ETV Bharat / state

ಸೋಂಕಿತ ವ್ಯಕ್ತಿ ಅಲೆದಾಡಿದ ಹಿನ್ನೆಲೆ ಜಿಪಂ ಕಚೇರಿ ಬಂದ್ - ಬಾಗಲಕೋಟೆ ಲಾಕ್​ಡೌನ್​ ಸುದ್ದಿ 2020

ಇದೀಗ ಸೋಂಕಿತ ವ್ಯಕ್ತಿ ಜಿಲ್ಲಾ ಪಂಚಾಯತ್‌ನ ವಿವಿಧ ಕಚೇರಿಗಳಿಗೆ ಭೇಟಿ ನೀಡಿರುವ ಹಿನ್ನೆಲೆ ಸಿಬ್ಬಂದಿಗೆ ಆತಂಕ ಶುರುವಾಗಿದೆ..

District Panchayat Office Band at bhagalakote
ಜಿಲ್ಲಾ ಪಂಚಾಯತ್​
author img

By

Published : Jul 14, 2020, 7:02 PM IST

ಬಾಗಲಕೋಟೆ : ಜಿಲ್ಲೆಯಲ್ಲಿ ಕೊರೊನಾತಂಕ ಮುಂದುವರೆದಿದೆ. ಸೋಂಕಿತ ವ್ಯಕ್ತಿ ಅಲೆದಾಡಿರುವ ಹಿನ್ನೆಲೆ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ಇಂಜಿನಿಯರಿಂಗ್ ವಿಭಾಗದ ಕಚೇರಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯನ್ನು ಬಂದ್​ ಮಾಡಲಾಗಿದೆ.

ಜಿಲ್ಲಾ ಪಂಚಾಯತ್​ ಕಚೇರಿ ಬಂದ್

ಸೋಂಕಿತ ಗುತ್ತಿಗೆದಾರ ನಿನ್ನೆ ಜಿಲ್ಲಾ ಪಂಚಾಯತ್‌ನ ವಿವಿಧ ಕಚೇರಿಗಳಿಗೆ ಭೇಟಿ ನೀಡಿರುವುದರಿಂದ ಬೆಳಗ್ಗೆಯಿಂದಲೇ ಆತ ಸುಳಿದಾಡಿದ್ದ ಕಚೇರಿಗಳನ್ನು ಬಂದ್ ಮಾಡಲಾಗಿದೆ. ಪರಿಣಾಮ ಕಚೇರಿ ಸಿಬ್ಬಂದಿಗೆ ಆತಂಕ ಶುರುವಾಗಿದೆ.

ಜಿಲ್ಲಾಡಳಿತ ಭವನದಲ್ಲಿರುವ ಇಂಜಿನಿಯರಿಂಗ್ ವಿಭಾಗದ ಕಚೇರಿಗೆ ಸ್ಯಾನಿಟೈಸರ್​​ ಸಿಂಪಡಣೆ ಮಾಡಲಾಗಿದೆ. ಈವರೆಗೆ ಆತ ಎಲ್ಲೆಲ್ಲಿಗೆ ಹೋಗಿ ಬಂದಿದ್ದಾನೆಂದು ಪರಿಶೀಲನೆ ನಡೆಸಲಾಗುತ್ತಿದೆ. ಈ ಮಧ್ಯೆ ವಕ್ಫ್​ ಬೋರ್ಡ್​ನಲ್ಲಿ ಕೆಲಸ ಮಾಡುತ್ತಿದ್ದ ಕಂಪ್ಯೂಟರ್ ಆಪರೇಟರ್​ಗೂ ಸೋಂಕು ದೃಢ ಪಟ್ಟಿರುವ ಹಿನ್ನೆಲೆ, ಅಲ್ಪಸಂಖ್ಯಾತ ಕಲ್ಯಾಣ‌ ಇಲಾಖೆ ಕಚೇರಿ ಸಿಬ್ಬಂದಿಗೂ ಆತಂಕ ಶುರುವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.