ಬಾಗಲಕೋಟೆ: ವಿದ್ಯಾಗಿರಿಯ ಶಿವಗಿರಿ ಬಡಾವಣೆ ಮಿತ್ರ ಮಂಡಳಿ ವತಿಯಿಂದ ಪ್ರತಿಷ್ಠಾಪನೆ ಮಾಡಿರುವ ಗಣೇಶನ ಮೂರ್ತಿ ಎದುರು ಶ್ರೀಕೃಷ್ಣನ ಅವತಾರ ಸೃಷ್ಟಿ ಮಾಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ಬೃಹತ್ ಆಕಾರದ ಕೊಳಲು ನಿರ್ಮಾಣ ಮಾಡಿ, ಅದು ಕಂಗೊಳಿಸುವಂತೆ ಮಾಡಿದ್ದಾರೆ. ಬಾಲ ಕೃಷ್ಣ ಹಾಗೂ ಗೋ ಮಾತೆಯ ಚಿತ್ರವನ್ನು ನಿರ್ಮಾಣ ಮಾಡಿ, ಗಣೇಶನ ಮುಂದೆ ಬಾಲ ಕೃಷ್ಣ ತುಂಟಾಟ ಮಾಡುವ ಮಾದರಿಯಲ್ಲಿ ನಿರ್ಮಾಣ ಮಾಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಪ್ರತೀ ವರ್ಷ ಗಣೇಶ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಭೀತಿ ಹಿನ್ನೆಲೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ.