಲ್ ಹಾಕಿ ಅದರ ಮೇಲೆ ಟ್ರ್ಯಾಕ್ಟರ್ ನಿಲ್ಲಿಸಿದ್ದಾರೆ.

ನಡುಗಡ್ಡೆಯಲ್ಲಿ ಸುಮಾರು 300 ಕುಟುಂಬಗಳ 700 ಎಕರೆ ಜಮೀನು ಇದೆ. ಪ್ರತೀ ವರ್ಷ ಬೋಟ್​ನಲ್ಲೇ ಲೋಡ್ ಮಾಡಿಕೊಂಡು ಕಬ್ಬು ಸಾಗಿಸುವುದು ಅನಿವಾರ್ಯವಾಗಿದೆ. ಆದರೆ, ಇಷ್ಟು ದಿನ ಒಂದೇ ಬೋಟ್​ನಲ್ಲಿ ಟ್ರ್ಯಾಕ್ಟರ್ ಸಾಗಿಸುತ್ತಿದ್ದ ರೈತರು, ಈ ಬಾರಿ ಕಡಿಮೆ ಹಣದಲ್ಲಿ ಹೆಚ್ಚು ಕಬ್ಬು ಸಾಗಿಸುವುದಕ್ಕೆ ಯೋಚನೆ ಮಾಡಿ, ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ.

ಒಂದು ಟನ್​ಗೆ 1 ಸಾವಿರ ಖರ್ಚು ಮಾಡಲಾಗುತ್ತಿತ್ತು. ಈಗ ಬೋಟ್​ನಲ್ಲಿ ಟ್ರ್ಯಾಕ್ಟರ್ ತರುವುದರಿಂದ ರೈತರಿಗೆ ಹಣ ಉಳಿಯುತ್ತಿದೆ. ಈ ಹಿನ್ನೆಲೆಯಲ್ಲಿ ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚ ಮಾಡಿ, ಕಬ್ಬು ಸಾಗಿಸುವುದಕ್ಕೆ ರೈತರು ಕಬ್ಬಿಣ ಎಂಗಲ್ ಮಾಡಿಸಿದ್ದಾರೆ. ಈ ಮೂಲಕ ಕಬ್ಬು ನಡುಗಡ್ಡೆಯಿಂದ ಗ್ರಾಮಕ್ಕೆ ತಂದು ಅಲ್ಲಿಂದ ಸಕ್ಕರೆ ಕಾರ್ಖಾನೆಗೆ ಸಾಗಿಸುತ್ತಾರೆ.

ಇಂತಹ ಸಾಹಸದಲ್ಲಿ ಆಕಸ್ಮಿಕವಾಗಿ ಏನಾದರೂ ಅನಾಹುತ ಸಂಭವಿಸಿದರೆ, ಸಾಕಷ್ಟು ತೊಂದರೆ ಆಗುತ್ತದೆ. ಆದರೆ, ರೈತರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆದರೂ ಏನಾದರೂ ಅನಾಹುತವಾದಲ್ಲಿ ಯಾರು ಜವಾಬ್ದಾರರು ಎನ್ನುವ ಪ್ರಶ್ನೆ ಮೂಡಿದೆ. ಸರ್ಕಾರ ಈ ನಡುಗಡ್ಡೆಯಿಂದ ಕಬ್ಬು ಸಾಗಿಸಲು ಹಾಗೂ ಜನರು ಹೋಗಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.

ಕೃಷ್ಣಾ ನದಿಯಲ್ಲಿ ಟ್ಯಾಕ್ಟರ್ ಮೂಲಕ ಕಬ್ಬು ಸಾಗಿಸಿದ ರೈತರು

ಇದನ್ನೂ ಓದಿ: ಜೀವದ ಹಂಗು ತೊರೆದು ಭೀಮಾ ನದಿ ದಾಟುತ್ತಿರುವ ಘತ್ತರಗಿ ಭಕ್ತರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.